ರಾಮದುರ್ಗ ಪಟ್ಟಣದಲ್ಲಿ ವಿಜಯ ಸೇನಾ ಸಮಿತಿ ವತಿಯಿಂದ ವಿಶೇಷವಾಗಿ ರಕ್ಷಾ ಸಂಸ್ಕಾರ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

WhatsApp Group Join Now

ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದ ಗಣೇಶ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಸಹೋದರ–ಸಹೋದರಿಯರ ಬಾಂಧವ್ಯವನ್ನು ಸಾರುವ ರಕ್ಷಾ ಸಂಸ್ಕಾರ ನೆರವೇರಿಸಲಾಯಿತು.

ಸಹೋದರಿಯರು ಮೊದಲು ಸಹೋದರರ ಹಣೆಗೆ ಕುಂಕುಮದ ತಿಲಕವಿಟ್ಟು, ದೀಪದಿಂದ ಆರತಿ ಬೆಳಗಿ ಶುಭ ಹಾರೈಸಿದರು. ಬಳಿಕ ಸಹೋದರನ ಬಲಗೈ ಮಣಿಕಟ್ಟಿಗೆ ಪವಿತ್ರವಾದ ರಾಖಿಯನ್ನು ಕಟ್ಟಿ ಸಹೋದರತ್ವದ ಸಂಕೇತವನ್ನು ಮೆರೆದರು.

ರಕ್ಷಾ ಸಂಸ್ಕಾರವು ಕೇವಲ ರಕ್ತಸಂಬಂಧಕ್ಕೆ ಸೀಮಿತವಲ್ಲ. ಸಮಾಜದಲ್ಲಿ ಪರಸ್ಪರ ಗೌರವ, ಪ್ರೀತಿ, ಸಹೋದರತ್ವ ಮತ್ತು ಸಾಮರಸ್ಯವನ್ನು ಬೆಳೆಸುವ ಸಾಮಾಜಿಕ ಸಂಸ್ಕಾರವಾಗಿದೆ.

ವಿಜಯ ಸೇನಾ ಸಮಿತಿ ವತಿಯಿಂದ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಹಲವರು ಭಾಗವಹಿಸಿ ರಕ್ಷಾ ಸಂಸ್ಕಾರದ ಮಹತ್ವವನ್ನು ಸಾರಿದರು.

ವಿಜಯ ಸೇನಾ ಸಮಿತಿ ಸಂಸ್ಥಾಪಕ ವಿಜಯ ನಾಯಕ ಮಾತನಾಡಿ,
“ರಕ್ಷಾಬಂಧನವು ಕೇವಲ ಹಬ್ಬವನ್ನು ಆಚರಿಸುವುದಕ್ಕಾಗಿ ಮಾತ್ರವಲ್ಲ. ಹೆಣ್ಣಿನ ಗೌರವ ಮತ್ತು ಸುರಕ್ಷತೆಯನ್ನು ಕಾಪಾಡಲು, ಸಮಾಜದಲ್ಲಿ ನಡೆಯುವ ಅನ್ಯಾಯಗಳ ವಿರುದ್ಧ ಹೋರಾಟ ಮಾಡಲು ಈ ಬಂಧನವು ಮತ್ತಷ್ಟು ಶಕ್ತಿ ನೀಡುತ್ತದೆ.

ಸಾಮಾಜಿಕವಾಗಿ ವಿಜಯ ಸೇನಾ ಸಮಿತಿ ನಿರ್ವಹಿಸುತ್ತಿರುವ ಕಾರ್ಯಗಳನ್ನು ಇನ್ನಷ್ಟು ಗಟ್ಟಿಯಾಗಿ ಮುಂದುವರಿಸಲು, ಈ ರಕ್ಷಾಬಂಧನದ ಬಂಧನವು ಪ್ರೇರಣೆ ನೀಡಲಿದೆ. ಸಮಾಜದಲ್ಲಿ ಸಹೋದರತ್ವ, ಗೌರವ ಮತ್ತು ಸಾಮರಸ್ಯವನ್ನು ಬೆಳೆಸುವ ನಿಟ್ಟಿನಲ್ಲಿ ವಿಜಯ ಸೇನಾ ಸಮಿತಿ ನಿರಂತರವಾಗಿ ಕಾರ್ಯನಿರ್ವಹಿಸಲಿದೆ,” ಎಂದು ಹೇಳಿದರು.
ಚೆನ್ನಮ್ಮ ವಿಜಯ ಸೇನೆ ಯ ಸಂಸ್ಥಾಪಕರು ಸೋನಾಕ್ಷಿ ವಿಜಯ ನಾಯ್ಕ್ ಎಲ್ಲರಿಗೂ ರಾಕಿ ಕಟ್ಟುವ ಮೂಲಕ ರಕ್ಷಾ ಸಂಸ್ಕಾರ ಆಚರಣೆ ಮಾಡಲಾಯಿತು.

About The Author