ಬೆಳಗಾವಿ ತಾಲೂಕಿನ ಸರ್ಕಾರಿ ಶಾಲೆಯ ವಿಶೇಷ ಚೇತನ ಮಕ್ಕಳಿಗೆ ಕಿಟ್ ವಿತರಣೆ – ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಶೈಕ್ಷಣಿಕ ಭವಿಷ್ಯ ಉಜ್ವಲಗೊಳಿಸಿಕೊಳ್ಳಿ -ರಾಹುಲ್ ಜಾರಕಿಹೊಳಿ
ಕಾಕತಿ (ಬೆಳಗಾವಿ ): ವಿಶೇಷ ಚೇತನ ಮಕ್ಕಳಿಗೆ ಸರ್ಕಾರ ವಿಶೇಷ ಕಾಳಜಿ ವಹಿಸಿ ಸರ್ಕಾರ ಮತ್ತು ಇತರೆ ಸಂಘ ಸಂಸ್ಥೆಗಳ ಸಹಕಾರದಿಂದ ವಿಶೇಷ ಚೇತನ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಸಹಾಯಕವಾಗುವ ವಿಶೇಷ ಚಿಟ್ಗಳನ್ನು ಬಡ ಸರಕಾರಿ ಶಾಲೆಯ ಮಕ್ಕಳಿಗೆ ಪ್ರತಿ ವರ್ಷ ವಿತರಿಸುತ್ತಿರುವುದು ಉತ್ತಮ ಕೆಲಸವಾಗಿದ್ದು ಈ ಸೌಲಭ್ಯಗಳನ್ನು ಸರುಪಯೋಗಪಡಿಸಿಕೊಂಡು ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿಗೊಳಿಸಿ ಮೂಲಸ್ಥರಕ್ಕೆ ತರಲು ಶಿಕ್ಷಕರು ಸೇರಿದಂತೆ ಪಾಲಕರು ಸಹ ಶ್ರಮವಹಿಸಬೇಕೆಂದು ಡಿಸಿಸಿ ಬ್ಯಾಂಕ್ ನಿರ್ದೇಶಕ ಯುವ ನಾಯಕ ರಾಹುಲ್ ಜಾರಕಿಹೊಳಿ ಶುಕ್ರವಾರ ದಿ. 28ರಂದು ಬೆಳಗಾವಿ ತಾಲೂಕಿನ ಕಾಕತಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಬೆಳಗಾವಿ ಗ್ರಾಮೀಣ ವಲಯದ ವತಿಯಿಂದ ಹಮ್ಮಿಕೊಳ್ಳಲಾದ ವಿಶೇಷ ಚೇತನ ಮಕ್ಕಳಿಗೆ ಅಗತ್ಯ ಕೆಟ್ಟ ವಿತರಣಾ ಕಾರ್ಯಕ್ರಮದಲ್ಲಿ ಕಿಟ್ ವಿತರಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಗ್ರಾಮೀಣ ಬಿಇಓ ಪುಂಡಲೀಕ ಚವಾಣ ಮಾತನಾಡಿ ವಿಶೇಷ ಚೇತನ ಮಕ್ಕಳ ಕುರಿತಾಗಿ ವಿಶೇಷ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಆ ನಿಟ್ಟಿನಲ್ಲಿ ಇಲಾಖೆಯ ವತಿಯಿಂದ ಶ್ರಮವಹಿಸಿ ಮಕ್ಕಳ ಪ್ರಗತಿಗಾಗಿ ಕಾಳಜಿ ವಹಿಸೋಣ ಎಂದರು. ಈ ಸಂದರ್ಭದಲ್ಲಿ ಬೈಸಿಕಲ್, ಶ್ರವಣ ಯಂತ್ರ, ವಾಕಿಂಗ್ ಕಿಟ್, ಸೇರಿದಂತೆ ಅಗತ್ಯವುಳ್ಳ ವಸ್ತು ಒಳಗೊಂಡ ಕಿಟ್ ಗಳನ್ನು ತಾಲೂಕಿನ 28 ಮಕ್ಕಳಿಗೆ ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಜಿ ಪಂ ಸದಸ್ಯ ಸಿದ್ಧ ಗೌಡ ಸುನಗಾರ,ಕೃಷ್ಣಾ ಕುರುಬರ,ಜಂಗಲಿಸಾಬ ನಾಯಿಕ, ಲಕ್ಷ್ಮಣ್ ಕೊಳೇಕರ, ಸಾಗರ್ ಫಿಂಗಟ,ಪಿಡಿ ಓ ರೇವತಿ ಸಿಂಗೆ,ಬಿ ಆರ್ ಸಿ ಡಾ. ದಾನಮ್ಮ ಜಳಕಿ, ಬಿ. ಎಂ. ಕುದ್ದುನವರ ಸೇರಿದಂತೆ ಮಕ್ಕಳ ಪಾಲಕರು ಮತ್ತು ವಿಶೇಷ ಚೇತನ ಮಕ್ಕಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಮುಖ್ಯ ಶಿಕ್ಷಕ ಗಿರೀಶ್ ಜಗತ್ತಿ ಸ್ವಾಗತಿಸಿದರು ಶಿವಾನಂದಲೂರ್ ನಿರೂಪಿಸಿದರು ಕೊನೆಯಲ್ಲಿ ಮುಖ್ಯ ಶಿಕ್ಷಕ ಅಶೋಕ ಖೋತ ವಂದಿಸಿದರು.



