ಲಿಂಗಾಯತ ಸಂಘಟನೆ ವತಿಯಿಂದ ಬಸವ ಜಯಂತಿ ಉತ್ಸವ ಸಮಿತಿ ಪದಾಧಿಕಾರಿಗಳಿಗೆ ಅಭಿನಂದನಾ ಸಮಾರಂಭ

WhatsApp Group Join Now

ಬೆಳಗಾವಿ : ಬಸವಣ್ಣನವರ ಆಚಾರ ವಿಚಾರಗಳನ್ನು ಪ್ರಚಾರಪಡಿಸುವುದಲ್ಲದೆ ಧಾರ್ಮಿಕವಾಗಿ ನಾವು ಜಾಗೃತಗೊಳ್ಳಲು ನಾವೆಲ್ಲ ಒಗ್ಗಟ್ಟಿನಿಂದ ಮುಂದೆ ಸಾಗಬೇಕಿದೆ ಬಸವ ಜಯಂತಿ ಉತ್ಸವದ ಮೂಲಕ ನಾವೆಲ್ಲ ಒಂದಾಗಿದ್ದೇವೆ ಈ ನಿಟ್ಟಿನಲ್ಲಿ ಮುಂದೆ ಸಾಗಿದಾಗ ಮಾತ್ರ ಧರ್ಮದ ಜಾಗೃತಿ ಸಾಧ್ಯ ಎಂದು ಸಂಘಟನೆ ಅಧ್ಯಕ್ಷ ಈರಣ್ಣ ದೇಯನ್ನವರ ರವಿವಾರ ದಿ ೧೧ ರಂದು ಬೆಳಗಾವಿಯ ಹಳಕಟ್ಟಿ ಭವನದಲ್ಲಿ ಲಿಂಗಾಯತ ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾದ ಲಿಂಗಾಯತ ಸಂಘಟನೆಗಳ ಒಕ್ಕೂಟದ ಬಸವ ಜಯಂತಿ ಉತ್ಸವ ಸಮಿತಿಯ ಪದಾಧಿಕಾರಿಗಳ ಅಭಿನಂದನಾ ಸಮಾರಂಭದಲ್ಲಿ ಪದಾಧಿಕಾರಿಗಳನ್ನು ಸತ್ಕರಿಸಿ ಮಾತನಾಡಿದರು. ಸಮಾಜದ ಮುಖಂಡರು ಎಂ ಪಿ ಫೌಂಡೇಶನ್ ಅಧ್ಯಕ್ಷ ಮುರುಗೇದ್ರಗೌಡ ಪಾಟೀಲ ಮಾತನಾಡಿ ಸಮಾಜದ ಬೇಕು ಬೇಡಿಕೆಗಳಿಗೆ ಮಾನ್ಯತೆ ಸಿಗಲು ನಾವೆಲ್ಲ ಒಗ್ಗೂಡುವುದರ ಮೂಲಕ ಪಕ್ಷಾತೀತವಾಗಿ ರಾಜಕೀಯದಲ್ಲಿ ಸಮಾಜದ ಮುಖಂಡರು ಸ್ಥಾನಮಾನ ಪಡೆಯುವ ನಿಟ್ಟಿನಲ್ಲಿ ಒಗ್ಗಟ್ಟು ಪ್ರದರ್ಶನ ಮಾಡಬೇಕಿದೆ. ರಾಜಕೀಯವಾಗಿ ಗಟ್ಟಿತನ ಬಂದಾಗ ಮಾತ್ರ ಸಮಾಜ ಏಳಿಗೆ ಸಾಧ್ಯ ಎಂದರು. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿ ಬೆಳಗಾವಿ ಜಿಲ್ಲೆಯ ಸಾಮಾಜಿಕ ಒಗ್ಗಟ್ಟು ರಾಜ್ಯಕ್ಕೆ ಮಾದರಿಯಾಗುವುದಲ್ಲದೆ ಸಮಾಜಕ್ಕೂ ಶೋಭೆ ತಂದಿದೆ ಎಂದರು. ಅಶೋಕ ಮಳಗಲಿ ಮಾತನಾಡಿ ಒಂದಾದರೆ ಮಾತ್ರೆ ಸಾಲದು ಮಕ್ಕಳಲ್ಲಿ ಯುವ ಜನತೆಯಲ್ಲಿ ಧರ್ಮ ಜಾಗೃತಿ ಉಂಟು ಮಾಡಲು ಪ್ರಯತ್ನ ಮಾಡೋಣ ಎಂದರು. ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಗುಂಡು ಪಾಟೀಲ ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಹುಕ್ಕೇರಿಯಲ್ಲಿ ಎತ್ತುಗಳ ಮೆರವಣಿಗೆ,ರೈತರಿಗಾಗಿ ಕಾರ್ಯಕ್ರಮಗಳು ಸೇರಿದಂತೆ ಧರ್ಮ ಜಾಗೃತಿಗಾಗಿ ಬಸವ ತತ್ವದ ಪ್ರಚಾರಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಮುಂಬರುವ ದಿನಗಳಲ್ಲಿ ಹೆಚ್ಚಾಗುವನಿಟ್ಟಿನಲ್ಲಿ ಪ್ರಯತ್ನ ಮಾಡೋಣ ಎಂದರು.ನಗರ ಸೇವಕ ರಾಜಶೇಖರ ಧೋನಿ ಮಾತನಾಡಿ ಪಂಗಡಗಳು ಒಳ ಪಂಗಡಗಳು ಹೆಚ್ಚಿದಂತೆ ಸಮಾಜ ದ ಬಲ ಕಡಿಮೆಯಾಗುತ್ತಾ ಹೋಗುತ್ತದೆ ಅದಕ್ಕಾಗಿ ನಾವೆಲ್ಲ ಒಂದಾಗಿರುವುದು ಸೂಕ್ತವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಶಂಕರ ಗುಡಸ,ಬಾಲಚಂದ್ರ ಬಾಗಿ ಮನೋಹರ ಪುಡಕಲಕಟ್ಟಿ ರಮೇಶ ಕಳಸನ್ನವರ, ಸೇರಿದಂತೆ ಅನೇಕ ಮುಖಂಡರು ಬಸವ ಜಯಂತಿ ಅತ್ಯಂತ ಯಶಸ್ವಿಯಾಗಿ ಒಟ್ಟಾಗಿ ಆಚರಿಸಿದ್ದರ ಕುರಿತು ಹಂಚಿಕೊಂಡರು. ಇದೇ ಸಂದರ್ಭದಲ್ಲಿ ಬಸವ ಜಯಂತಿಯನ್ನು ಕಳೆದೆರಡು ವರ್ಷಗಳಿಂದ ಒಗ್ಗಟ್ಟಾಗಿ ಆಚರಿಸಲು ಶ್ರಮವಹಿಸಿದ ಒಕ್ಕೂಟದ ಎಲ್ಲಾ ಮುಖಂಡರನ್ನು ಲಿಂಗಾಯತ ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವಿ ಕೆ ಪಾಟೀಲ, ವಿರುಪಾಕ್ಷ ದೊಡಮನಿ, ಎಂ ವೈ ಮೆಣಸಿನಕಾಯಿ, ಬಿ.ಪಿ. ಜೆವಣಿ, ಶಿವಾನಂದ ತಲ್ಲೂರ, ಬಸವರಾಜ ಕರಡಿಮಠ, ಮ.ಬ.ಕರಿಕಟ್ಟಿ,ಬಸವರಾಜ ಬಿಜ್ಜರಗಿ, ಆನoದ ಕರಕಿ,ಮಹದೇವ ಕೆoಪಿಗೌಡರ,ಶ್ರೀದೇವಿ ನರಗುಂದ, ಶೋಭಾ ದೇಯನ್ನವರ, ಕಮಲಾ ಗಣಾಚಾರಿ,ಸೇರಿದಂತೆ ಶರಣರು ಉಪಸ್ಥಿತರಿದ್ದರು ಕಾರ್ಯಕ್ರಮದ ಆರಂಭದಲ್ಲಿ ಸುರೇಶ ನರಗುoದ ಪ್ರಾಥ೯ನೆ ನಡಿಸಿ ಕೂಟ್ಟರು ಶಂಕರ ಶೆಟ್ಟಿ ದಾಸೋಹ ಸೇವೆ ಸಲ್ಲಿಸಿದರು ಸಂಗಮೇಶ ಅರಳಿ ಸ್ವಾಗತಿಸಿದರು ಸತೀಶ ಪಾಟೀಲ ನಿರೂಪಿಸಿದರು ಸದಾಶಿವ ದೇವರಮನಿ ವಂದಿಸಿದರು.

About The Author