9 ನೇಯ ದಿನದ ಕಬ್ಬು ಬೆಳೆಗಾರರ ಪ್ರತಿಭಟನೆಗೆ ಸಾಥ್ ನೀಡಿದ ಚುನ್ನಪ್ಪ ಪೂಜಾರಿ!

WhatsApp Group Join Now

ಟನ್ ಕಬ್ಬಿಗೆ 3600 ರೂ. ಗೆ ರೈತರ ಪಟ್ಟು!

ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಹಾಗೂ ಜಿಲ್ಲಾಡಳಿತಕ್ಕೆ 2 ದಿನ ಗಡವು ಕೊಟ್ಟ ಚುನ್ನಪ್ಪ ಪೂಜಾರಿ!

ವರದಿ:ಕಾಡಸಿದ್ಧ ಎಸ್ ಕಟ್ಟಿಮನಿ

ಅಫಜಲಪೂರ:ತಾಲೂಕಿನ ಚೌಡಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆಯುತ್ತಿರುವ ಕಬ್ಬು ಬೆಳೆಗಾರರ ಪ್ರತಿಭಟನೆ ದಿನದಿಂದ ದಿನಕ್ಕೆ ರೈತರ ಆಕ್ರೋಶಕ್ಕೆ ಕಾರಣವಾಗುತ್ತಿದೆ. ಕಬ್ಬಿನ ದರ ನಿಗದಿ ಸಂಬಂಧ ರೈತರು ಭಾನುವಾರ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಚುನ್ನಪ್ಪ ಪೂಜಾರಿಯವರ ಮುಂದೆ ತಮ್ಮ ಶಕ್ತಿ ಪ್ರದರ್ಶಿಸಿದರು. ಚೌಡಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಪಾರ ಜನಸಂಖ್ಯೆಯಲ್ಲಿ ಭಾಗವಹಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷರಾದ ಚುನ್ನಪ್ಪ ಪೂಜಾರಿಯವರು, ಬೆಳಗಾವಿಯಲ್ಲಿ ನಿಗದಿಯಾಗಿರುವ ಪ್ರತಿ ಟನ್ ಕಬ್ಬಿಗೆ 3600 ರೂ. ಬೆಲೆ ನೀಡುವಲ್ಲಿ ಕಲಬುರಗಿ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಎಂದು ಚುನ್ನಪ್ಪ ಪೂಜಾರಿ ಅಸಮಾಧಾನ ವ್ಯಕ್ತಪಡಿಸಿದರು.
ಇದೇ ವೇಳೆ ರೈತರ ದರ ನಿಗದಿ ವಿಚಾರದಲ್ಲಿ ಕಾರ್ಖಾನೆಯವರ ನಿಲುವು ಬದಲಾಗದಿದ್ದರೆ ದರ ನೀಡದಿದ್ದರೆ ಈ ಭಾಗದ ಸಕ್ಕರೆ ಕಾರ್ಖಾನೆಗೆ ಯಾವ ರೈತರು ಕಬ್ಬು ನೀಡಲ್ಲ ಎಂದು ಚುನ್ನಪ್ಪ ಪೂಜಾರಿಯವರು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ.

9 ನೇಯ ದಿನವೂ ರೈತರು ರಸ್ತೆ ಬಿಟ್ಟಿಲ್ಲ!

9 ದಿನಗಳಿಂದ ಚೌಡಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ರೈತರು ಪ್ರತಿಭಟನೆ ನಡೆಸಿದರು. ಮನೆ, ಕುಟುಂಬ, ಕೃಷಿ ಕೆಲಸಗಳನ್ನು ಬದಿಗಿಟ್ಟು ರೈತರು ಬಿದಿಗಿಳಿದಿದ್ದಾರೆ.
ಕಬ್ಬಿಗೆ ನ್ಯಾಯಯುತ ಹಾಗೂ ಏಕರೂಪದ ದರ ನಿಗದಿಯಾಗುವವರೆಗೆ ಪ್ರತಿಭಟನೆದಿಂದ ಹಿಂದೆ ಸರಿಯುವುದಿಲ್ಲ ಎಂಬುದು ಪ್ರತಿಭಟನಾಕಾರರ ದೃಢ ನಿಲುವಾಗಿದೆ ಎಂದು ಚುನ್ನಪ್ಪ ಪೂಜಾರಿ ಹೇಳಿದರು.

“9 ದಿನಗಳಿಂದ ಶಾಂತಿಯುತವಾಗಿ ಹೋರಾಟ ನಡೆಸುತ್ತಿದ್ದೇವೆ. ನಮ್ಮ ಬೇಡಿಕೆಗಳನ್ನು ನಿರ್ಲಕ್ಷಿಸಿದರೆ ಪ್ರತಿಭಟನೆಯನ್ನು ತೀವ್ರಗೊಳಿಸುವುದು ಅನಿವಾರ್ಯವಾಗುತ್ತದೆ. ನ್ಯಾಯ ಸಿಗುವವರೆಗೂ ಪ್ರತಿಭಟನೆ ನಿಲ್ಲುವುದಿಲ್ಲ.

ಶಿವಕುಮಾರ ನಾಟಿಕಾರ
ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರು”.

ರೈತರ ಬೇಡಿಕೆಗಳು :
1).ಪ್ರತಿ ಟನ್ ಕಬ್ಬಿಗೆ 3600 ರೂ.ದರ ನಿಗದಿ.
2).ರಾಜ್ಯಾದ್ಯಂತ ಏಕರೂಪದ ಕಬ್ಬಿನ ಬೆಲೆ ಜಾರಿ.
3).ರಾಜ್ಯ ಸರಕಾರದಿಂದ ಹೆಚ್ಚುವರಿ ಪ್ರೋತ್ಸಾಹ ಧನ,
ಹಾಗೂ ಕಬ್ಬಿನ ತೂಕದಲ್ಲಿ ಪಾರದರ್ಶಕತೆ.
4).ಕಟಾವು ಹಾಗೂ ಸಾಗಣೆ ವೆಚ್ಚಕ್ಕೆ ನ್ಯಾಯಯುತ ಪರಿಹಾರ.
5).ಕಾರ್ಖಾನೆಗಳಿಂದ ರೈತರಿಗೆ ಸಕಾಲದಲ್ಲಿ ಹಣ ಪಾವತಿ.
ರೈತರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ತಕ್ಷಣ ಮಧ್ಯ ಪ್ರವೇಶಿಸಬೇಕು.
ಭರವಸೆ ಬೇಡ ರೈತರಿಗೆ ನ್ಯಾಯ ಸಿಗುವವರೆಗೆ ಹೋರಾಟ ಮುಂದುವರೆಸುವ ಎಚ್ಚರಿಕೆ ಪ್ರತಿಭಟನಾಕಾರರು ನೀಡಿದ್ದಾರೆ.

ಸತತ 9 ದಿನಗಳಿಂದ ಟೆಂಟ್ ವ್ಯವಸ್ಥೆ!

ಚೌಡಾಪೂರ ಗ್ರಾಮದ ಅವಧೂತ ಶರಣು ಕಂಟೆಗೋಳ್ ಅವರು ಸತತ 9 ದಿನಗಳಿಂದ ಟೆಂಟ್ ಹಾಗೂ ಸ್ಪೀಕರ್ ವ್ಯವಸ್ಥೆ ಮಾಡಿ ಮಾನವೀಯತೆ ಮೆರೆದರು.

ರಾಷ್ಟ್ರಿಯ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಕೆಲವು ಗಂಟೆಗಳ ಕಾಲ ಪರದಾಡಿದರು.
ರಾಷ್ಟ್ರೀಯ ಹೆದ್ದಾರಿಯಲ್ಲಿ ದೇವಲ್ ಗಾಣಗಾಪೂರ ಪೊಲೀಸ್ ಠಾಣೆ ಪಿಎಸ್ಐ ಕುಮಾರಿ ಸಂಗೀತಾ ಶಿಂಧೆ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷರಾದ ಶಿವಕುಮಾರ ನಾಟಿಕಾರ, ಸಿದ್ದರಾಮ ದಣ್ಣೂರ, ಮಹೇಶ್ ಸುಬೆದಾರ, ಸಂತೋಷ ಮಲಗೊಂಡ, ಸೈಬಣ್ಣ ಜಮಾದಾರ,ದತ್ತು ಜಮಾದಾರ, ರಾಜು ಜಮಾದಾರ,ದತ್ತಣ್ಣ ಶೇಂಡಗೆ ಹಾಗೂ ಮಾಳಪ್ಪ ಪೂಜಾರಿ ಹೂವಿನಹಳ್ಳಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

About The Author