ಸಮೀರವಾಡಿ ಸಕ್ಕರೆ ಕಾರ್ಖಾನೆ ಪ್ರಸಕ್ತ ಸಾಲಿನ ಕಬ್ಬು ನುರಿಸುವಹಂಗಾಮಿಗೆ ವಿದ್ಯುಕ್ತವಾಗಿ ಚಾಲನೆ ಪ್ರತಿ ಟನ್ ಕಬ್ಬಿಗೆ 3800 ಘೋಷಣೆ ಬಿ ಆರ್ ಬಕ್ಷಿ.

WhatsApp Group Join Now

ಹಳ್ಳೂರ ಸಮೀಪದ ಸಮೀರವಾಡಿ ಗೋದಾವರಿ ಬಯೋರಿಪೈನರಿಜ್ ಲಿಮಿಟೆಡ್’ ಸಕ್ಕರೆ ಕಾರ್ಖಾನೆ ಪ್ರಸಕ್ತ ಹಂಗಾಮಿನಲ್ಲಿ ಅತೀ ಹೆಚ್ಚು ಕಬ್ಬು ನುರಿಸುವ ಗುರಿ ಇಟ್ಟುಕೊಳ್ಳಲಾಗಿದ್ದು, ಕಬ್ಬು ಬೆಳೆಗಾರರು ಕಳೆದ 54 ವರ್ಷಗಳಿಂದ ಸಹಕಾರ ನೀಡಿದಂತೆ ಪ್ರಸಕ್ತ ಸಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗುಣ ಮಟ್ಟದ ಕಬ್ಬು ಪೂರೈಕೆ ಮಾಡಿ ಸಹಕರಿಸಬೇಕು ಪ್ರತಿ ಮೆ ಟನ್’ ಕಬ್ಬಿಗೆ 3800 ರೂ ನೀಡಲಾಗುವುದೆಂದುಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ ಆರ್ ಬಕ್ಷಿ ಹೇಳಿದರು.

ಅವರು ಸಮೀರವಾಡಿ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಶುಕ್ರವಾರ ನಡೆದ 2026-27 ನೇ ಸಾಲಿನ ಕಬ್ಬು ಅರೆಯುವ ಹಂಗಾಮ ಪ್ರಾರಂಭೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪ್ರಸ್ತುತ ಹಂಗಾಮಿನಲ್ಲಿ ಬರಗಾಲವಿದ್ದ ಕಾರಣ ಕಬ್ಬಿನ ಅಭಾವ ಎದ್ದು ಕಾಣುತ್ತಿದ್ದು, ಈಗಾಗಲೇ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ಕಬ್ಬು ಕಟಾವು ಗ್ಯಾಂಗ್ ವ್ಯವಸ್ಥೆ ಮಾಡಲಾಗಿದೆ. ರೈತರು ಸಂಪೂರ್ಣ ಸಹಕಾರ ನೀಡಬೇಕೆಂದು ಹೇಳಿದರು.

ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕ ಕಾರ್ಯಗಳ ಅಧಿಕಾರಿಗಳಾದ ದಿನೇಶ್ ಶರ್ಮಾ ಮಾತನಾಡಿ ರೈತ ಬಾಂದವರು ತಮ್ಮ ಅಮೂಲ್ಯವಾದ ಕಬ್ಬನ್ನು ಕಾರ್ಖಾನೆಗೆ ನೀಡಿ ಸಹಕರಿಸಬೇಕು ರೈತರ ಎಳ್ಗೆಯೇ ನಮ್ಮ ಗುರಿ ರೈತರ ವಿಶ್ವಾಸವೇ ನಮ್ಮ ಶಕ್ತಿ ಸಮೀರವಾಡಿ ಸಕ್ಕರೆ ಕಾರ್ಖಾನೆಯೊಂದಿಗೆ ರೈತರ ಸೌಹಾರ್ದತೆ ಬಾಂದವ್ಯವು ಸದಾ ಸ್ಮರಿಣಿಯವಾಗಿದೆ ರೈತರ,ಕಾರ್ಮಿಕರ ಪ್ರೀತಿ ವಿಶ್ವಾಸವೂ ನಿರಂತರವಾಗಿರಲಿ ಕಾರ್ಖಾನೆ ಪ್ರಗತಿಗೆ ಆಡಳಿತ ಮಂಡಳಿ ರೈತ ಬಾಂಧವರ ತಮ್ಮ ಸಹಕಾರವಿರಲಿ ಕಾರ್ಖಾನೆಯು ರೈತರಿಗೆ ಒಳ್ಳೆಯ ಸಹಾಕರ ನೀಡುತ್ತಿದೆ ಎಂದು ಹೇಳಿದರು.

ಕೆನ್ ಕ್ಯಾರಿಯರ್ ಹೋಮವನ್ನು ಕಬ್ಬು ವಿಭಾಗದ ಅಧಿಕಾರಿ ವಿ ಎಸ್ ಕಣಬುರ್. ಹಾಗೂ ಸಿನಿಯರ ಡೆಪ್ಯುಟಿ ಜನರಲ್ ಮ್ಯಾನೇಜರ್ ನಿರ್ಮಲ ಜಾ ದಂಪತಿಗಳು ನೆರವೇರಿಸಿದರು.

ಈ ಸಮಯದಲ್ಲಿ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಾಮನಗೌಡ ಪಾಟಿಲ.ಉಪಾಧ್ಯಕ್ಷ ರಂಗನಗೌಡ ಪಾಟಿಲ.ಮಜದೂರ ಯುನಿಯನ್ ಅಧ್ಯಕ್ಷ ರವಿ ಕುರಬರ. ಆಡಳಿತ ಅಧಿಕಾರಿಗಳಾದ ಎಂ ರಾಮಚಂದ್ರ. ವಿ ಕೆ ಕಿಲಾರಿ. ಸೂರ್ಯಬಾಬು. ಡಿ ಜೆ ಎಂ ಅಮಿತ ತ್ರಿಪಾಠಿ.ಅಶೋಕ ಗುಣದಾಳ. ಆರ್ ಐ ಬಾಗೋಜಿ.ಆನಂದ ಕೋಟಬಾಗಿ.ಆರ್ ವಿ ಸೋನವಾಲ್ಕರ. ಲಕ್ಷ್ಮಣ ಹುಚರರಡ್ಡಿ. ಬಿ ಜಿ ಹೊಸೂರ. ಬುಜುಬುಲಿ ಕೆಂಗಾಲಿ. ಮಹಾಲಿಂಗ ಸನದಿ.ಹನುಮಂತ ತೇರದಾಳ. ಮಲ್ಲನ ಪಾಟೀಲ. ಮಲ್ಲಪ್ಪ ಅಂಗಡಿ. ಲಕ್ಷ್ಮಣ ಕತ್ತಿ.ಅಡಿವೆಪ್ಪ ಪಾಲಬಾಂವಿ.ಮುರಿಗೆಪ್ಪ ಮಾಲಗಾರ.ರಮೇಶ್ ಕಲ್ಲಾರ.ಪರಶುರಾಮ ಚಿನಗುಂಡಿ. ಸಂಗಪ್ಪ ಮಿರ್ಜಿ. ತಮ್ಮಣ್ಣ ನಾಯ್ಕ್.ಮಲ್ಲಿಕಾರ್ಜುನ ತೇಲಿ.ಮಾದೇವ ಮಾರಾಪುರ.ಶಿವಲಿಂಗ ಕೌಜಲಗಿ. ಎಂ ಬಿ ಪಾಟಿಲ.ಸೇರಿದಂತೆ
ಕಾರ್ಮಿಕರು, ಸಿಬ್ಬಂದಿಗಳು ಬಾಗಲಕೋಟ ಹಾಗೂ ಬೆಳಗಾವಿ ಜಿಲ್ಲೆಯ ರೈತರು,ಮಹಿಳೆಯರು ಪಾಲ್ಗೊಂಡಿದ್ದರು.

About The Author