ಭಾರತ ವಿರೋಧಿ ನಡೆ: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝು ಪದಚ್ಯುತಿ ಪ್ರಕ್ರಿಯೆಗೆ ಚಾಲನೆ!
ಮಾಲಿ(ಮಾಲ್ಡೀವ್ಸ್): ಮಾಲ್ಡೀವ್ಸ್ ಸಂಸತ್ತಿನಲ್ಲಿ ಬಹುಮತ ಹೊಂದಿರುವ ಪ್ರಮುಖ ವಿರೋಧ ಪಕ್ಷವಾದ ಮಾಲ್ಡೀವಿಯನ್ ಡೆಮಾಕ್ರೆಟಿಕ್ ಪಾರ್ಟಿ(MDP), ಅಧ್ಯಕ್ಷ ಮೊಹಮ್ಮದ್ ಮುಯಿಝು ವಿರುದ್ಧ ಮಹಾಭಿಯೋಗ ಅಂದರೆ ಇಂಪೀಚ್‌ಮೆಂಟ್ ನಿರ್ಣಯವನ್ನು ಸಲ್ಲಿಸಲು ಸಜ್ಜಾಗಿದೆ. ನಿನ್ನೆ ಭಾನುವಾರ ಚೀನಾ ಪರ ಒಲವಿರುವ ಮೊಹಮ್ಮದ್ ಮುಯಿಝು ಸಂಪುಟಕ್ಕೆ ಅಟಾರ್ನಿ ಜನರಲ್ ಅಹ್ಮದ್ ಉಶಮ್, ಆರ್ಥಿಕ ಸಚಿವ ಮೊಹಮ್ಮದ್ ಸಯೀದ್, ವಸತಿ ಸಚಿವ ಅಲಿ ಹೈದರ್ ಮತ್ತು ಇಸ್ಲಾಮಿಕ್ ಸಚಿವ ಡಾ. ಮೊಹಮ್ಮದ್ ಶಹೀಮ್ ಅಲಿ ಸಯೀದ್ ಅವರನ್ನು ಸೇರಿಸಿಕೊಳ್ಳುವ ವಿಚಾರವಾಗಿ ಸಂಸತ್ತಿನಲ್ಲಿ ವಾಗ್ವಾದ ನಡೆದಿದ್ದು ಅಲ್ಲದೆ…
