ಸರ್ಕಾರಿ ಪ್ರೌಢಶಾಲೆ ಕಗಧಾಳದಲ್ಲಿ ಹಮ್ಮಿಕೊಂಡ ಕನಕದಾಸರ 538 ನೆಯ ಜಯಂತಿ
ನಮ್ಮ ನಾಡು ಕಂಡ ಶ್ರೇಷ್ಠ ದಾರ್ಶನಿಕ,ಕವಿ,ಸಂತ ಕನಕದಾಸರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಹ ಸವದತ್ತಿ ಕರೆನೀಡಿದರು. ಸರ್ಕಾರಿ ಪ್ರೌಢಶಾಲೆ ಕಗಧಾಳದಲ್ಲಿ ಹಮ್ಮಿಕೊಂಡ ಕನಕದಾಸರ 538 ನೆಯ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾಜದಲ್ಲಿರುವ ಜಾತೀಯತೆ, ತಾರತಮ್ಯ ಹೋಗಲಾಡಿಸಲು ಕನಕದಾಸರ ಪಟ್ಟ ಪ್ರಯತ್ನ ಅವಿಸ್ಮರಣೀಯ ಎಂದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡಿ ಭಾರತದಲ್ಲಿ ಆಗಿ ಹೋದ ಶ್ರೇಷ್ಠ ಸಮಾಜ ಸುಧಾರಕರ ಸಾಲಿನಲ್ಲಿ ಕನಕದಾಸರು ಅಗ್ರಗಣ್ಯರು.ಸಾಹಿತ್ಯ ಕ್ಷೇತ್ರಕ್ಕೆ ಸುಮಾರು…
