Prashanth Angadi

ರಾಮದುರ್ಗ ಪಟ್ಟಣದಲ್ಲಿ ಎಂಎಸ್ ಐ ಎಲ್ ಮಳಿಗೆಗೆ ಕನ್ನ ಹಾಕಿದ ಕದೀಮರು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಎಂಎಸ್ ಐ ಎಲ್ ಮಳಿಗೆಗೆ ಕನ್ನ ಹಾಕಿದ ಘಟನೆ ರಾಮದುರ್ಗ ಪಟ್ಟಣದಲ್ಲಿ ಜರುಗಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ಮಧ್ಯ ಸೇರಿದಂತೆ ಸಿ ಸಿ ಕ್ಯಾಮರಾಗಳು ಹಾಗೂ ಡಿವಿಆರ್ ನ್ನ ಖದೀಮರು ಕದ್ದೋಯಿದ್ದಾರೆ. ಇನ್ನು ವಿಷಯ ತಿಳಿಯುತ್ತಿದ್ದಂತೆ ರಾಮದುರ್ಗ ಪಿಎಸ್ ಐ ಸವಿತಾ ಮುನ್ಯಾಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಖದೀಮರ ಶೋಧನೆಗಾಗಿ ಜಾಲ ಬೀಸಿದ್ದಾರೆ. ಇನ್ನು ಅಂಗಡಿ ಕಳುವಿನ. ಮೌಲ್ಯ ಪೊಲೀಸ ತನಿಖೆಯಿಂದ ತಿಳಿಯಬೇಕಾಗಿದೆ

Read More

ಆಫೀಯಾ ನೇಸರಿಕರ ರವರನ್ನು ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡುವ ಸಮಾರಂಭ.

ಸವದತ್ತಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರಾದ ಶ್ರೀಮತಿ ಆಫೀಯಾ ನೇಸರಿಕರ ಇವರು ಖಾನಾಪುರಕ್ಕೆ ವರ್ಗಾವಣೆಗೊಂಡು ಹೋಗುವಾಗ ಸವದತ್ತಿ ವಕೀಲರ ಸಂಘದಿಂದ ಆತ್ಮೀಯವಾಗಿ ಬೀಳ್ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜೆ ಬಿ ಮುನವಳ್ಳಿ, ಉಪಾಧ್ಯಕ್ಷರಾದ ಶೀ ಎಂ ಎಸ್ ಹುಬ್ಬಳ್ಳಿ, ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಎಸ್ ಎಸ್ ಕಾಳಪ್ಪನವರ ಹಾಗೂ ಮಹಿಳಾ ಪ್ರತಿನಿಧಿಯಾದ ಶ್ರೀಮತಿ ಸಾವಿತ್ರಿ ಶಿಭಾರಗಟ್ಟಿ, ಮತ್ತು ಹೆಚ್ಚುವರಿ ನ್ಯಾಯಾಲಯದ ಸಹಾಯಕ ಸರ್ಕಾರಿ ಅಭಿಯೋಜಕ ರಾದ ಸಚಿನ್ ಅಂಗಡಿ,…

Read More

ಮನೆಯ ಮೇಲ್ಚಾವಣಿ ಕುಸಿದು ವಾಮನ್ ರಾವ್ ಬಾಪೂ ಪವಾರ್ ವ್ಯಕ್ತಿ ಉಸಿರುಗಟ್ಟಿ ಸಾವನ್ನಪ್ಪಿರುತ್ತಾರೆ.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ ನಿರಂತರ ಮಳೆಯಿಂದಾಗಿ ನಿಂಗಾಪೂರ ಪೇಟ ನಗರದಲ್ಲಿರುವ ಮಹದೇವ ಗುಡಿ ಹತ್ತಿರ ವಾಮನ್ ರಾವ್ ಬಾಪೂ ಪವಾರ್ ರವರು ಮನೆಯಲ್ಲಿ ಮಲಗಿರುವಾಗ ಬೆಳಿಗ್ಗೆ 04.11 ಗಂಟೆಗೆ ಮನೆಯ ಮೇಲ್ಚಾವಣಿ ಕುಸಿದು ಅವರ ಮೇಲೆ ಬಿದ್ದು ಸದರಿಯವರು ಮಣ್ಣಿನಲ್ಲಿ ಹುದುಗಿ ಉಸಿರುಗಟ್ಟಿ ಸಾವನ್ನಪ್ಪಿರುತ್ತಾರೆ ಸದರಿ ಸ್ಥಳದಲ್ಲಿ ಅಗ್ನಿಶಾಮಕ ದಳದವರು ಹಾಗೂ ಪೊಲೀಸ್ ಸಿಬ್ಬಂದಿ ಸೇರಿ ಸದರಿ ಅವರನ್ನು ಪತ್ತೆ ಮಾಡಿ ಮೃತ ದೇಹವನ್ನು ಹೊರಗಡೆ ತೆಗೆದಿದ್ದು ಇರುತ್ತದೆ. ನಿಂಗಾಪೂರ ಪೇಟ ನಗರದಲ್ಲಿರುವ ಮಹದೇವ ಗುಡಿ…

Read More

ಚಿಲಮೂರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮ ಘಟಕ ಸ್ಥಾಪನೆ.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಚಿಲಮೂರ ಗ್ರಾಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಗ್ರಾಮ ಘಟಕ ಸ್ಥಾಪನೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರವೇ ತಾಲೂಕಾ ಅಧ್ಯಕ್ಷರು ವಿಜಯಕುಮಾರ ರಾಠೋಡ ಹಾಗು ಗೌರವಾಧ್ಯಕ್ಷರು ಜಹೂರ ಹಾಜಿ .ಮಹಿಳಾ ಅಧ್ಯಕ್ಷರು ರೂಪಾ ಅರಮನಿ. ಗ್ರಾಮೀಣ ಅಧ್ಯಕ್ಷರು ಹಣಮಂತ ಕುಲಗೋಡ. ಕಾರ್ಮಿಕ ಘಟಕ ಅಧ್ಯಕ್ಷರು ಗಣೇಶ ದೊಡಮನಿ. ತಾಲೂಕಾ ಪ್ರಧಾನ ಕಾರ್ಯದರ್ಶಿ ಆನಂದ ಜಾಧವ. ಯುವ ಘಟಕ ಅಧಕ್ಷರು ಕೃಷ್ಣ ರಾಠೋಡ. ತಾಲೂಕಾ ಸಂಘಟನಾ ಕಾರ್ಯದರ್ಶಿ ಸಾಗರ ಮುನವಳ್ಳಿ. ಮಾಂತೇಶ ಪಾಶ್ಚಾಪೂರ….

Read More

ನವೀಲು ತೀರ್ಥ ಅಣೆಕಟ್ಟೆಯಿಂದ ನೀರು ಬಿಡುಗಡೆ ರಾಮದುರ್ಗದ ಹಳೆ ಸೇತುವೆ ಮುಳುಗಡೆ

ಸವದತ್ತಿಯ ನವೀಲು ತೀರ್ಥ ಅಣೆಕಟ್ಟೆಯಿಂದ 10 ಸಾವಿರಕ್ಕೂ ಹೆಚ್ಚಿನ ನೀರು ಹರಿಸಿದ್ದರಿಂದ ರಾಮದುರ್ಗ ಪಟ್ಟಣದ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹಳೆ ಸೇತುವೆ ಸಂಪೂರ್ಣ ಮುಳುಗಡೆಯಾಗಿ ವಾಹನಗಳ ಸಂಚಾರ ಸ್ಥಗಿತವಾಗಿದೆ.

Read More

ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವನ್ನು ಉದ್ಘಾಟಿಸಿದ ಪೌರಕಾರ್ಮಿಕ ಬಂಧುಗಳು

ಸತ್ಕಾರ್ಯ ಫೌಂಡೇಶನ್ ರಾಮದುರ್ಗ ಹಾಗೂ ವಿಶ್ವ ಹಿಂದೂ ಪರಿಷತ್ ಸಹಯೋಗದೊಂದಿಗೆ ನಗರದ ಅರಮನೆ ಮೈದಾನದಲ್ಲಿ ನಡೆದ ಕೃಷ್ಣ ಜನ್ಮಾಷ್ಟಮಿ ಉತ್ಸವ ರಾಮದುರ್ಗ – 2025 ಕಾರ್ಯಕ್ರಮವನ್ನು ನಗರದ ಪುರಸಭೆಯ ಕಾರ್ಮಿಕ ಬಂಧುಗಳು ಕೃಷ್ಣ ಸುಧಾಮರ ಭಾವಚಿತ್ರಕ್ಕೆ ಆರತಿ ಹಾಗೂ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟನೆ ಮಾಡಿದರು. ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷ ಹಾಗೂ ವಿಶ್ವ ಹಿಂದೂ ಪರಿಷತ್ ತಾಲೂಕು ಸೇವಾ ಪ್ರಮುಖ ಸಂಗಮೇಶ ಉದಪುಡಿ ಮಾತನಾಡಿ ನಾವೆಲ್ಲ ಸಾಕಷ್ಟು ಹಬ್ಬ ಹರಿದಿನಗಳನ್ನು ಆಚರಣೆ ಮಾಡಿ ಸಂಭ್ರಮಿಸುತ್ತೇವೆ ಆದರೆ ಆ…

Read More

ಬೆಳಗಾವಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ರವಿ ಬಂಗಾರಪ್ಪನವರ ರಾಮದುರ್ಗಕ್ಕೆ ಬೇಟಿ

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿ ಶನಿವಾರರಂದು ಬೆಳಗಾವಿಯ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರು ರವಿ ಬಂಗಾರಪ್ಪನವರ ರಾಮದುರ್ಗ ತಾಲೂಕಿನ ಬಟಕುರ್ಕಿ ಗ್ರಾಮ ಪಂಚಾಯತಿಗೆ ಬೇಟಿ ನೀಡಿ ಪಂಚಾಯತಿ ಅಭಿವೃದ್ದಿ ಅಧಿಕಾರಿಗೆ ಸ್ವಚ್ಚ ಭಾರತ ಅಭಿಯಾನ ಹಾಗೂ ನರೇಗಾ ಯೋಜನೆ ಕುರಿತು ಚರ್ಚಿಸಿದರು, ನಂತರ ಅಲ್ಲಿಯೇ ಸರಕಾರಿ ಪ್ರಾಥಮೀಕ ಶಾಲೆಗೆ ಬೇಟಿ ನೀಡಿ ಮಕ್ಕಳ ಜೋತೆ ಬಿಸಿಯೂಟ, ಹಾಗೂ ಸಮವಸ್ತ್ರ ಬಗ್ಗೆ ಚರ್ಚೆ ಮಾಡಿದರು. ನಂತರ ಇಂದಿರಾ ಗಾಂಧಿ ವಸತಿ ಶಾಲೆಗೆ ಭೇಟಿ ನೀಡಿ ಶಾಲೆಯ ವ್ಯವಸ್ಥೆ ಬಗ್ಗೆ…

Read More

ಮುಳ್ಳೂರ ಗುಡ್ಡದಲ್ಲಿ ಟಿವಿಎಸ್ ಸ್ಕೂಟಿ ಮತ್ತು ಟಾಟಾ ಎಸಿ ಬೀಕರ ಅಪಘಾತ ಸ್ಥಳದಲ್ಲೇ ಎರಡು ಸಾವು ಹಾಗೂ ಎರಡು ಗಂಭೀರ ಗಾಯ

ಬೆಳಗಾವಿ ಜಿಲ್ಲೆ ರಾಮದುರ್ಗ ಹಾಗೂ ಮುಳ್ಳೂರು ಹೋಗುವ ಮಾರ್ಗದಲ್ಲಿ ಒಂದನೇ ತಿರುವಿನಲ್ಲಿ ಟಿವಿಎಸ್ ಸ್ಕೂಟಿ ಮತ್ತು ಟಾಟಾ ಎಸಿ ಬೀಕರ ಅಪಘಾತ ಸ್ಥಳದಲ್ಲೇ ಎರಡು ಸಾವು ಹಾಗೂ ಎರಡು ಗಂಭೀರ ಗಾಯ ಟಾಟಾ ಎಸ ಗೂಡ್ಸ್ ವಾಹನ ನಂಬರ್ KA 05 AQ 5172 ನೆದ್ದರ ಚಾಲಕ ಹೆಸರು ಅನಿಲ್ ರಮೇಶ್ ಬಿರಾದಾರ್ ವಯಸ್ಸು 21 ವರ್ಷ ಜಾತಿ ಹಿಂದೂ ಲಿಂಗಾಯತ ಉದ್ಯೋಗ ಡ್ರೈವರ್ ಸಾಕಿನ್. ಶಾ ಬಜಾರ್ ನಗರ್ ಗುಲ್ಬರ್ಗ ಇವರು ಸಾವನ್ನಪ್ಪಿದ್ದಾರೆ. ಹಾಗೂ ಟಿವಿಎಸ್…

Read More

ಪ್ರಸಕ್ತ ಸಾಲಿಗೆ ಶೀಘ್ರದಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯಾಗಬೇಕು – ಡಾ ರಾಜು ಕಂಬಾರ

ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ 2025 -26 ನೇ ಸಾಲಿನಲ್ಲಿ ಅತಿಥಿ ಉಪನ್ಯಾಸಕರಿಲ್ಲದೆ ಪಾಠ ಪ್ರವಚನಗಳು ತೊಂದರೆಯಾಗುತ್ತಿವೆ. ವಿದ್ಯಾರ್ಥಿಗಳ ಓದಿಗೆ ಸಮಸ್ಯೆ ಉಂಟಾಗುತ್ತಿದ್ದು, ಪ್ರಸಕ್ತ ಸಾಲಿನಲ್ಲಿ ಅತಿ ಶೀಘ್ರದಲ್ಲೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಬೇಕೆಂದು ಅತಿಥಿ ಉಪನ್ಯಾಸಕರ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ರಾಜು ಕಂಬಾರ ಒತ್ತಾಯಿಸಿದರು. ರಾಮದುರ್ಗ ಪಟ್ಟಣದಲ್ಲಿ ಶನಿವಾರದಂದು ಈರಮ್ಮ ಯಾದವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ಸ್ಥಳೀಯ ಶಾಸಕರು ಮತ್ತು ವಿಧಾನಸಭೆಯ ಮುಖ್ಯ ಸಚೇತಕರಾದ ಮಾನ್ಯ ಅಶೋಕ…

Read More

ರಾಷ್ಟ್ರೀಯ ಹಬ್ಬ ವಿವಿಧತೆಯಲ್ಲಿ ಏಕತೆ ಮೂಡಿಸುವ ಸ್ವಾತಂತ್ರೋತ್ಸವ ಆಚರಣೆ;

ಈ ಸಂದರ್ಭದಲ್ಲಿ ಶಾಲೆಯ ಎಲ್ಲ ಶಿಕ್ಷಕ ವೃಂದ ಹಾಗೂ ಎಸ್ ಡಿ ಎಂ ಸಿ ಯ ಸರ್ವ ಸದಸ್ಯರು ಪಾಲ್ಗೊಂಡಿದ್ದರು. ಧ್ವಜಾರೋಹಣವನ್ನು ಆ ಶಾಲೆಯ ಎಸ್ ಡಿ ಎಂ ಸಿ ಯ ಅಧ್ಯಕ್ಷರಾದ ಶ್ರೀ ಸುರೇಶ ಎಸ್ ಕಾಳಪ್ಪನವರ ನೇರವೇರಿಸಿ, ಶಾಲೆಯ ಮಕ್ಕಳಿಗೆ ಸ್ವಾತಂತ್ರೋತ್ಸವದ ಮಹತ್ವದ ಬಗ್ಗೆ ಮತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಣ್ಯಮಾನ್ಯರ ತ್ಯಾಗ ಬಲಿದಾನಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಸಿ ದೇಶಪ್ರೇಮದ ಕುರಿತು ತಿಳಿಸಿ ಅವರಂತೆ ದೇಶಪ್ರೇಮವನ್ನು ಚಿಕ್ಕ ವಯಸ್ಸಿನಲ್ಲೇ ಬೆಳೆಸಿಕೊಳ್ಳಬೇಕೆಂದು ಎಲ್ಲರೂ ವಿವಿಧತೆಯಲ್ಲಿ ಏಕತೆಯ ಭಾವಹೊಂದಿರಬೇಕೆಂದು…

Read More