ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಂಗ್ರೇಶಕೊಪ್ಪ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಗ್ರಾಮದ ರೈತ ಬಸವರಾಜ ಅಡಿವೆಪ್ಪ ಹಡಪದ ಎಂಬುವರು ತಮ್ಮ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಡಲೆಕಾಯಿ ಬೆಳೆಯನ್ನು ಕಟಾವು ಮಾಡಿ, ಕೇವಲ ಎರಡು ದಿನಗಳ ಹಿಂದಷ್ಟೇ ಬಣಿವೆ ಹಾಕಿದ್ದರು. ಆದರೆ, ರಾತ್ರಿಯ ವೇಳೆ ಯಾರೋ ಅಜ್ಞಾತ ಕಿಡಿಗೇಡಿಗಳು ಈ ಬಣಿವೆಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕಡಲೆಕಾಯಿ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ರೈತನ ಶ್ರಮವೆಲ್ಲಾ ಬೂದ ಪಾಲಾಗಿದೆ.
ಸಾಲಸೋಲ ಮಾಡಿ ಬೆಳೆದಿದ್ದ ಬೆಳೆ ಕಣ್ಣೆದುರೇ ಸುಟ್ಟು ಹೋಗಿರುವುದನ್ನು ಕಂಡು ರೈತ ಬಸವರಾಜ ಹಡಪದ ಕಣ್ಣೀರು ಹಾಕುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸವದತ್ತಿ ಪೊಲೀಸರು ಹಾಗೂ ಗ್ರಾಮ ಆಡಳಿತಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಗಳ ಪತ್ತೆಗಾಗಿ ತನಿಖೆ ಮುಂದುವರಿದಿದೆ. ಸೂಕ್ತ ಪರಿಹಾರ ನೀಡುವಂತೆ ನೊಂದ ರೈತ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಸವದತ್ತಿಯಲ್ಲಿ ಕಡಲೆ ಬಣಿವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಲಕ್ಷಾಂತರ ಮೌಲ್ಯದ ಕಡಲೆ ಬಣಿವೆ ಸುಟ್ಟು ಭಸ್ಮ!

WhatsApp Group
Join Now


