ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಶ್ರೀ. ತ್ಯಾಗವೀರ ಲಿಂಗರಾಜ ಪ್ರೌಡ ಶಾಲೆ, ಶಿರಸಂಗಿಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ ಸವದತ್ತಿ, ವಕೀಲರ ಸಂಘ ಸವದತ್ತಿ, ಶ್ರೀ. ಕಲ್ಮೇಶ್ವರ ಶಿಕ್ಷಣ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಶಿರಸಂಗಿ “ಶ್ರೀ. ತ್ಯಾಗವೀರ ಲಿಂಗರಾಜ ಪ್ರೌಡ ಶಾಲೆ, ಶಿರಸಂಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿ
ರಾಷ್ಟ್ರೀಯ ರಸ್ತೆ ಸಾರಿಗೆ ಸುರಕ್ಷತೆ ” ಜಾಗೃತಿ ಅಭಿಯಾನ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಹಾಗೂ ಅಧ್ಯಕ್ಷರು, TLSC, ಸವದತ್ತಿ ಶ್ರೀ. ಸಿದ್ದರಾಮ, ಅವರು ಸಸಿಗೆ ನೀರುಣಿಸುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ ಪ್ರತಿದಿನ ರಸ್ತೆ ಅಪಘಾತ ಪ್ರಕರಣಗಳು ಹೆಚ್ಚುತ್ತಿದ್ದು, ರಸ್ತೆ ಸುರಕ್ಷತೆ ಕುರಿತು ಸಾರ್ವಜನಿಕರು, ವಿದ್ಯಾರ್ಥಿಗಳು ಸೇರಿದಂತೆ ಪ್ರತಿಯೊಬ್ಬರೂ ಜಾಗೃತಿ ಹೊಂದುವುದು ಅತ್ಯಾವಶ್ಯಕ ಮೊಬೈಲ್ ಗಳು ಹಾಗೂ ಸಮಯದ ಅಭಾವದಿಂದಾಗಿ ಅಪಘಾತಗಳು ಹೆಚ್ಚುತ್ತಿವೆ. ಪಾಲಕರು ಅಪ್ರಾಪ್ತ ವಯಸ್ಕರಿಗೆ ವಾಹನಗಳನ್ನು ನೀಡಬಾರದು ಮತ್ತು ಮಕ್ಕಳಿಗೆ ಜೀವನದ ಕಷ್ಟಗಳ ಬಗ್ಗೆ ಅರಿವು ಮೂಡಿಸಬೇಕು ಅಪಘಾತಗಳು ಅನಿಶ್ಚಿತವಾಗಿ ಸಂಭವಿಸುತ್ತವೆ. ವಾಹನ ಸವಾರರು ಕಾನೂನು ಮೀರಿ ನಡೆಯಬಾರದು ಹಾಗೂ ದಾಖಲೆ ಪತ್ರಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಸಾರಿಗೆ ನಿಯಮಗಳ ಪಾಲನೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅಪ್ರಾಪ್ತರಿಗೆ ಲೋಕಜ್ಞಾನದ ಅರಿವಿರುವುದಿಲ್ಲ ಎಂಬ ಕಾರಣಕ್ಕಾಗಿಯೇ ಈಗ ದಂಡದ ಪ್ರಮಾಣವನ್ನು ಹೆಚ್ಚಿಸಲಾಗಿದೆ. ರಸ್ತೆ ನಿಯಮಗಳನ್ನು ಗೌರವಿಸುವುದರಿಂದ ಸಮಾಜವು ಸುಸ್ಥಿತಿಯಲ್ಲಿರಲು ಸಾಧ್ಯ ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಮೊಬೈಲ್ ಫೋನ್ ಬಳಕೆ, ಅತಿವೇಗದ ಚಾಲನೆ ಇವುಗಳಿಂದ ಅನೇಕ ಸಾವು–ನೋವುಗಳು ಸಂಭವಿಸುತ್ತಿವೆ. ಇವುಗಳನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕು ದ್ವಿಚಕ್ರ ವಾಹನ ಚಾಲಕರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ನ್ಯಾಯಾಲಯಕ್ಕೆ ಬರುವ ಅಪಘಾತ ಪ್ರಕರಣಗಳಲ್ಲಿ ಹೆಚ್ಚಾಗಿ ತಲೆಗೆ ಪೆಟ್ಟು ಬಿದ್ದು ಸಾವನ್ನಪ್ಪಿರುವ ಅಥವಾ ಅಂಗಾಂಗಗಳನ್ನು ಕಳೆದುಕೊಂಡಿರುವ ಪ್ರಕರಣಗಳೇ ಹೆಚ್ಚು. ಒಂದು ಸಾವಿರ ರೂ. ವೆಚ್ಚದ ಬಗ್ಗೆ ಯೋಚಿಸದೇ ಹೆಲ್ಮೆಟ್ ಖರೀದಿ ಮಾಡಿ ಧರಿಸಿದರೆ ಅಮೂಲ್ಯ ಜೀವ ಉಳಿಸಿಕೊಳ್ಳಬಹುದು. ಆದ್ದರಿಂದ ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡಬೇಕು ಹಾಗೂ ಎಸ್ಎಸ್ಎಲ್ಸಿ (SSLC) ಪರೀಕ್ಷೆಯು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದ್ದು, ಈ ಸಮಯದಲ್ಲಿ ಮೊಬೈಲ್ ಬಳಕೆ ಅವರ ಏಕಾಗ್ರತೆಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಎಸ್ ಎಸ್ ಎಲ್ ಸಿ ಪರೀಕ್ಷೆ ಹತ್ತಿರ ಇರುವ ಸಂದರ್ಭದಲ್ಲಿ ಪೋಷಕರು ಮಕ್ಕಳ ಕೈಯಲ್ಲಿ ಸಂಜೆ 6:00 ರಿಂದ 9:00 ರ ವರೆಗೆ ಮೊಬೈಲ್ ಹಾಗೂ ಮನೆಯಲ್ಲಿ ಟಿವಿಗಳನ್ನು ಹಚ್ಚಬೇಡಿ ನಿಮ್ಮ ಮಕ್ಕಳಿಗೆ ಓದುವ ಅಭ್ಯಾಸವನ್ನು ರೂಡಿ ಮಾಡಿಸಿ ಎಂದು ಅವರು ಸಲಹೆ ನೀಡಿದರು.
ಬಿ.ಕೆ. ಕಡಕೋಳ, ನ್ಯಾಯವಾದಿಗಳು ಮಾತನಾಡಿ ರೈತರು ಬೆಳೆ ಕಟಾವಿನ ನಂತರ ಮುಖ್ಯ ರಸ್ತೆಗಳ ಮೇಲೆ ರಾಶಿ ಹಾಕಿ ಬಿಸಿಲು ಮಾಡುವುದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಬೈಕ್ ಸವಾರರು ನಿಯಂತ್ರಣ ಕಳೆದುಕೊಂಡು ಜಾರಿ ಬೀಳುವ ಅಪಾಯವಿದ್ದು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ. ರಾಶಿ ಮಾಡುವ ಕಾರ್ಯದಲ್ಲಿ ತೊಡಗಿರುವ ಜನ ರಸ್ತೆಯೇ ಮೇಲೆ ನಿಂತು ರಸ್ತೆ ತುಂಬು ಬೆಳೆಯು ಕಾಲುದಂಟುಗಳು ಹರಡುತ್ತಿದ್ದಾರೆ. ಇದರ ಪರಿಣಾಮ ವಾಹನ ಸವಾರರಿಗೆ ಸುಗಮ ಸಂಚಾರ ಕಷ್ಟವಾಗಿದೆ.ಈ ರೀತಿ ಮುಖ್ಯ ರಸ್ತೆಗಳ ಮೇಲೆ ರಾಶಿ ಮಾಡುವುದನ್ನು ತಪ್ಪಿಸಲು ರೈತರು ಜಮೀನಿನಲ್ಲೇ ಕಣಗಳನ್ನು ನಿರ್ಮಿಸಿಕೊಳ್ಳುವುದು ಉತ್ತಮ.
ಹೆಲ್ಮೆಟ್ ಧರಿಸದೇ ವಾಹನ ಚಾಲನೆ, ಮದ್ಯಪಾನ ಮಾಡಿ ವಾಹನ ಚಲಾಯಿಸುವುದು, ಮೊಬೈಲ್ ಫೋನ್ ಬಳಕೆ, ಅತಿವೇಗದ ಚಾಲನೆ ಇವುಗಳಿಂದ ಅನೇಕ ಸಾವು–ನೋವುಗಳು ಸಂಭವಿಸುತ್ತಿವೆ. ಇವುಗಳನ್ನು ನಿಯಂತ್ರಿಸಲು ಎಲ್ಲರೂ ಸಹಕರಿಸಬೇಕು ಎಂದು ಅವರು ಹೇಳಿದರು.

ಶಿರಸಂಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ವಿಜಯಲಕ್ಷ್ಮಿ ಕೊಳಕಿ ಮಾತನಾಡಿ ಅಪಘಾತವಾದಾಗ ಮೊಬೈಲ್ನಲ್ಲಿ ವಿಡಿಯೋ ಮಾಡುವ ಬದಲು ನಾವು ಈ ಸಮಯದಲ್ಲಿ ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಬೇಕು. 108 ಆಂಬ್ಯುಲೆನ್ಸ್ಗೆ ಕರೆ ಮಾಡಿ ಅಥವಾ 112 ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಅವರು ಹೇಳಿದರು.
ಶಿರಸಂಗಿ ತ್ಯಾಗವೀರ ಲಿಂಗರಾಜ ಪ್ರೌಡ ಶಾಲೆಯ ಮುಖ್ಯೋಪಾದ್ಯಾಯರು ಎಚ್.ಕೆ. ಗುರ್ಲಕಟ್ಟಿ ಸ್ವಾಗತ ಭಾಷಣ ನೆರವೇರಿಸಿದರು. ಎನ್.ಎಸ್. ಗುಡಿಸಾಗರ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶ್ರೀ ಕಾಳಿಕಾದೇವಿಯ ಧರ್ಮಾಧಿಕಾರಿಗಳು ಇಂದ್ರಾಚಾರ್ಯ ಗಂಗೈನವರ ದಿವ್ಯ ಸಾನಿಧ್ಯ ವಹಿಸಿದರು.
ಈ ಸಂದರ್ಭದಲ್ಲಿ ಶಿರಸಂಗಿ ವಕೀಲರ ಸಂಘದಿಂದ ಅತಿಥಿಗಳಿಗೆ ಸನ್ಮಾನ ಮಾಡಿದರು.
ಈ ಒಂದು ಕಾರ್ಯಕ್ರಮದಲ್ಲಿ ಜೆ. ಬಿ. ಮುನವಳ್ಳಿ ಅಧ್ಯಕ್ಷರು, ನ್ಯಾಯವಾದಿಗಳ ಸಂಘ ಸವದತ್ತಿ, ಎಮ್. ಎಸ್. ಹುಬ್ಬಳ್ಳಿ ಉಪಾಧ್ಯಕ್ಷರು ನ್ಯಾಯವಾದಿಗಳ ಸಂಘ ಸವದತ್ತಿ ಆರ್. ವಿ. ಹುಂಬಿ, ನ್ಯಾಯವಾದಿಗಳು ಶಿರಸಂಗಿ, ಎನ್. ಬಿ. ಭೋವಿ ನ್ಯಾಯವಾದಿಗಳು ಶಿರಸಂಗಿ, ವಿ. ಎಸ್. ಮುನವಳ್ಳಿ ನ್ಯಾಯವಾದಿಗಳು ಶಿರಸಂಗಿ,
ಎಚ್. ಆರ್. ಕುಂಬಾರ, ನ್ಯಾಯವಾದಿಗಳು ಶಿರಸಂಗಿ,
ಜೆ. ಜಿ. ತಾಂಬೋಳಿ ನ್ಯಾಯವಾದಿಗಳು ಶಿರಸಂಗಿ,
ತ್ಯಾಗವೀರ ಲಿಂಗರಾಜ ಪ್ರೌಡ ಶಾಲೆಯ ಶಿಕ್ಷಕರಾದ ವಿ.ಬಿ. ತಳವಾರ, ಆರ್.ಜಿ. ಕಣವಿ, ಎಸ್.ಟಿ. ತಳವಾರ, ಎಂ ಎ ನರಹಟ್ಟಿ,
ಎಂ ಎ ತೋರಣಗಟ್ಟಿ, ಲಿಂಗರಾಜ ಹೈಸ್ಕೂಲ್ ಕಾರ್ಯದರ್ಶಿ, ಮಲ್ಲಿಕಾರ್ಜುನ ಗೊರವನಕೊಳ್ಳ ಶಿಕ್ಷಣ ಪ್ರೇಮಿ, ಕೆ ಐ ಕಲಾಲ ಶಿಕ್ಷಣ ಪ್ರೇಮಿ, ವಿ ಜಿ ಮೇಟಿ, ವಿಕಾಸ ಕಲಾಲ, ಪರಪ್ಪ ಮೆಣಸಿನಕಾಯಿ, ಶಾಲೆಯ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು



