Prashanth Angadi

ಕರ್ನಾಟಕದಲ್ಲಿ ಎಫ್‌ಐಆರ್ (FIR) ಚೆಕ್ ಮಾಡಲು ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್ ಅಥವಾ ಸಿಟಿಜನ್ ಪೋರ್ಟಲ್ ಬಳಸಬಹುದು.

ವೆಬಸೈಟಿಗೆ ಭೇಟಿ ನೀಡಿ ಮೊದಲು (Chrome ) ಕ್ರೋಮ್ ಬ್ರೌಸರ್ ಅನ್ನು ಓಪನ್ ಮಾಡಬೇಕು ನಂತರ ಅಲ್ಲಿ ksp fir search ಅಂತ ಟೈಪ್ ಮಾಡಬೇಕು ನಂತರ FIR Search-karnataka- ಕರ್ನಾಟಕ ಸರ್ಕಾರ ಅಂತ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ಮೇಲೆ (FIR Search) ಎಫ್ ಐ ಆರ್ ಸರ್ಚ್ ಅಂತ ಓಪನ್ ಆಗುತ್ತೆ ಅದರಲ್ಲಿ ಮೊದಲನೆಯದು ಜಿಲ್ಲೆ ಆಯ್ಕೆ ಮಾಡಬೇಕು. ಎರಡನೇಯದ್ದು ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಬೇಕು, ಮೂರನೆಯದು ಎಫ್‌ಐಆರ್ ಸಂಖ್ಯೆ…

Read More

ಸಚಿವ ದಿನೇಶ ಗುಂಡೂರಾವ್ ಅವರಿಂದ ರಾಮದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯ 100 ಹಾಸಿಗೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ.

ರಾಮದುರ್ಗ : ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಾ ಆಸ್ಪತ್ರೆ ಮೇಲ್ದರ್ಜೆಗೆರಿಸುವ ಉದ್ದೇಶದಿಂದ ನೂತನವಾಗಿ 100 ಹಾಸಿಗೆಗಳ ನಿರ್ಮಾಣ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸೋಮವಾರ ರಾಮದುರ್ಗ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನಡೆದ 100 ಹಾಸಿಗೆಗಳ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ನುಡಿದಂತೆ ನಡೆದ ಸರ್ಕಾರ ಜನಪರ ಕಾರ್ಯಕ್ರಮಗಳನ್ನು ನೀಡುತ್ತಿದೆ….

Read More

ಬೈಲಹೊಂಗಲ ತಾಲೂಕು ಸಾರ್ವಜನಿಕ ಆಸ್ಪತ್ರೆಯ 50 ಹಾಸಿಗೆಗಳ ತೀವ್ರ ನಿಗಾ ಘಟಕ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯನ್ನುಸಚಿವ ದಿನೇಶ ಗುಂಡೂರಾವ್ ನೆರವೇರಿಸಿದರು.

ರಾಜ್ಯದಲ್ಲಿ ಅತ್ಯಂತ ಉತ್ತಮವಾಗಿ ನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ ಬೈಲಹೊಂಗಲ ಆಸ್ಪತ್ರೆ ಮುಂಚೂಣಿಯಲ್ಲಿದೆ. ಪ್ರತಿ ತಾಲೂಕಿನ ಆಸ್ಪತ್ರೆಗಳು ಇದೇ ರೀತಿಯಲ್ಲಿ ನಿರ್ವಹಿಸಿದರೆ ರೋಗಿಗಳ ಬಹುತೇಕ ಸಮಸ್ಯೆಗಳು ಪರಿಹಾರವಾಗುತ್ತವೆ. ಸ್ಥಳೀಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಾಲೂಕಾ ಆಸ್ಪತ್ರೆ ಮೇಲ್ದರ್ಜೆಗೆರಿಸುವ ಉದ್ದೇಶದಿಂದ ನೂತನವಾಗಿ 50 ಹಾಸಿಗೆಗಳ ತೀವ್ರ ನಿಗಾ ಘಟಕ ಮಂಜೂರು ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ ಗುಂಡುರಾವ್ ಹೇಳಿದರು. ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ…

Read More

ಹುತಾತ್ಮ ವೃತ್ತದಲ್ಲಿ ದೇಶಪ್ರೇಮಿಗಳ ದಿನ ಆಚರಣೆ

ರಾಮದುರ್ಗ ನಗರದ ಹುತಾತ್ಮ ವೃತ್ತದಲ್ಲಿ ಸತ್ಕಾರ್ಯ ಫೌಂಡೇಶನ್ ವತಿಯಿಂದ ದೇಶಭಕ್ತನ ಹೆಸರಿನಲ್ಲಿ ದೀಪೋತ್ಸವ ಎಂಬ ಶೀರ್ಷಿಕೆಯಡಿ ದೇಶಪ್ರೇಮಿಗಳ ದಿನ ಆಚರಣೆ ಮಾಡಲಾಯಿತು, 2019 ರ ಫೆಬ್ರವರಿ 14 ರಂದು ನಡೆದ ಆತ್ಮಾಹುತಿ ಬಾಂಬ್ ದಾಳಿಯ ಪರಿಣಾಮ ಹುತಾತ್ಮರಾದ CRPF ಸೈನಿಕರ ಆದಿಯಾಗಿ ದೇಶಕ್ಕಾಗಿ ದುಡಿದ, ಮಿಡಿದ ಹಾಗೂ ಮಡಿದ ಮಹಾನ್ ಚೇತನಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿರಿಯರಾದ ಮಲ್ಲಿಕಾರ್ಜುನ ಭಾವಿಕಟ್ಟಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸೈನ್ಯ ಹಾಗೂ ಹುತಾತ್ಮರ ಕುರಿತ ಹೆಮ್ಮೆಯ ಮಾತುಗಳನ್ನಾಡಿದರು. ಅಖಿಲ ಕರ್ನಾಟಕ ಮಾಜಿ ಸೈನಿಕರ…

Read More

ಸವದತ್ತಿಯಲ್ಲಿ ಕಡಲೆ ಬಣಿವೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಲಕ್ಷಾಂತರ ಮೌಲ್ಯದ ಕಡಲೆ ಬಣಿವೆ ಸುಟ್ಟು ಭಸ್ಮ!

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಸಂಗ್ರೇಶಕೊಪ್ಪ ಗ್ರಾಮದಲ್ಲಿ ಮನಕಲಕುವ ಘಟನೆ ಸಂಭವಿಸಿದೆ. ಗ್ರಾಮದ ರೈತ ಬಸವರಾಜ ಅಡಿವೆಪ್ಪ ಹಡಪದ ಎಂಬುವರು ತಮ್ಮ 12 ಎಕರೆ ಜಮೀನಿನಲ್ಲಿ ಬೆಳೆದಿದ್ದ ಕಡಲೆಕಾಯಿ ಬೆಳೆಯನ್ನು ಕಟಾವು ಮಾಡಿ, ಕೇವಲ ಎರಡು ದಿನಗಳ ಹಿಂದಷ್ಟೇ ಬಣಿವೆ ಹಾಕಿದ್ದರು. ಆದರೆ, ರಾತ್ರಿಯ ವೇಳೆ ಯಾರೋ ಅಜ್ಞಾತ ಕಿಡಿಗೇಡಿಗಳು ಈ ಬಣಿವೆಗೆ ಬೆಂಕಿ ಹಚ್ಚಿದ್ದಾರೆ. ಇದರ ಪರಿಣಾಮವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕಡಲೆಕಾಯಿ ಬೆಳೆ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ರೈತನ ಶ್ರಮವೆಲ್ಲಾ ಬೂದ ಪಾಲಾಗಿದೆ.ಸಾಲಸೋಲ ಮಾಡಿ…

Read More

ಕಾರವಾರ ನಿಯಮ ಉಲ್ಲಂಘಿಸಿ ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುವವರ ಲೈಸೆನ್ಸ್ ರದ್ದುಗೊಳಿಸಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ.

ಕಾರವಾರ:- ಜಿಲ್ಲೆಯಲ್ಲಿ ಸಾರಿಗೆ ನಿಯಮಗಳನ್ನು ಉಲ್ಲಂಘಿಸಿ, ಖಾಸಗಿ ವಾಹನಗಳಲ್ಲಿ ಬಾಡಿಗೆ ಮಾಡುವ ವಾಹನಗಳ ಲೈಸೆನ್ಸ್ಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಎಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಸೂಚನೆ ನೀಡಿದರು. ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಭೆಯಲ್ಲಿ ಖಾಸಗಿ ವಾಹನಗಳಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿರುವ ಕುರಿತಂತೆ ಟ್ಯಾಕ್ಸಿ ಚಾಲಕರು ನೀಡಿದ ದೂರಿನ ಕುರಿತಂತೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಇಂತಹ ವಾಹನಗಳ ಕುರಿತು ಟ್ಯಾಕ್ಸಿ ಚಾಲಕರು ಪೋಟೋ…

Read More

ರಾಷ್ಟ್ರೀಯ ರಸ್ತೆ ಸಾರಿಗೆ ಸುರಕ್ಷತೆ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ನ್ಯಾಯಾಧೀಶರು ಶ್ರೀ. ಸಿದ್ದರಾಮ, ಅವರು ಚಾಲನೆ ನೀಡಿದರು.

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದ ಶ್ರೀ. ತ್ಯಾಗವೀರ ಲಿಂಗರಾಜ ಪ್ರೌಡ ಶಾಲೆ, ಶಿರಸಂಗಿಯಲ್ಲಿ ತಾಲೂಕಾ ಕಾನೂನು ಸೇವೆಗಳ ಸಮಿತಿ ಸವದತ್ತಿ, ವಕೀಲರ ಸಂಘ ಸವದತ್ತಿ, ಶ್ರೀ. ಕಲ್ಮೇಶ್ವರ ಶಿಕ್ಷಣ ಮತ್ತು ಸಮಗ್ರ ಗ್ರಾಮೀಣಾಭಿವೃದ್ಧಿ ಸಂಸ್ಥೆ (ರಿ), ಶಿರಸಂಗಿ “ಶ್ರೀ. ತ್ಯಾಗವೀರ ಲಿಂಗರಾಜ ಪ್ರೌಡ ಶಾಲೆ, ಶಿರಸಂಗಿ ಇವರುಗಳ ಸಂಯುಕ್ತ ಆಶ್ರಯದಲ್ಲಿರಾಷ್ಟ್ರೀಯ ರಸ್ತೆ ಸಾರಿಗೆ ಸುರಕ್ಷತೆ ” ಜಾಗೃತಿ ಅಭಿಯಾನ ಕುರಿತು ಕಾನೂನು ಅರಿವು ನೆರವು ಕಾರ್ಯಕ್ರಮವನ್ನು ಗೌರವಾನ್ವಿತ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರು, ಹಾಗೂ…

Read More

ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿ: ಈಶ್ವರ ಬಳಿಗಾರ

ಬೆಟಗೇರಿ:ಸದ್ಗುರು ಸಿದ್ಧಾರೂಢರು ಮಾನವನ ಅಜ್ಞಾನ ಕಳೆದು ಸುಜ್ಞಾನದ ಸನ್ನಮಾರ್ಗ ತೋರಿಸಿದ ಮಹಾನ್ ದೇವತಾ ಪುರುಷ, ಹುಬ್ಬಳ್ಳಿ ಸದ್ಗುರು ಶ್ರೀ ಸಿದ್ಧಾರೂಢರು ಶಿವನ ಅವತಾರಿಯಾಗಿದ್ದಾರೆ ಎಂದು ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಪಾದಯಾತ್ರೆ ವ್ಯವಸ್ಥಾಪಕ ಸಮಿತಿ ಪ್ರಧಾನ ಸಂಚಾಲಕ ಈಶ್ವರ ಬಳಿಗಾರ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಸದ್ಗುರು ಶ್ರೀ ಸಿದ್ಧಾರೂಢರ ಸದ್ಭಭಕ್ತರು ಫೆ.೧೨ರಂದು ಹುಬ್ಬಳ್ಳಿ ಸಿದ್ಧಾರೂಢ ಮಠಕ್ಕೆ ಹಮ್ಮಿಕೊಂಡ ೧೧ನೇ ವರ್ಷದ ಪಾದಯಾತ್ರೆಗೆ ಸ್ಥಳೀಯ ಡಾ.ಬೆಟಗೇರಿ ಕೃಷ್ಣಶರ್ಮ ವೃತ್ತದಲ್ಲಿ ಪಾದಯಾತ್ರೆ ನೇತೃತ್ವ ವಹಿಸಿ ಮಾತನಾಡಿದ ಅವರು,…

Read More

ಸೌಂಡ್ ಸಿಸ್ಟಮ್‌ಗಳಿಗೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ : ಶ್ರೀನಿವಾಸಗೌಡ ಪಾಟೀಲ 3ನೇ ದಿನದ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ.

ಬೆಳಗಾವಿ ಟ್ರಾೃಕ್ಟರ್ ಮತ್ತು ಇತರೆ ವಾಹನಗಳಲ್ಲಿ ಕಾನೂನು ಬಾಹಿರವಾಗಿ ಅಳವಡಿಸಿರುವ ಸೌಂಡ್ ಸಿಸ್ಟಮ್‌ಗಳಿಗೆ ಕಡಿವಾಣ ಹಾಕದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ರಾಮದುರ್ಗ ತಾಲೂಕಿನ ಓಬಳಾಪುರದ ಹೋರಾಟಗಾರ ಶ್ರೀನಿವಾಸಗೌಡ ಪಾಟೀಲ ಜಿಲ್ಲಾಧಿಕಾರಿ ಕಚೇರಿ ಎದುರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಸೋಮವಾರದಿಂದ ಶ್ರೀನಿವಾಸಗೌಡ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಧರಣಿ ಆರಂಭಿಸಿದ್ದು, ಮೊದಲ ದಿನ ಕರುನಾಡ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಬೆಂಬಲ ವ್ಯಕ್ತಪಡಿಸಿ ಹೋರಾಟದಲ್ಲಿ ಭಾಗಿಯಾಗಿದ್ದರು. ಎರಡನೆಯ ದಿನ ರೈತ…

Read More

ಮಾಹಿತಿ ಹಕ್ಕು ಅರ್ಜಿದಾರರಿಗೆ ಕಪ್ಪು ಪಟ್ಟಿಗೆ ಸೇರಿಸುವ ಮತ್ತು ದಂಡ ವಿಧಿಸುವ ಯಾವುದೇ ಅಧಿಕಾರ ಇಲ್ಲವೆಂದು ಸ್ಪಷ್ಟ ಪಡಿಸಿದ ಕರ್ನಾಟಕ ಮಾಹಿತಿ ಆಯೋಗ..!!

ಮಾಹಿತಿ ಹಕ್ಕು ಅಧಿನಿಯಮ, 2005 ರಡಿ ಮಾಹಿತಿ ಕೋರಿ ಸಲ್ಲಿಕೆಯಾಗಿರುವ ಅರ್ಜಿ ಬಗ್ಗೆ.ಕರ್ನಾಟಕ ಮಾಹಿತಿ ಆಯೋಗಕ್ಕೆ ಆರ್ಜಿದಾರರು/ಸಾರ್ವಜನಿಕರು ಮಾಹಿತಿ ಹಕ್ಕು ಅಧಿನಿಯಮ 2005ರ ಅಡಿಯಲ್ಲಿ ಕಲಂ 19(3)ರಲ್ಲಿ ದ್ವಿತೀಯ ಮೇಲ್ಮನವಿ ಸಲ್ಲಿಸಿದ ನಂತರ ಅರ್ಜಿದಾರರನ್ನು ಕಪ್ಪು ಪಟ್ಟಿಗೆ ಸೇರಿಸುವುದು ಹಾಗೂ ಒಂದು ಅರ್ಜಿಗೆ ಒಂದು ಸಾವಿರ ದಂಡ ವಿಧಿಸುವ ಯಾವುದೇ ಅಧಿಕಾರ ಇಲ್ಲವೆಂದು ಸ್ಪಷ್ಟ ಪಡಿಸಿದ ಕರ್ನಾಟಕ ಮಾಹಿತಿ ಆಯೋಗ ಮಾಹಿತಿ ಹಕ್ಕು ಕಾಯಿದೆಯಡಿ ಮಾಹಿತಿ ಕೇಳುವ ನಾಗರಿಕರನ್ನು ‘ಕಪ್ಪು ಪಟ್ಟಿ’ಗೆ ಸೇರಿಸುತ್ತಿರುವ ಕರ್ನಾಟಕ ಮಾಹಿತಿ ಆಯೋಗದ…

Read More