ಮಾಹಿತಿ ಹಕ್ಕು ಅರ್ಜಿ ಹಾಕಿ ಮಾಹಿತಿ ಕೇಳಿದ್ದಕ್ಕೆ ಪತ್ರಕರ್ತನ ಮೇಲೆ ಹಲ್ಲೆ
ಚಾಮರಾಜನಗರ: ಮೆಡಿಕಲ್ ಕಾಲೇಜು ಮತ್ತು ಭೋದನಾ ಆಸ್ಪತ್ರೆಗೆ ಸಂಬಂಧಿಸಿದಂತೆ ಹಲವಾರು ಮಾಹಿತಿಗಳನ್ನು ಮಾಹಿತಿ ಹಕ್ಕಿನಡಿ ಮಾಹಿತಿ ಕೋರಿದ್ದ ಪತ್ರಕರ್ತರೊಬ್ಬರ ಮೇಲೆ ಹಲ್ಲೆ ಹಾಗೂ ಕೊಲೆ ಬೆದರಿಕೆ ಹಾಕಿದ್ದಲ್ಲದೆ,ಪತ್ರಕರ್ತನ ಮೇಲೆಯೇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾಮರಾಜನಗರಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೆಡಿಕಲ್ ಕಾಲೇಜು ಡೀನ್ ಸಹಿತ ಎಂಟು ಮಂದಿ ನೌಕರರ ಮೇಲೆ ಎಫ್ ಐ ಆರ್ದಾಖಲಾಗಿದೆ.ಚಾಮರಾಜನಗರ ಯಡಪುರ ಬಳಿ ಇರುವ ಮೆಡಿಕಲ್ ಕಾಲೇಜು ಮತ್ತು ಭೋದನಾ ಆಸ್ಪತ್ರೆಗೆ ಸಂಬಂಧಿಸಿದಂತೆ ಪತ್ರಕರ್ತ ಗೂಳೀಪುರದ ಮಣಿಕಂಠರವರು ಮಾಹಿತಿಹಕ್ಕಿನಡಿ ಮಾಹಿತಿ…
