Prashanth Angadi

ಜ.10 ರಂದು ಬಿ.ವಿ.ವಿ.ಎಸ್ ಸಂಭ್ರಮ- ರಾಮದುರ್ಗ ಹಬ್ಬ ಡಾ. ವೀರಣ್ಣ ಸಿ ಚರಂತಿಮಠ ಇವರಿಂದ ಪತ್ರಿಕಾ ಗೋಷ್ಠಿ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ರಾಮದುರ್ಗ ಶಾಲಾ ಅವರಣದಲ್ಲಿ ಜ.10 ರಂದು ಬಿ.ವಿ.ವಿ.ಎಸ್ ಸಂಭ್ರಮ- ರಾಮದುರ್ಗ ಹಬ್ಬದ ಬಗ್ಗೆ ಪತ್ರಿಕಾ ಗೋಷ್ಟಿಯಲ್ಲಿ ಡಾ. ವೀರಣ್ಣ ಸಿ ಚರಂತಿಮಠ ಮಾತನಾಡಿದರು.ಬಾಗಲಕೋಟೆ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಅಡಿಯಲ್ಲಿ ರಾಮದುರ್ಗ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಒಟ್ಟು 10 ಅಂಗ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಜ.10 ರಂದು ರಾಮದುರ್ಗ ಪಟ್ಟಣದ ಬಿ.ವಿ..ವಿ.ಎಸ್ ಮೈದಾನದ ಆವರಣದಲ್ಲಿ ಮೂಡಬಿದರೆ ಸಂಭ್ರಮದ ಆಚರಣೆಯಂತೆ ಇದೇ ಪ್ರಥಮ ಬಾರಿಗೆ ಬಿ.ವಿ.ವಿ.ಎಸ್ ಸಂಭ್ರಮ- ರಾಮದುರ್ಗ ಹಬ್ಬ…

Read More

ಗದಗ ನೂತನ ಜಿಲ್ಲಾಧಿಕಾರಿಯಾಗಿ ಸಿ.ಎನ್.ಶ್ರೀಧರ ನೇಮಕ.

ಗದಗ ಜಿಲ್ಲೆಗೆ ನೂತನ ಜಿಲ್ಲಾಧಿಕಾರಿಯಾಗಿ ಸಿ . ಎನ್ ಶ್ರೀಧರ್ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಗದಗ ಜಿಲ್ಲಾಧಿಕಾರಿಯಾಗಿದ್ದ ಗೋವಿಂದ ರೆಡ್ಡಿಯವರನ್ನು ವರ್ಗಾಯಿಸಿ ಅವರ ಜಾಗಕ್ಕೆ ಹೊಸ ಜಿಲ್ಲಾಧಿಕಾರಿಯನ್ನಾಗಿ ಸಿ ಎನ್.ಶ್ರೀಧರ ಅವರನ್ನು ನೇಮಕಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಶ್ರೀ. ಸಿ.ಎನ್.ಶ್ರೀಧರ, ಐಎಎಸ್ (ಕೆಎನ್: 2012), ನಿರ್ದೇಶಕರು, ಸಾಮಾಜಿಕ ಲೆಕ್ಕ ಪರಿಶೋಧನೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಬೆಂಗಳೂರು ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಲಾಗಿದೆ. ಮತ್ತು ಮುಂದಿನ ಆದೇಶದವರೆಗೆ ಗದಗ…

Read More

ರಾಮದುರ್ಗ ಎ ಆರ್ ಟಿ ಓ ಕಚೇರಿಯಲ್ಲಿ ವಿಡಿಯೋ ಮಾಡಬೇಡಿ ಎಂದು ಉಡಾಫೆ ಉತ್ತರ ನೀಡಿದ ಅಧಿಕಾರಿಗಳ ವಿರುದ್ಧ ಮಾಧ್ಯಮದವರಿಂದ ಪ್ರತಿಭಟನೆ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಎ ಆರ್ ಟಿ ಓ ಕಚೇರಿಯಲ್ಲಿ ಇನ್ಸ್ಪೆಕ್ಟರ್ ಉಪ್ರಿ ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ಇರುವುದು ಕಚೇರಿಗೆ ಬಂದಂತಹ ಸಾರ್ವಜನಿಕರಿಗೆ ಕೆಲಸ ಮಾಡಿಕೊಡುವುದೇ ಇರುವುದು ಅಧಿಕಾರಿಗಳ ಬೇಜವಾಬ್ದಾರಿ ಎಂದು ಸಾರ್ವಜನಿಕರು ಮಾಧ್ಯಮದವರ ಮುಂದೆ ಆರೋಪ ಮಾಡಿದರು ಸಾರ್ವಜನಿಕರ ಆರೋಪದ ಮೇಲೆ ಎ ಆರ್ ಟಿ ಓ ಕಚೇರಿಗೆ ಮಾಧ್ಯಮದವರು ಭೇಟಿ ನೀಡಿದಾಗ ಬೆಳಗಾವಿ ಜಂಟಿ ಸಾರಿಗೆ ಆಯುಕ್ತರಾದ ಶ್ರೀಮತಿ ಎಂ ಪಿ ಓಂಕಾರೇಶ್ವರಿ ಇವರು ಮಂಗಳವಾರ ರಾಮದುರ್ಗದ ಎ ಆರ್ ಟಿ…

Read More

ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಅಂತಿಮ ಮತದಾರ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಧಾರವಾಡ ಜಿಲ್ಲಾ ಚುನಾವಣೆ ಅಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮತದಾರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ-2025ರ ಅಂತಿಮ ಮತದಾರ ಪಟ್ಟಿಯನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಮಾತನಾಡಿ, ಜನವರಿ 2025ಕ್ಕೆ ಅನ್ವಯವಾಗುವಂತೆ ಜಿಲ್ಲೆಯಲ್ಲಿ 8,05,768 ಪುರುಷ, 8,10,647 ಮಹಿಳಾ ಹಾಗೂ 95 ಜನ ತೃತೀಯಲಿಂಗಿಗಳು ಸೇರಿ ಒಟ್ಟು 16,16,415 ಜನ ಅರ್ಹ ಮತದಾರರು ಇದ್ದಾರೆ ಎಂದು ಅವರು ತಿಳಿಸಿದರು .ಅಕ್ಟೋಬರ್ 29, 2024 ರಂದು…

Read More

ಛತ್ತೀಸ್‌ಗಢದ ಬಿಜಾಪುರದಲ್ಲಿ ಜನವರಿ 1ರ ರಾತ್ರಿಯಿಂದ ನಾಪತ್ತೆಯಾಗಿದ್ದ ಪತ್ರಕರ್ತ ಮುಖೇಶ್ ಚಂದ್ರಕರ್ ಅವರು ಶವವಾಗಿ ಪತ್ತೆಯಾಗಿದ್ದಾರೆ.

ಛತ್ತೀಸ್‌ಗಢದ ಬಿಜಾಪುರದಲ್ಲಿ ಜನವರಿ 1ರ ರಾತ್ರಿಯಿಂದ ನಾಪತ್ತೆಯಾಗಿದ್ದ ಪತ್ರಕರ್ತ ಮುಖೇಶ್ ಚಂದ್ರಕರ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಮುಖೇಶ್ ಅವರ ಶವವನ್ನು ಬಿಜಾಪುರ ನಗರದ ಚಟ್ಟನ್‌ಪಾರಾ ಪ್ರದೇಶದಲ್ಲಿ ಗುತ್ತಿಗೆದಾರರೊಬ್ಬರ ಆವರಣದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಿಂದ ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಪತ್ರಕರ್ತನನ್ನು ಹತ್ಯೆಗೈದಿದ್ದಾರೆ ಎಂದು ಶಂಕಿಸಲಾಗಿದೆ. ಪತ್ರಕರ್ತನ ಶವ ಪತ್ತೆಯಾದ ಜಾಗ ಗುತ್ತಿಗೆದಾರ ಸುರೇಶ್ ಚಂದ್ರಕರ್ ಅವರಿಗೆ ಸೇರಿದ್ದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಕೊಲೆ ಪ್ರಕರಣ ದಾಖಲಾಗಿದೆ. ಹಲವು ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ….

Read More

2024ರ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ವಿದ್ಯಾರ್ಥಿಗಳಿಗೆ ಯುವನಿಧಿ ಯೋಜನೆಯ ನೋಂದಣಿ ಪ್ರಕ್ರಿಯೆ ಆರಂಭ

ಧಾರವಾಡ 2023-24 ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಪದವಿ, ಸ್ನಾಕೋತ್ತರ ಪದವಿ ಮತ್ತು ಡಿಪ್ಲೋಮಾ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳು ಯುವನಿಧಿ ಯೋಜನೆಗೆ ತಮ್ಮ ಹೆಸರು ನೋಂದಾಯಿಸಿಕೊಳ್ಳಲು ಅಗತ್ಯ ಮಾಹಿತಿ ನೀಡುವ ಬಿತ್ತಪತ್ರ ಹಾಗೂ ಪ್ರಚಾರ ಸಾಮಗ್ರಿಗಳನ್ನು ಇಂದು ಬೆಳಿಗ್ಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪೊಲೀಸ ಅಧೀಕ್ಷಕ ಡಾ.ಗೋಪಾಲ ಬ್ಯಾಕೋಡ ಹಾಗೂ ಇತರರು ಸಾಮಾಗ್ರಿಗಳನ್ನು ಬಿಡುಗಡೆ ಮಾಡಿ ಯುವ ನಿಧಿ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿದರು. ಯುವ ಜನತೆಯ ಭವಿಷ್ಯಕ್ಕಾಗಿ…

Read More

ಮತದಾರಪಟ್ಟಿ ಪರಿಷ್ಕರಣೆ ವೀಕ್ಷಕರಾದ ಎನ್.ಜಯರಾಂ ಭೇಟಿ ; ಅಧಿಕಾರಿಗಳೊಂದಿಗೆ ಸಭೆ

ಧಾರವಾಡ ಜಿಲ್ಲೆಯ ಮತದಾರ ಪಟ್ಟಿ ಪರಿಷ್ಕರಣೆ ವೀಕ್ಷಕರಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಎನ್.ಜಯರಾಂ ಅವರು ಇಂದು ಧಾರವಾಡ ಜಿಲ್ಲೆಗೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನೆ ಮಾಡಿದರು. ಅವರು ಅಧಿಕಾರಿಗಳೊಂದಿಗೆ ಸಭೆ ಜರುಗಿಸಿ, ಜಿಲ್ಲೆಯ ಮತದಾರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯ ನಿಯಮಾನುಸಾರ ಜರುಗಬೇಕು. ಸಹಾಯಕ ಚುನಾವಣಾಧಿಕಾರಿಗಳು ಮತದಾರ ಪಟ್ಟಿ ಪರಿಷ್ಕರಣೆ ಮೇಲುಸ್ತುವಾರಿ ವಹಿಸಿ, ಪರಿಶೀಲಿಸಬೇಕು. ಮತದಾರರ ಹೆಸರು, ಅಡ್ಡಹೆಸರು, ವಯಸ್ಸು ಅರ್ಜಿ ನಮೂನೆ-8 ರ ಅನುಸಾರ ದಾಖಲಿಸಬೇಕು ಎಂದು ಹೇಳಿದರು….

Read More

ಧಾರವಾಡ ಜನವರಿ 26 ರ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆ

ಧಾರವಾಡ ಬರುವ ಜನವರಿ 26 ರಂದು ಜರುಗುವ ಗಣರಾಜ್ಯೋತ್ಸವವನ್ನು ಜಿಲ್ಲೆಯಲ್ಲಿ ಅರ್ಥಪೂರ್ಣವಾಗಿ ಆಚರಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಪೊಲೀಸ್, ಶಿಕ್ಷಣ ಹಾಗೂ ಇತರ ಇಲಾಖೆಗಳು ತಮಗೆ ವಹಿಸಿದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ. ಅವರು ಹೇಳಿದರು. ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜನವರಿ 26 ರ ಗಣರಾಜ್ಯೋತ್ಸವ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆ ಜರುಗಿಸಿ ಅಧ್ಯಕ್ಷತೆ ವಹಿಸಿ, ಮಾತನಾಡಿದರು. ಗಣರಾಜ್ಯೋತ್ಸವದಂದು ಬೆಳಿಗ್ಗೆ 7:30 ಗಂಟೆಗೆ ಶಾಲಾ-ಕಾಲೇಜುಗಳಲ್ಲಿ, ಸರಕಾರಿ ಕಚೇರಿಗಳಲ್ಲಿ ಧ್ವಜಾರೋಹಣ ನೆರವೇರಿಸಿ, 8:30 ಗಂಟೆಗೆ…

Read More

ಹಿರಿಯ ಕಲಾವಿದೆ ಯಮುನಾಬಾಯಿ ಕಲಾಚಂದ್ರ‌ ಅವರಿಗೆ ಸುವರ್ಣ ಮಹೋತ್ಸವ ಪ್ರಶಸ್ತಿ ಪ್ರದಾನ

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು, ಶುಕ್ರವಾರ ಜಾನಪದ ಸಣ್ಣಾಟ ಕ್ಷೇತ್ರದಲ್ಲಿ ಅನುಪಮ‌ ಸೇವೆಯನ್ನು ಸಲ್ಲಿಸಿರುವ ಚಿಕ್ಕೋಡಿ ತಾಲ್ಲೂಕಿನ ಧುಳಗನವಾಡಿ ಗ್ರಾಮದ ಯಮುನಾಬಾಯಿ ಲಕ್ಷ್ಮಣ ಕಲಾಚಂದ್ರ ಅವರಿಗೆ ರಾಜ್ಯ ಸರಕಾರವು 2024 ನೇ ಸಾಲಿನ “ಕರ್ನಾಟಕ ಸಂಭ್ರಮ-50 ಸುವರ್ಣ ಮಹೋತ್ಸವ ಪ್ರಶಸ್ತಿ” ಯನ್ನು ನೀಡಿ ಗೌರವಿಸಿದೆ ಜಾನಪದ ಕಲಾಕ್ಷೇತ್ರದಲ್ಲಿ ಅನುಪಮ‌ ಸೇವೆಯನ್ನು ಶ್ಲಾಘಿಸಿದ ಸಚಿವರು, ಇವರ ಸೇವೆಯನ್ನು ಗುರುತಿಸಿ ಸರಕಾರವು ಸುವರ್ಣ ಮಹೋತ್ಸವ ಪ್ರಶಸ್ತಿಯನ್ನು ನೀಡಿದೆ ಎಂದು ಹೇಳಿದರು. ಅನಿವಾರ್ಯ ಕಾರಣಗಳಿಂದ ನವೆಂಬರ್ 1…

Read More

ಶಿರಸಂಗಿ ವಿವಿಧ್ದೂದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರಾಗಿ ಅವಿರೂಧವಾಗಿ ಆಯ್ಕೆ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಶಿರಸಂಗಿ ಗ್ರಾಮದಲ್ಲಿ ಶಿರಸಂಗಿ ವಿವಿಧ್ದೂದ್ದೇಶ ಪ್ರಾಥಮಿಕ ಗ್ರಾಮಿಣ ಕೃಷಿ ಸಹಕಾರ ಸಂಘದ ಆಡಳಿತ ಮಂಡಳಿಗೆ ಚುನಾವಣೆ ನಡೆದು ಚುನಾವಣೆಯಲ್ಲಿ ಸಾಮಾನ್ಯ ಕಾರ್ಯಗಾರ ಮತಕ್ಷೇತ್ರದಿಂದ ಆಯ್ಕೆಯಾದ ಕಲ್ಲನಗೌಡ ಬಸನಗೌಡ ಪಾಟೀಲ. ನಾಗಪ್ಪ ಬಸಪ್ಪ ಹೂಲಿ ಬಸಯ್ಯಾ ಚಂದ್ರಯ್ಯಾ ಶಿರಕೋಳಮಠ, ಮಲ್ಲಿಕಾರ್ಜುನ ಹನುಮಂತಪ್ಪ ಪೂಜಾರ, ಮಹಾಂತೇಶ ಶಿದ್ದಪ್ಪ ಪಂಚೆನವರ ಮತ್ತು ಸಾಮಾನ್ಯ ಸಾಲಗಾರರ ಮಹಿಳಾ ಮತ ಕ್ಷೇತ್ರದಿಂದ ಶ್ರೀಮತಿ ಮಹಾದೇವಿ ನೀಲಪ್ಪ ಬೆನಕಟ್ಟಿ, ಮತ್ತು ಶ್ರೀಮತಿ ಸುಮಿತ್ರಾ ಮಲ್ಲಿಕಾರ್ಜುನ ಗೊರವನಕೊಳ್ಳ, ಹಾಗೂ ಸಾಮಾನ್ಯ ಸಾಲಗಾರರ…

Read More