ರಾಮದುರ್ಗ ಪುರಸಭೆ ಕಲ್ಯಾಣ ಮಂಟಪ ಹಾಗೂ ಪುರಸಭೆ ಕಚೇರಿಯನ್ನು ದುರಸ್ತಿ ಪಡಿಸಲು ಪ್ರಶಾಂತ್ ಅಂಗಡಿ ಇವರಿಂದ ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ ಇವರಿಗೆ ಮನವಿ.
ರಾಮದುರ್ಗ ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿ ಬರುವ ಪುರಸಭೆ ಕಲ್ಯಾಣ ಮಂಟಪವು ದುರಸ್ತಿ ಇರುವುದರಿಂದಪುರಸಭೆಗೆ ಒಂದು ವರ್ಷಕ್ಕೆ ಸುಮಾರು 5 ರಿಂದ 8 ಲಕ್ಷದವರೆಗೆ ಬಾಡಿಗೆ ರೂಪದಲ್ಲಿ ಬರುವ ಆದಾಯವನ್ನು ಪುರಸಭೆ ಅವರು ಕಳೆದುಕೊಳ್ಳುತ್ತಿದ್ದೀರಿ. ಆದರೆ ಪುರಸಭೆ ಕಲ್ಯಾಣ ಮಂಟಪ ನಿರ್ಮಾಣವಾದಾಗಿನಿಂದ ಇದುವರೆಗೂ ಅಲ್ಲಿ ಸರಿಯಾಗಿ ವಿದ್ಯುತ್, ಶೌಚಾಲಯದ ನೀರು, ಕಿಡಕಿಗಳು, ರೂಮಿನ ಬಾಗಿಲುಗಳು ಸರಿಯಾಗಿ ಇಲ್ಲದೇ ಇರುವುದರಿಂದ ಇದುವರೆಗೂ ದುರಸ್ತಿ ಮಾಡದೆ ಇರುವುದು ಬೇಸರದ ಸಂಗತಿಯಾಗಿದೆ. ಸಭೆ ಸಮಾರಂಭಗಳಿಗೆ ಹಾಗೂ ಮದುವೆ ಸೀಜನ್ನಲ್ಲಿ ಬಡವರಿಗೆ ಈ ಕಲ್ಯಾಣ…
