ಅಕ್ರಮಗಳ ದೂರು: ತಕ್ಷಣವೇ ಸ್ಪಂದಿಸಲು ವಿಶೇಷ ವೆಚ್ಚ ವೀಕ್ಷಕರಾದ ಬಿ.ಮುರುಳಿಕುಮಾರ್ ಅವರು ನಿರ್ದೇಶನ ನೀಡಿದರು.
ಬೆಳಗಾವಿ, ಚುನಾವಣಾ ಅಕ್ರಮಗಳ ಕುರಿತು ಸಿವಿಜಿಲ್ ಮೂಲಕ ಬರುವ ಅಥವಾ ಸಾರ್ವಜನಿಕರು ನೀಡುವ ಯಾವುದೇ ದೂರುಗಳನ್ನು ನಿರ್ಲಕ್ಷ್ಯ ಮಾಡದೇ ತಕ್ಷಣವೇ ಪರಿಶೀಲನೆ ಕೈಗೊಳ್ಳಬೇಕು ಎಂದು ವಿಶೇಷ ವೆಚ್ಚ ವೀಕ್ಷಕರಾದ ಬಿ.ಮುರುಳಿಕುಮಾರ್ ಅವರು ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ನಡೆದ ಚುನಾವಣಾಧಿಕಾರಿಗಳು, ವೆಚ್ಚ ವೀಕ್ಷಕರು ಹಾಗೂ ವಿವಿಧ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಮತದಾನ ದಿನಾಂಕ ಸಮೀಪಿಸುತ್ತಿರುವುದರಿಂದ ಅಕ್ರಮಗಳ ತಡೆಗೆ ತೀವ್ರ ನಿಗಾ ವಹಿಸಬೇಕು. ಯಾವುದೇ ದೂರು ಅಥವಾ ಮಾಹಿತಿ ಬಂದಾಗ ಕೂಡಲೇ ಸ್ಥಳಕ್ಕೆ…
