ಬೆಟಗೇರಿ ಪ್ರೌಢ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಂದ ವಾಗ್ದಾನ..!
ಶಾಲೆಯ ನೋಟಿಸ್ ಫಲಕದ ಮೇಲೆ ವಿದ್ಯಾರ್ಥಿ ಭಾವಚಿತ್ರ*ಶಿಕ್ಷಕರಿಂದ ವಿಶೇಷ ಪಾಠ ಪ್ರವಚನ ಬೆಟಗೇರಿ:ಶಿಕ್ಷಕರಿಂದ ವಿಶೇಷ ಗಮನ… ಪಾಠ ಪ್ರವಚನ… ವಿದ್ಯಾರ್ಥಿಗಳಿಂದ ವಾಗ್ದಾನ.., ಫಲಿಂತಾಂಶ ಸುಧಾರಣೆೆಗೆ ಪ್ರೇರಣೆ… ಇದೇನು.? ಮೂಡಲಗಿ ಶೈಕ್ಷಣಿಕ ವಲಯ ವ್ಯಾಪ್ತಿಯ ಬೆಟಗೇರಿ ಗ್ರಾಮದ ವಿ.ವಿ.ಡಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ವಿಶೇಷ ಕಾರ್ಯಕ್ರಮ ನ.೭ರಂದು ನಡೆಯಿತು.ಶಾಲೆಯ ಮುಖ್ಯಾಧ್ಯಾಪಕ, ಸಹಶಿಕ್ಷಕರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಉತ್ಸಾಹ ತುಂಬಲು ವಿದ್ಯಾರ್ಥಿಗಳಿಂದ ವಾಗ್ದಾನ ಎಂಬ ವಿನೂತನ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ಸ್ವ ಸಾಮಥ್ಯದ ಶೇ೭೫, ಶೇ೮೦,…
