ವಿಜಯ ಸೇನಾ ಸಮಿತಿಯಿಂದ ಹಮ್ಮಿಕೊಂಡ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಿಪಿಐ ವಿನಾಯಕ ಬಡಿಗೇರ ಚಾಲನೆ ನೀಡಿದರು.
ಜನರ ಸಮಸ್ಯೆಗಳಿಗೆ ಸದಾ ಮಿಡಿಯುತ್ತಿರುವ ಹಾಗೂ ಅವುಗಳನ್ನು ಪರಿಹರಿಸುವಲ್ಲಿ ಸಾಮಾಜಿಕ ಸೇವೆ ಮಾಡುವಲ್ಲಿ ಪ್ರಾಮಾಣಿಕತೆಯಿಂದ ಶ್ರಮಿಸುತ್ತಿರುವ ರಾಮದುರ್ಗದ ವಿಜಯ ಸೇನಾ ಸಮಿತಿ, ಉಚಿತವಾಗಿ ಹೆಲ್ಮೆಟ್ ವಿತರಿಸುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿತು. ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ವಿಜಯ ಸೇನಾ ಸಮಿತಿಯಿಂದ ಹಮ್ಮಿಕೊಂಡ ಉಚಿತ ಹೆಲ್ಮೆಟ್ ವಿತರಣಾ ಕಾರ್ಯಕ್ರಮಕ್ಕೆ ಸಿಪಿಐ ವಿನಾಯಕ ಬಡಿಗೇರ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ಬೈಕ್ ಸಂಚಾರ ಮಾಡುವ ಸವಾರರು ತಮ್ಮ ಜೀವದ ರಕ್ಷಣೆಗೆ ಆದ್ಯತೆ…
