ರಾಮದುರ್ಗದಲ್ಲಿ ಎಗ್ಗಿಲ್ಲದೇ ತಂಬಾಕು ಮಿಶ್ರಿತ ಮಾವಾ ಮಾರಾಟ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ತಂಬಾಕು ಮಿಶ್ರಿತ ಮಾವಾ ಮಾರಾಟ ಹೆಚ್ಚಾಗಿದೆ.

ಮೊದಲು ಮಾವಾ ತಯಾರ ಮಾಡಲು ಬಿಳಿಯ ಅಡಕೆಯನ್ನು ತಂದು ನೀರಿನಲ್ಲಿ ಒಂದು ದಿನ ನೆನೆಸಿಟ್ಟು ನಂತರ ಅದನ್ನು ಚಿಕ್ಕ ಚಿಕ್ಕ ಓಳುಗಳನ್ನು ಮಾಡಿ ಅದರಲ್ಲಿ ತಂಬಾಕು ಹಾಗೂ ಸುಣ್ಣವನ್ನು ಮಿಶ್ರಣ ಮಾಡಿ ಮಾವಾ ತಯಾರಿ ಮಾಡಿಕೊಡುತ್ತಿದ್ದರು ಇದರ ಅವಧಿ ಒಂದು ದಿನ ಮಾತ್ರ ಇರುತ್ತು.

ಆದರೆ ಇತ್ತೀಚಿನ ದಿನಗಳಲ್ಲಿ ಕೆಮಿಕಲ್ಸ್ ಮಿಶ್ರಣ ಮಾಡಿ ಮಾವಾ ತಯಾರು ಮಾಡುತ್ತಾರೆ ಕೆಮಿಕಲ್ಸ್ ಮಿಶ್ರಣ ಮಾವಾದ ಅವಧಿ ಒಂದು ವಾರ ಬರುತ್ತೆ ಎಂದು ಸಾರ್ವಜನಿಕರು ಹೇಳುತ್ತಾರೆ

12 ವರ್ಷದ ವಯಸ್ಸಿನ ಮಕ್ಕಳಿಂದ ಹಿಡಿದು ಹಿರಿಯ ನಾಗರಿಕವರೆಗೂ
ತಂಬಾಕು ಮಿಶ್ರಿತ ಮಾವನ್ನು ಸೇವಿಸುತ್ತಾರೆ ತಂಬಾಕು,ಗುಟ್ಕಾ ಇವು ಬಾಯಿ ಕ್ಯಾನ್ಸರ್ ಗೆ ಮೂಲವಾಗುವಂತಹ ಮಾದಕವಸ್ತುಗಳು.

ರಾಮದುರ್ಗ ನಗರದಲ್ಲಿ ಮಾವಾ ಎಂಬ ಹೆಸರಿನ ಮಾದಕ ಪದಾರ್ಥದ ಹಾವಳಿ ಮತ್ತೆ ಜೋರಾಗಿದೆ.
ಮಾವಾ ತಿಂದು ಅನೇಕರು ಕ್ಯಾನ್ಸರ್ ಗೆ ಬಲಿಯಾಗುತ್ತಿದ್ದಾರೆ.

ಇದಕ್ಕೆ ಬ್ರೆಕ್ ಹಾಕುವ ಪ್ರಯತ್ನ ಒಂದು ಕಡೆ ನಡೆದರೂ ಇದರ ಹಾವಳಿ ಮಾತ್ರ ಎಗ್ಗಿಲ್ಲದೆ ಮತ್ತೆ ಪ್ರಾರಂಭವಾಗಿ ಅದು ಇನ್ನು ಹೆಚ್ಚಾಗುತ್ತಾ ಸಾಗುತ್ತಿದೆ.

ರಾಮದುರ್ಗ ಹಾಗೂ ಸುತ್ತಮುತ್ತ ಹಳ್ಳಿಗಳಲ್ಲಿ ಇದರ ಮಾರಾಟ ಹಾಗೂ ಸೇವನೆ ಜೋರಾಗಿದೆ. ಇದಕ್ಕೆ ಯುವಕರು ಸೇರಿದಂತೆ ಎಲ್ಲ ವಯೋಮಾನದ ಜನರು ಬಲಿಯಾಗಿ ಬಾಯಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ.

ಪೋಲಿಸ್ ಇಲಾಖೆ ಹಾಗೂ ಆರೋಗ್ಯ ಇಲಾಖೆಯಿಂದ ಸಾಕಷ್ಟು ಜಾಗೃತಿ ಕೂಡ ಮೂಡಿಸುತ್ತಿದ್ದರೂ ಇದರ ದುಷ್ಚಟಕ್ಕೆ ಒಳಗಾದವರು ಹೊರ ಬರುತ್ತಿಲ್ಲ.

ರಾಜ್ಯ ಸರ್ಕಾರಗಳಿಂದ ತಂಬಾಕು ಸೇವನೆ ಕಾನೂನಾತ್ಮಕವಾಗಿ ನಿಷಿದ್ಧವಾಗಿದ್ದರು ಕೊಡ ಕದ್ದು ಮುಚ್ಚಿ ಮಾರಾಠ ಹೆಚ್ಚಾಗಿದ್ದು ಅಂತಹ ಸ್ಥಳಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಬೇಕೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಈ ಮಾವಾದಿಂದ(ತಂಬಾಕು) ನಾಗರಿಕ ಸಮಾಜ ಹಾಳಾಗುತ್ತಿದೆ ನಗರದೆಲ್ಲೆಡೆ ಕ್ಯಾನ್ಸರ್ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ ಈ ಮಾವ ದಂಧೆಯಿಂದ ಅನೇಕ ಬಡ ಕುಟುಂಬಗಳು ಬೀದಿಗೆ ಬಂದಿವೆ ಅತೀಯಾದ ಮಾವ ಸೇವನೆಯಿಂದ ನಾಗರಿಕರು ದೈಹಿಕವಾಗಿ ಕುಗ್ಗುತ್ತಿದ್ದಾರೆ ಆದರು ಮಾವಾ ಮಾರಾಟಾಗಾರರು ತಮ್ಮ ಕುಟುಂಬದ ಸಂಸಾರ ನೀಗಿಸಲು ಮತ್ತೋಬ್ಬರ ಮನೆ ಸಂಸಾರ ಹಾಳು ಮಾಡಲು ಹೊರಟಿದ್ದಾರೆ ಇದು ಯಾವ ನ್ಯಾಯ್ ಎಂದು ಸಾರ್ವಜನಿಕರ ಚರ್ಚೆಗೆ ಗ್ರಾಸ್ತವಾಗಿದೆ

ಎಗ್ಗಿಲ್ಲದೇ ತಂಬಾಕು ಮಿಶ್ರಿತ ಮಾವಾ ಮಾರಾಟ ಮತ್ತೆ ಅದು ತಲೆಯೆತ್ತಿ ನಿಂತಿದ್ದರೂ ಕೇಳುವವರಿಲ್ಲದಂತಾಗಿದೆ. ದಿನಕ್ಕೊಂದು ಮಾವಾ ಅಂಗಡಿ ತೆರೆಯುತಿದ್ದಾವೆ.

ತಕ್ಷಣವೇ ಈ ಮಾವಾ ಮಾರಾಟಾ ಅಂತಹ ಅಕ್ರಮ ಅಡ್ಡೆಗಳ ಮೇಲೆ ಹಾಗೂ ಅಂಗಡಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

About The Author