ಎರಡಕ್ಷರ ಕನ್ನಡ ಬರೆಯಲಾಗದೇ ಪರದಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ
ಕೊಪ್ಪಳ: ಕನ್ನಡದ ಎರಡಕ್ಷರ ಬರೆಯಲು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಪರದಾಡಿರುವ ಘಟನೆ ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಅಂಗನವಾಡಿ ಕೇಂದ್ರದಲ್ಲಿ ನಡೆದಿದ್ದು, ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಂಗನವಾಡಿ ಕೇಂದ್ರಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ ಭೇಟಿ ನೀಡಿದ್ದರು. ತರಗತಿಯ ಬೋರ್ಡ್ ನಲ್ಲಿ ಕಾರಟಗಿ ಅಂಗನವಾಡಿ ಕೇಂದ್ರ, JP ನಗರ, ಉದ್ಘಾಟನಾ ಸಮಾರಂಭ ಎಂದು ಬರೆಯಲಾಗಿತ್ತು. ಸಚಿವರು ಈ ವಾಕ್ಯದ ಕೆಳಗೆ ಶುಭವಾಗಲಿ ಎಂದು ಬರೆಯಲು…
