ಸತ್ಕಾರ್ಯ ಫೌಂಡೇಶನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಮದುರ್ಗ ನಗರದ ನೇತಾಜಿ ಸುಭಾಷ್ ಚಂದ್ರ ಭೋಸ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಬೃಹತ್ ಗಾಳಿಪಟ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ನಗರದ ಸಾಕಷ್ಟು ಜನ ತರುಣರು ಮಹಿಳೆಯರು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಗಾಳಿಪಟಗಳ ಮೇಲೆ ಸಮಾಜಮುಖಿ ಸಂದೇಶಗಳನ್ನು ಚಿತ್ರಿಸಲಾಗಿತ್ತು. ಸಾಲುಮರದ ತಿಮ್ಮಕ್ಕ, ನೇತ್ರದಾನದ ಮಹತ್ವ, ಅಗ್ನಿಶಾಮಕ ಅಧಿಕಾರಿಗಳ ಶೌರ್ಯ, ಮಹಿಳೆಯರ ಮೇಲಿನ ಶೋಷಣೆ, ನಶಿಸಿ ಹೋಗುತ್ತಿರುವ ಕೌಶಲ್ಯಗಳ ಅರಿವು ಹೀಗೆ ನಾನಾ ವಿಚಾರಗಳನ್ನು ಒಳಗೊಂಡಂತೆ ಗಾಳಿಪಟಗಳ ಮೇಲೆ ಚಿತ್ರಗಳನ್ನು ರಚಿಸಲಾಗಿತ್ತು. ದೇಸಿ ಕ್ರೀಡೆಗಳು ಬರಿ ಮನರಂಜನೆ ಮಾತ್ರವಲ್ಲ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ನಮಗೆ ನಾವೇ ಮಾಡಿಕೊಳ್ಳುವ ಚಿಕಿತ್ಸೆಯಾಗಿದ್ದು ಆಧುನೀಕರಣದ ಹೆಸರಿನಲ್ಲಿ ಟೊಳ್ಳು ಕಾರಣಗಳನ್ನು ನೀಡಿ ನಮ್ಮ ಪರಂಪರಾಗತ ಕ್ರೀಡೆಗಳನ್ನು ನಾವೇ ಮರೆಯುತ್ತಿದ್ದೇವೆ ಅದನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ನೀಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಸತ್ಕಾರ್ಯ ಫೌಂಡೇಶನ್ ಅಧ್ಯಕ್ಷ ಶ್ರೀ ಸಂಗಮೇಶ ಉದಪುಡಿ ಅಭಿಮತ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ರಾಮದುರ್ಗ ತಾಲೂಕು ಅಧ್ಯಕ್ಷ ಡಾ. ವರುಣ ಬೀಳಗಿ, ವಿಶ್ವಹಿಂದೂ ಪರಿಷತ್ ಅಧ್ಯಕ್ಷ ಪ್ರಕಾಶ ಸೂಳಿಬಾವಿ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ಇಲಾಖೆ ಸಿಬ್ಬಂದಿ & ಅಧಿಕಾರಿಗಳು ಹಾಗೂ ಮಾಜಿ ಸೈನಿಕರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು. ರಂಗುರಂಗಿನ ಗಾಳಿಪಟಗಳು ಉತ್ಸವಕ್ಕೆ ಮೆರಗು ನೀಡಿದ್ದವು ಭಾರತಮಾತೆಗೆ ಜಯವಾಗಲಿ ಎಂಬ ಘೋಷನೆಯನ್ನು ಸಾಮೂಹಿಕವಾಗಿ ಹೇಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು
ದೇಸಿ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದು ನಮ್ಮ ಜವಾಬ್ದಾರಿ

WhatsApp Group
Join Now


