ಜುಲೈ 10, ರಂದು ಬೆಳಗಾವಿಯಲ್ಲಿ ವಿಭಾಗ ಮಟ್ಟದ ಅಭಿನಯ ಸಮೇತ ರಂಗ ಸಂಗೀತ ತರಬೇತಿ ಹಾಗೂ ರಂಗಗೀತೆಗಳ ಕಲಿಕಾ ಕಾರ್ಯಾಗಾರ ಜರಗಲಿದೆ.

WhatsApp Group Join Now

ಕರ್ನಾಟಕ ಸರ್ಕಾರ ವೃತ್ತಿ ರಂಗಭೂಮಿ ರಂಗಾಯಣ, ದಾವಣಗೆರೆ ವತಿಯಿಂದ ಬೆಳಗಾವಿ ವಿಭಾಗದ ರಂಗಾಸಕ್ತರಿಗಾಗಿ ವಿಭಾಗ ಮಟ್ಟದ ಅಭಿನಯ ಸಮೇತ ರಂಗ ಸಂಗೀತ ತರಬೇತಿ ಹಾಗೂ ರಂಗಗೀತೆಗಳ ಕಲಿಕಾ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.

ರಂಗಭೂಮಿಯ ಬಗ್ಗೆ ಆಸಕ್ತಿ ಹೊಂದಿರುವ ಯುವ ಕಲಾವಿದರಿಗೆ ಅಭಿನಯ, ರಂಗ ಸಂಗೀತ, ಸ್ವರ ಸಂಸ್ಕರಣೆ ಹಾಗೂ ರಂಗಗೀತೆಗಳ ಪ್ರಾಯೋಗಿಕ ತರಬೇತಿಯನ್ನು ಅನುಭವಿ ತರಬೇತುದಾರರಿಂದ ನೀಡಲಾಗುತ್ತದೆ. ತರಬೇತಿ ಪೂರ್ಣಗೊಳಿಸಿದ ಅಭ್ಯರ್ಥಿಗಳಿಗೆ ಶಿಷ್ಯ ವೇತನ ಜೊತೆಗೆ ಪ್ರಮಾಣಪತ್ರವನ್ನು ವಿತರಿಸಲಾಗುವುದು.

18 ರಿಂದ 40 ವರ್ಷದೊಳಗಿನ ಆಸಕ್ತ ಅಭ್ಯರ್ಥಿಗಳಿಗೆ
ನೇರ ಸಂದರ್ಶನವನ್ನು
ಜುಲೈ 10, 2026 (ಶುಕ್ರವಾರ) ಬೆಳಿಗ್ಗೆ 11.30 ಗಂಟೆಗೆ ಕುಮಾರ ಗಂಧರ್ವ ಕಲಾಮಂದಿರ ಆವರಣ, ಸುಭಾಷ್ ನಗರ, ಬೆಳಗಾವಿಯಲ್ಲಿ ನಡೆಸಲಾಗುತ್ತದೆ.(ಸಂದರ್ಶನಕ್ಕೆ ಬರುವಾಗ ಆಧಾರ್ ಕಾರ್ಡ್ ಕಡ್ಡಾಯವಾಗಿ ಹಾಜರಪಡಿಸಬೇಕು)

(ತಾವು ಕಳಿಸಲಿರುವ ಅಭ್ಯರ್ಥಿಗಳ ಹೆಸರು ವಯಸ್ಸು ಮತ್ತು ಮೊಬೈಲ್ ಸಂಖ್ಯೆಯನ್ನ ನನ್ನ 7019313015 ಸಂಖ್ಯೆಗೆ ದಯವಿಟ್ಟು ವಾಟ್ಸಪ್ಪ್ ಮಾಡಿ)

ಎನ್ ನಟರಾಜ್ ಸಂಚಾಲಕರು
ಅಭಿನಯ ಸಮೇತ ರಂಗ ಸಂಗೀತ ತರಬೇತಿ ಹಾಗೂ ರಂಗಗೀತೆಗಳ ಕಲಿಕಾ ಕಾರ್ಯಾಗಾರ

About The Author