ಕೊಟ್ಟೂರು:ಚೆಕ್ ಡ್ಯಾಂ ಕಾಮಗಾರಿ ಕಳಪೆ, ತನಿಖೆ ಮಾಡಿ-ಇಒಗೆ ರೈತ ಮುಖಂಡ ಒತ್ತಾಯ
ವಿಜಯನಗರ ಜಿಲ್ಲೆ ಕೊಟ್ಟೂರು:ತಾಲೂಕಿನ ನಾಗರಕಟ್ಟೆ ಹಾಗೂ ಕೆಐನಹಳ್ಳಿ ವ್ಯಾಪ್ತಿಯ, ಹಳ್ಳಗಳ ಬದುವಿನಲ್ಲಿ ಕೃಷಿ ಚೆಕ್ ಡ್ಯಾಂ ನಿರ್ಮಾಣದಲ್ಲಿ. ಭಾರೀ ಅವ್ಯವಹಾರ ನಡೆದಿದೆ ತನಿಖೆ ಮಾಡಿ ಎಂದು, ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೋಡಿಹಳ್ಳಿ ಭರ್ಮಣ್ಣ ದೂರಿದ್ದಾರೆ. ಹಳೇ ಚೆಕ್ ಡ್ಯಾಂನ ಕಲ್ಲುಗಳನ್ನೇ ಬಳಸಲಾಗಿದೆ, ಪಕ್ಕದಲ್ಲಿನ ಹಳ್ಳವನ್ನೆ ಅಗೆದು ಬಗೆದು. ಕನಿಷ್ಠ ದರ್ಜೆಯ ಮರಳನ್ನು ಹಾಗೂ ಕಡಿಮೆ ದರ್ಜೆಯ ಸಾಮಾಗ್ರಿಗಳನ್ನು ಬಳಸಲಾಗಿದ್ದು, ಈ ಚೆಕ್ ಡ್ಯಾಂಗಳನ್ನು ಅವೈಜ್ಞಾನಿಕ ರೀತಿಯಲ್ಲಿ ತುಂಬಾ ದುರ್ಭಲರೀತಿಯಲ್ಲಿ ನಿರ್ಮಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಸಂಬಂಧಿಸಿದಂತೆ…
