ಮುಖ್ಯಮಂತ್ರಿಗಳಿಗೆ ಪ್ರಾಶಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲ ಕ್ರಮವನ್ನು ಖಂಡಿಸಿ ವಿವಿದ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟçಪತಿಯವರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ಆರ್.ಟಿ.ಅಯ್. ಕಾರ್ಯಕರ್ತನ ಮನವಿ ಮೇರೆಗೆ ಅದನ್ನು ತನಿಖೆ ನಡೆಸದೆ ಮುಖ್ಯಮಂತ್ರಿಗಳಿಗೆ ದಿಢೀರಗಾಗಿ ಶೋಕಾಸ್ ನೋಟಿಸ್ ಕೊಟ್ಟ, ಪ್ರಾಶಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರಚಂದ ಗೆಹೆಲೊಟ ಇವರ ನೀತಿಯನ್ನು ಖಂಡಿಸಿ ವಿವಿದ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟçಪತಿಯವರಿಗೆ ಮನವಿ ಅರ್ಪಿಸಲಾಯಿತು.ಸಿ.ಪಿ.ಎಂ. ಪಕ್ಷದ ಮುಖಂಡ ಜಿ.ಎಒ. ಜೈನೆಖಾನ್ ಮಾತನಾಡಿ, ಒಂದು ಚುನಾಯಿತ ಸರ್ಕಾರವನ್ನು ಮೂಡಾ ಹಗರಣವನ್ನು ಮುಂದಿಟ್ಟುಕೊAಡು ಅಸ್ತಿರಗೊಳಿಸುವುದು ಸಂವಿಧಾನ ಪ್ರಜಾಪ್ರಬುತ್ವ ವಿರೋಧಿ ಕೆಲಸವಾಗಿದೆ….

Read More

ಸ್ಟೇಟ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸ್ಟೇಟ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಪ್ರಾಚಾರ್ಯ ಎಸ್.ಎಸ್. ಬೂದೇಶ್ವರ ಮಾತನಾಡಿ, ಸೋದರತ್ವದ ಬಾಂಧವ್ಯ ಬೆಳೆಸುವ ಈ ಪವಿತ್ರ ಹಬ್ಬವನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಸೋದರತ್ವದ ಭಾವನೆಗಳನ್ನು ಬೆಳೆಸುವದರ ಜೊತೆಗೆ ನಮ್ಮ ಹಬ್ಬಗಳ ಪಾವಿತ್ರಯತೆಯನ್ನು ತಿಳಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ಬೆಟಗೇರಿ:ಕ್ರೀಡಾ ಸಮವಸ್ತ್ರ ವಿತರಣೆ ಕಾರ್ಯಕ್ರಮ ನಡೆಯಿತು.

ಬೆಟಗೇರಿ:ಪ್ರತಿಯೊಬ್ಬ ಶಾಲಾ ಮಗು ಕಲಿಕಾ ಜೀವನವನ್ನು ಸಾರ್ಥಕ ಮಾಡಿಕೊಳ್ಳಬೇಕು. ವಿದ್ಯಾರ್ಥಿ ವೇತನ ಪಡೆದ ಹಣವನ್ನು ವಿದ್ಯಾರ್ಥಿಗಳು ತಮ್ಮ ಶಿಕ್ಷಣಕ್ಕಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದು ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ಮ್ಯಾನೇಜರ್ ಜಗದೀಶ ಜಾಧವ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಕೆನರಾ ಬ್ಯಾಂಕ್ ಶಾಖೆಯ ವತಿಯಿಂದ ಸಿಎಸ್‌ಆರ್ ಯೋಜನೆಯಡಿಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಕೆನರಾ ವಿದ್ಯಾ ಜ್ಯೋತಿ ವಿದ್ಯಾರ್ಥಿ ವೇತನ ಮತ್ತು ಕ್ರೀಡಾ ಸಮವಸ್ತçವನ್ನು ಗೋಕಾಕ ತಾಲೂಕಿನ ಗೋಸಬಾಳ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಮತ್ತು ಪ್ರೌಢ ಶಾಲೆಯ ವಿದ್ಯಾರ್ಥಿಗಳಿಗೆ ಇತ್ತೀಚೆಗೆ…

Read More

ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯ ಅಗ್ನಿ ದುರಂತ: ಸ್ಪಷ್ಟ ವರದಿ ಸಲ್ಲಿಸಲು ಎಸ್.ಕೆ.ವಂಟಿಗೋಡಿ ಸೂಚನೆ

ಬೆಳಗಾವಿ ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸೋಮವಾರ ನಡೆದ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸಭೆಯ ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯರಾದ ಎಸ್.ಕೆ.ವಂಟಿಗೋಡಿ ವಹಿಸಿ ಅವರು ಮಾತನಾಡಿದರು. ನಾವಗೆ ಗ್ರಾಮದ ಸ್ನೇಹಂ ಕಾರ್ಖಾನೆಯ ಅಗ್ನಿ ದುರಂತದ ಪ್ರಕರಣದ ಕುರಿತು ಪತ್ರಿಕೆಗಳಲ್ಲಿ ಸಾಕಷ್ಟು ಭಿನ್ನವಾದ ಅಭಿಪ್ರಾಯಗಳು ಪ್ರಕಟವಾಗಿವೆ. ಈ ನಿಟ್ಟಿನಲ್ಲಿ ಮಾನವ ಹಕ್ಕುಗಳ ಆಯೋಗದದಿಂದ ನಿಖರವಾದ ವರದಿಯನ್ನು ಆಧರಿಸಿ ಪರಿಶೀಲನೆ ನಡೆಸಲಾಗುತ್ತಿದೆ. ಈ…

Read More

ಬಳ್ಳಾರಿ ಗರ್ಭಿಣಿ ಮಹಿಳೆಯರು ಸೂಕ್ತ ಚಿಕಿತ್ಸೆ ಪಡೆಯಬೇಕು: ಡಿಹೆಚ್‌ಓ ಡಾ.ವೈ.ರಮೇಶ್‌ಬಾಬು

ಬಳ್ಳಾರಿ ನಗರದ ಬಂಡಿಹಟ್ಟಿ ವ್ಯಾಪ್ತಿಯ ಆಶ್ರಯ ಕಾಲೋನಿಯಲ್ಲಿ ಗರ್ಭಿಣಿ ಮನೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶಬಾಬು ಸೋಮವಾರ ಭೇಟಿ ನೀಡಿ, ಆರೋಗ್ಯ ವಿಚಾರಿಸಿ ಅವರು ಮಾತನಾಡಿದರು.ಗರ್ಭಿಣಿಯ ಆರೈಕೆಯನ್ನು ಕುಟುಂಬದ ಸದಸ್ಯರು ಅದರಲ್ಲೂ ಗಂಡನ ಮನೆಯಲ್ಲಿ ಮನೆಯ ಮಗಳಂತೆ ಕಾಳಜಿವಹಿಸಬೇಕು ಎಂದು ಹೇಳಿದರು.ರಕ್ತದಲ್ಲಿ ಕಬ್ಬಿಣಾಂಶ 12 ಹೆಚ್‌ಬಿ ಗಿಂತ ಹೆಚ್ಚು ಇರುವಂತೆ ಮುತವರ್ಜಿವಹಿಸಬೇಕು. ಹೆರಿಗೆಯನ್ನು ಸರ್ಕಾರಿ ಆಸ್ಪತ್ರೆಯಲ್ಲಿಯೇ ಮಾಡಿಸಲು ಆದ್ಯತೆ ನೀಡಬೇಕು. ಹೆರಿಗೆಯಾದ 45 ದಿನಗಳವರೆಗೆ ತಾಯಿ-ತಂದೆ, ಗಂಡ ಹಾಗೂ ಮನೆಯ ಸದಸ್ಯರು ಬಾಣಂತಿಯ…

Read More

ಜಿಲ್ಲಾಡಳಿತದಿಂದ ಕಾಯಕಯೋಗಿ ನುಲಿಯ ಚಂದಯ್ಯ ಜಯಂತ್ಯೋತ್ಸವ

ಬಳ್ಳಾರಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಸೋಮವಾರ ಏರ್ಪಡಿಸಿದ್ದ ನುಲಿಯ ಚಂದಯ್ಯ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಡಾ.ಬಾಬು ಜಗಜೀವನರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ ಉದ್ಘಾಟಿಸಿ ಅವರು ಮಾತನಾಡಿದರು.ಹನ್ನೆರಡನೇ ಶತಮಾನದ ವಚನಕಾರರಲ್ಲಿ ಒಬ್ಬರಾದ ನುಲಿಯ ಚಂದಯ್ಯನವರು ಮಹಾನ್ ಕಾಯಕಯೋಗಿ ಆಗಿದ್ದರು. ಅವರು ತಮ್ಮ ವಚನಗಳ ಮೂಲಕ ಧಾರ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಸಾರಿ, ಜನ ಸಾಮಾನ್ಯರಲ್ಲಿ ಭಾವೈಕ್ಯತೆಯ…

Read More

ಮಿಷನ್ ವಿದ್ಯಾಕಾಶಿಪರೀಕ್ಷಾ ಫಲಿತಾಂಶ ಸುಧಾರಣೆಯಲ್ಲಿ ಮುಖ್ಯಶಿಕ್ಷಕರ ಮತ್ತು ಪಾಲಕರ ಪಾತ್ರ ಮುಖ್ಯವಾಗಿದೆ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ ಎಸ್.ಎಸ್.ಎಲ್.ಸಿ ಪರೀಕ್ಷೆಯು ಮಕ್ಕಳ ವಿದ್ಯಾರ್ಥಿ ಜೀವನದಲ್ಲಿ ಮುಖ್ಯ ಘಟ್ಟ. ಕಳೆದ ಸಾಲಿನ ಪರೀಕ್ಷಾ ಫಲಿತಾಂಶ ಕಡಿಮೆ ಆಗಿದ್ದು, ಶೇ 74.85 ರಷ್ಟು ಫಲಿತಾಂಶ ಬಂದಿದೆ. ಇದನ್ನು ಸುಧಾರಿಸಿ ಶೇ 100 ರಷ್ಟು ಮಾಡುವಲ್ಲಿ ವಿದ್ಯಾರ್ಥಿಗಳ ಪಾಲಕರ ಮತ್ತು ಶಾಲಾ ಮುಖ್ಯಶಿಕ್ಷಕರ ಪಾತ್ರ ಮುಖ್ಯವಾಗಿದೆ ಎಂದು ಮಿಷನ್ ವಿದ್ಯಾಕಾಶಿ ಯೋಜನೆ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಹೇಳಿದರು. ಅವರು ಇಂದು ಬೆಳಿಗ್ಗೆ ಜೆ.ಎಸ್.ಎಸ್. ಕಾಲೇಜು ಆವರಣದ ಸನ್ನಿಧಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ…

Read More

ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸಿದರು.

ಧಾರವಾಡ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ ಸಾಂಸ್ಕøತಿಕ ಭವನದಲ್ಲಿ ಆಯೋಜಿಸಲಾದ ಶಿವಶರಣ ಶ್ರೀ ನುಲಿಯ ಚಂದಯ್ಯ ಜಯಂತಿಯ ಪ್ರಯುಕ್ತ ಶಿವ ಶರಣ ಶ್ರೀ ನುಲಿಯ ಚಂದಯ್ಯ ಅವರ ಭಾವಚಿತ್ರಕ್ಕೆ ಅಪರ ಜಿಲ್ಲಾಧಿಕಾರಿ ಗೀತಾ ಸಿಡಿ ಪುಷ್ಪಾಚನೆ ಸಲ್ಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನುಲಿಯ ಚಂದಯ್ಯನವರು, ಕಾಯಕ ಶರಣರಾದ ಬಸವಣ್ಣನವರ ಜೊತೆ ಸೇರಿ ಸಮಜದಲ್ಲಿರುವಂತಹವರನ್ನು ತಮ್ಮ ತಮ್ಮ ಕಸುಬುಗಳ ಮೂಲಕ ಎಲ್ಲರಂತೆ ದುಡಿದು ಜೀವನ ನಡೆಸಿಕೊಂಡು ಬದುಕುವಂತೆ ಸಮಾಜಕ್ಕೆ ಪ್ರೇರಣೆ ನೀಡಿದರು. ಚಂದ್ಯಯನವರು ಮನೆಯಲ್ಲಿ ಕೆರೆಯ…

Read More

ಬೆಟಗೇರಿ:ಗ್ರಾಮದ ಪ್ರಮುಖ ಬೀದಿಗಳಲ್ಲಿ ವೀರಭದ್ರೇಶ್ವರ ದೇವರ ಮತ್ತು ಭದ್ರಕಾಳಿ ಮಾತೆ ಮೂರ್ತಿಗಳ ಪಲ್ಲಕ್ಕಿ ಉತ್ಸವ ನಡೆಯಿತು.

ವಿಜೃಂಭನೆಯಿಂದ ನಡೆದ ಬೆಟಗೇರಿ ವೀರಭದ್ರೇಶ್ವರ ಜಾತ್ರಾಮಹೋತ್ಸವಪುರವಂತರ ಭಕ್ತಿಯ ಪರಾಕಷ್ಟೇ ಪ್ರದರ್ಶನ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಗಣ್ಯರಿಗೆ ಸತ್ಕಾರಬೆಟಗೇರಿ:ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಜಾಗೃತ ವೀರಭದ್ರೇಶ್ವರ ದೇವರ ದೇವಾಲಯದಲ್ಲಿ ನೂಲ ಹುಣ್ಣಿಮೆ ಮತ್ತು ಶ್ರಾವಣ ಮಾಸದ ಪ್ರಯುಕ್ತ ಸ್ಥಳೀಯ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವ ವಿಜೃಂಭನೆಯಿಂದ ನಡೆಯಿತು.ಬೆಳಗ್ಗೆ 6 ಗಂಟೆಗೆ ಇಲ್ಲಿಯ ವೀರಭದ್ರೇಶ್ವರ ದೇವರ ಗದ್ದುಗೆಗೆ ಮಹಾರುದ್ರಾಭಿಷೇಕ, ಮಹಾಪೂಜೆ ಜರುಗಿತು. ಮುಂಜಾನೆ ೮ಗಂಟೆಗೆ ಆರತಿ, ಕರಡಿ ಮಜಲು, ವಾದ್ಯಮೇಳದೊಂದಿಗೆ ಪುರವಂತರಿಂದ ವೀರಭದ್ರೇಶ್ವರ ದೇವರ ಒಡಪು ಹೇಳುವ…

Read More

2.89 ಕೋಟಿ ರೂಪಾಯಿ ಲಾಭಗಳಿಸಿದ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್

ಬೆಂಗಳೂರು, ಸಹಕಾರಿ ವಲಯದ ಪ್ರಮುಖ ಬ್ಯಾಂಕ್ ಆಗಿರುವ ಬೆಂಗಳೂರಿನ ಬಸವನಗುಡಿಯ ಶ್ರೀ ಚರಣ್ ಸೌಹಾರ್ಧ ಕೋ ಆಪರೇಟೆವ್ ಬ್ಯಾಂಕ್ ಲಿಮಿಟೆಡ್, ಈ ಬಾರಿಯೂ ಲಾಭದತ್ತ ಸಾಗಿದ್ದು, ಒಟ್ಟಾರೆ 2.89 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ. ಬ್ಯಾಂಕ್‌ನ 28 ನೇ ಸರ್ವ ಸದಸ್ಯರ ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಬಿ.ವಿ.ಧ್ವಾರಕನಾಥ್ ವಾರ್ಷಿಕ ಲೆಕ್ಕಪತ್ರಗಳನ್ನು ಮಂಡಿಸಿದರು. ಕಳೆದ ವರ್ಷ ಬ್ಯಾಂಕ್ 2.85 ಕೋಟಿ ರೂಪಾಯಿ ಲಾಭಗಳಿಸಿತ್ತು. ಎಸ್.ಎಸ್.ಎಲ್.ಸಿಯಲ್ಲಿ ಮತ್ತು ಪಿಯುಸಿ ಉತ್ತಮ ಸಾಧನೆ ಮಾಡಿದ ಬ್ಯಾಂಕಿನ ಸದಸ್ಯರ ಮಕ್ಕಳಿಗೆ ಪ್ರತಿಭಾ…

Read More