ದೇಸಿ ಕ್ರೀಡೆಗಳನ್ನು ಮುಂದಿನ ಪೀಳಿಗೆಗೆ ಬಳುವಳಿಯಾಗಿ ನೀಡುವುದು ನಮ್ಮ ಜವಾಬ್ದಾರಿ
ಸತ್ಕಾರ್ಯ ಫೌಂಡೇಶನ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ರಾಮದುರ್ಗ ನಗರದ ನೇತಾಜಿ ಸುಭಾಷ್ ಚಂದ್ರ ಭೋಸ್ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಬೃಹತ್ ಗಾಳಿಪಟ ಉತ್ಸವ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು, ನಗರದ ಸಾಕಷ್ಟು ಜನ ತರುಣರು ಮಹಿಳೆಯರು ಮಕ್ಕಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಗಾಳಿಪಟಗಳ ಮೇಲೆ ಸಮಾಜಮುಖಿ ಸಂದೇಶಗಳನ್ನು ಚಿತ್ರಿಸಲಾಗಿತ್ತು. ಸಾಲುಮರದ ತಿಮ್ಮಕ್ಕ, ನೇತ್ರದಾನದ ಮಹತ್ವ, ಅಗ್ನಿಶಾಮಕ ಅಧಿಕಾರಿಗಳ ಶೌರ್ಯ, ಮಹಿಳೆಯರ ಮೇಲಿನ ಶೋಷಣೆ, ನಶಿಸಿ ಹೋಗುತ್ತಿರುವ ಕೌಶಲ್ಯಗಳ…
