
WhatsApp Group
Join Now
ಯುಗಾದಿ ಬಂದಿದೆ
ಶುಭವ ಹೊತ್ತು ತಂದಿದೆ ||
ಕೋಗಿಲೆ ಹಾಡಿದೆ
ಚೈತ್ರ ಮಾಸ ಬಂದಿದೆ
ಪ್ರಕೃತಿ ಅರಳಿದೆ
ನವ ಕನಸುಗಳು ಮೂಡಿದೆ
ಮಾವು ಬೇವು ಚಿಗುರುತಾ
ಬೇವು ಬೆಲ್ಲ ಬೆಸೆಯುತಾ
ಭಾವ ಬಂಧಗಳ ತಿಳಿಸುತಾ
ಹರುಷ ಚಿತ್ತದಿ ಮೂಡುತಾ
ಯುಗಾದಿ ಬಂದಿದೆ
ಶುಭವ ಹೊತ್ತು ತಂದಿದೆ.
ಪ್ರಜ್ವಲಿಸುತ್ತಾ ಬರುವ ಆದಿತ್ಯ
ಜ್ನ್ಯಾನ ದ ಬೆಳಕನೂ ನೀಡುತ
ಮನ ಮನದ ಕಲ್ಮಶವ ತೊಡಯುತ
ಯುಗದ ಆದಿಯಾಗಿ ಬಂದಿದೆ
ಯುಗಾದಿ ಬಂದಿದೆ
ಶುಭವ ಹೊತ್ತು ತಂದಿದೆ..
ಮನೆಯ ಹೊರಗೆ ಸಿಂಗಾರದ ಮಾವಿನ ತೋರಣ
ಮನೆಯ ಒಳಗೆ ಒಬ್ಬಟ್ಟಿನ ಹೂರಣ
ಮನಮನಗಳ ಬಂಧಗಳ ಜೋಡಣಾ
ಎಲ್ಲಾರ ಬೆಸೆದಿದೆ
ಯುಗಾದಿ ಬಂದಿದೆ
ಶುಭವ ಹೊತ್ತು ತಂದಿದೆ.
ಕಹಿ ನೆನೆಪು ದೂರಾಗಾಲಿ
ಸಿಹಿ ನೆನೆಪು ಚಿರವಾಗಲಿ
ಕಂಡ ಕನಸುಗಳು ನನಸಗಾಲಿ
ಯುಗಾದಿ ಸಂತಸ ತರಲಿ
ಶುಭವ ಹೊತ್ತು ತರಲಿ
ಯುಗಾದಿ ಬಂದಿದೆ
ಶುಭವ ಹೊತ್ತು ತಂದಿದೆ…
ಶಂಕರ್ ಬೆನ್ನೂರ್


