ಮಾಜಿ ಶಾಸಕ ಸಂಜಯ ಪಾಟೀಲ ಮನೆ ಎದುರು ಮಹಿಳಾ ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ

WhatsApp Group Join Now

ಬೆಳಗಾವಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಬಿಜೆಪಿಯ ಮಾಜಿ ಶಾಸಕ ಸಂಜಯ ಪಾಟೀಲ್ ಅವರ ಹಿಂದವಾಡಿಯಲ್ಲಿರುವ ನಿವಾಸದ ಮುಂದೆ ಕಾಂಗ್ರೆಸ್ ‌ಮಹಿಳಾ‌ ಕಾರ್ಯಕರ್ತರು ಶನಿವಾರ ರಾತ್ರಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಸುಸಂಸ್ಕ್ರತ ಪಕ್ಷ, ಮಹಿಳೆಯರಿಗೆ ರಕ್ಷಣೆ ನೀಡುವ ಬಿಜೆಪಿ ಎಂದು ಕೊಚ್ಚಿಕೊಳ್ಳುವ ಮಾಜಿ ಶಾಸಕ ಸಂಜಯ ಪಾಟೀಲ್‌ ಕರ್ನಾಟಕ ರಾಜ್ಯದ ‌ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಮಾತನಾಡಿರುವುದು ಖಂಡನೀಯ ಎಂದು ಸಂಜಯ ಪಾಟೀಲ್ ಫೋಟೋಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪೊಲೀಸರು ಪ್ರತಿಭಟನಾಕಾರರನ್ನು ಮನವೊಲಿಸಲು ಮುಂದಾದರು ಆದರೆ, ಪೊಲೀಸರ ಯಾವುದೇ ಮಾತಿಗೆ ಸೊಪ್ಪು ಹಾಕದ ಪ್ರತಿಭಟನಾನಿರತ ಮಹಿಳೆಯರು, ಗಂಡಸ್ಥನ ಇದ್ದರೆ ಹೊರಗೆ ಬಾರೋ, ಮನೆಯ ಒಳಗೆ ಅಡಗಿ ಕುಳಿತುಕೊಂಡಿದ್ದಿ ಎತಕ್ಕೆ ಎಂದು ಎಕ ವಚನದಲ್ಲೆ ಮಾಜಿ ಶಾಸಕ ಸಂಜಯ ಪಾಟೀಲ್ ವಿರುದ್ಧ ಹರಿಹಾಯ್ದರು.  ಈ ವೇಳೆ ಓರ್ವ ವ್ಯಕ್ತಿ ಧರಣಿ ಕುಳಿತಿದ್ದ ಮಹಿಳೆಯರ ವಿಡಿಯೋವನ್ನು ಮೊಬೈಲ್ ನಲ್ಲಿ ಚಿತ್ರೀಕರಣ ಮಾಡಲು ಮುಂದಾಗುತ್ತಿದ್ದಂತೆ ಆಕ್ರೋಶಗೊಂಡ ಪ್ರತಿಭಟನಾಕಾರರು ಆತನ ಮೇಲೆ ಮುಗಿಸಿದ್ದರು. ಇದರಿಂದಾಗಿ ಕೆಲ ಸಮಯ ಹೈಡ್ರಾಮಾ ಸೃಷ್ಟಿ ಯಾಗಿತ್ತು. ಪರಿಸ್ಥಿತಿ ಅರಿತ ಪೊಲೀಸರು ತಕ್ಷಣ ಮಧ್ಯಸ್ಥಿಕೆವಹಿಸಿ ಪರಿಸ್ಥಿತಿ ತಿಳಿಗೊಳಿಸಿದರು. ನಂತರ ಸಚಿವೆ ಲಕ್ಷ್ಮೀ ಹೆಬ್ಬಾಳಕರ ವಿರುದ್ಧ ಕೀಳು ಪದ ಉಪಯೋಗಿಸಿದ ಸಂಜಯ ಪಾಟೀಲ್ ಸಾರ್ವಜನಿಕವಾಗಿ ಕ್ಷಮೆಯಾಚಿಸುವವರೆಗೂ ಪ್ರತಿಭಟನೆಯನ್ನು ಹಿಂಪಡೆಯುವದಿಲ್ಲ ಎಂದು ಪಟ್ಟು ಹಿಡಿದು ಧರಣಿ ಮುಂದುವರೆಸಿದ್ದಾರೆ.

About The Author