12 August 2026
Advertisement
ರಾಜ್ಯ

ಗ್ಯಾಸ್ ರೀಪಿಲ್ಲಿಂಗ್ ದಂಧೆ : 470 ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಜಪ್ತಿ.

WhatsApp Group Join Now

ಧಾರವಾಡ ಸಮೀಪದ ಜೋಗೆಲ್ಲಾಪುರದ ಬನಶಂಕರಿ ಎಂಟರ್ ಪ್ರೈಜಿಸ್ ನ ಎಚ್.ಪಿ. ಗ್ಯಾಸ್ ಸಿಲಿಂಡರ್ ಗೋಡೌನ್ ನಲ್ಲಿಸಿಲಿಂಡರ್ ರೀಫಿಲ್ಲಿಂಗ್ ದಂಧೆ ನಡೆಯುತ್ತಿದ್ದ ಅಡ್ಡೆಯ ಮೇಲೆ ತಹಸೀಲ್ದಾರ್ ಡಿ.ಎಚ್. ಹೂಗಾರ ನೇತೃತ್ವದ ತಂಡ, ಹಾಗೂ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ 470 ಕ್ಕೂ ಹೆಚ್ಚು ಗ್ಯಾಸ್ ಸಿಲಿಂಡರ್ ಹಾಗೂ ರೀಫಿಲ್ಲಿಂಗ್ ಗೆ ಬಳಸುತ್ತಿದ್ದ ಯಂತ್ರಗಳನ್ನೂ ವಶಕ್ಕೆ ಪಡೆದಿದ್ದಾರೆ.

ಎಚ್.ಪಿ. ಸಿಲಿಂಡರ್ ಗುಡೌನ್ ನಲ್ಲಿ ಭಾರತ ಗ್ಯಾಸ್ ಕಂಪನಿಯ ಮತ್ತು ಗೋ ಗ್ಯಾಸ್ ಕಂಪನಿಯ ಸೀಲ್ಗಳು ಲಭ್ಯವಾಗಿವೆ.
ಮೇಲ್ನೋಟಕ್ಕೆ ಇದು ಸಿಲಿಂಡರ್ ರ್ರೀಫಿಲ್ಲಿಂಗ್ ದಂಧೆ ಎಂದು ಅನುಮಾನ ವ್ಯಕ್ತಪಡಿಸಿದ ತಹಸೀಲ್ದಾರರು ಗೋಡೌನ್ ಸೀಜ್ ಮಾಡಿದ್ದು ಧಾರವಾಡ ಗ್ರಾಮೀಣ ಪೋಲೀಸ ಠಾಣೆಯಲ್ಲಿ ದೂರು ದಾಖಲಿಸುವಂತೆ ಆಹಾರ ಮತ್ತು ನಾಗರಿಕ ಪೋರೈಕೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

About The Author