ಟೆಂಡರ್ ಪ್ರಕಾರ ಶೌಚಾಲಯ ಶುಲ್ಕ ಪಡೆಯಬೇಕೆಂದು ಪ್ರಶಾಂತ ಅಂಗಡಿ ಅವರು ಘಟಕ ವ್ಯವಸ್ಥಾಪಕರಾದ ಕೆ. ಬಿ. ಅಮ್ಮಣಗಿ ರವರಿಗೆ ಮನವಿ ಸಲ್ಲಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆದಾರರಿಂದ ಹೆಚ್ಚಿನ ಹಣ ವಸೂಲಿ

ರಾಮದುರ್ಗ ಪಟ್ಟಣದ ಹಳೆ ಬಸ್ ನಿಲ್ದಾಣ ಹಾಗೂ ಹೊಸ ಬಸ್ ನಿಲ್ದಾಣದಲ್ಲಿ ಶೌಚಾಲಯ ಬಳಕೆದಾರರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ .

ಶೌಚಾಲಯದಲ್ಲಿ ಮೂತ್ರ ವಿಸರ್ಜನೆಗಾಗಿ ಮಹಿಳೆಯರಿಂದ ಹಣ ಪಡೆಯಲಾಗುತ್ತಿದ್ದು,
ಟೆಂಡರ್ ಷರತ್ತು ಉಲ್ಲಂಘಿಸುತ್ತಿದ್ದಾರೆ. ಟೆಂಡರ್ ಸಂದರ್ಭದಲ್ಲಿ ಪ್ರಯಾಣಿಕರಿಗೆ ಉಚಿತವಾಗಿ ಮೂತ್ರ ವಿಸರ್ಜನೆಗೆ ಅವಕಾಶ ನೀಡಬೇಕು ಎಂದು ವಿಧಿಸಿದ ಷರತ್ತುಗಳ ಉಲ್ಲಂಘನೆಯಾಗುತ್ತಿದೆ.

ಶೌಚಾಲಯ ಬಳಕೆದಾರರಿಂದ ಗುತ್ತಿಗೆದಾರರು 1ರಿಂದ 2ರೂ. ಪಡೆಯಬೇಕು ಎಂಬ ನಿಯಮಗಳಿದ್ದರೂ ಕೂಡ ಮಹಿಳೆಯರಿಂದ ಮೂತ್ರ ವಿಸರ್ಜನೆಗೆ 2ರೂ ಹಾಗೂ ಶೌಚಾಲಯ ಬಳಕೆಗೆ 10 ರೂಪಾಯಿ ಹೆಚ್ಚಿನ ಹಣ ಪಡೆಯುತ್ತಿದ್ದಾರೆ.

ಮಹಿಳೆಯರಿಗೆ ಮುಜುಗರ ಇಲ್ಲಿ ಪುರುಷ ಸಿಬಂದಿ ಹಣ ವಸೂಲಿ ಮಾಡುತ್ತಿದ್ದು, ಮಹಿಳೆಯರು ಶೌಚಾಲಯಕ್ಕೆ ತೆರಳಲು ಮುಜುಗರ ಅನುಭವಿಸುವಂತಾಗಿದೆ.

ಶೌಚಾಲಯ ಪ್ರವೇಶ ದ್ವಾರದಲ್ಲಿ ಶೌಚಾಲಯ ಉಪಯೋಗಿಸಲು ವಿಧಿಸುವ ಶುಲ್ಕದ ವಿವರ ಹಾಕಬೇಕು. ಆದರೆ ಇದುವರೆಗೆ ಸೂಚನಾ ಫಲಕ ಹಾಕಿಲ್ಲ. ನಿಗದಿತ ಶುಲ್ಕ ಗೊತ್ತಾದರೆ, ಪ್ರಯಾಣಿಕರು ಜಗಳ ಮಾಡುತ್ತಾರೆ ಎನ್ನುವ ಕಾರಣಕ್ಕೆ ಬರಹ ಅಳಿಸಲಾಗಿದೆ.

ಶೌಚಾಲಯದಲ್ಲಿ ಕೆಲಸ ಮಾಡು ತಕ್ಕಂತ ಸಿಬ್ಬಂದಿಗೆ ಕನ್ನಡ ಮಾತನಾಡಲಿಕ್ಕೆ ಕೂಡ ಬರುವುದಿಲ್ಲ ಅಂಥವರಿಗೆ ನೀವು ಏಕೆ ಟೆಂಡರನ್ನು ನೀಡುತ್ತೀರಿ ಎಂದು ಸಾರ್ವಜನಿಕರಿಂದ ಆಕ್ರೋಶ ವ್ಯಕ್ತಪಡಿಸಿದರು.

ಟೆಂಡರ್ ಪ್ರಕಾರ ಶೌಚಾಲಯ ಬಳಕೆದಾರರಿಂದ 2 ರೂ ತೆಗೆದುಕೊಳ್ಳಬೇಕು ಇದನ್ನು ಬಿಟ್ಟು 10 ರೂಪಾಯ ತೆಗೆದುಕೊಳ್ಳುತ್ತಿದ್ದಾರೆ ಶೌಚಾಲಯ ಬಳಕೆದಾರರು 5 ರೂ ಕೊಡಲು ಹೋದರೆ ಅವರಿಂದ 10 ರೂಪಾಯಿ ಬೇಕೆಂದು ಹೆಚ್ಚಿನ ಶುಲ್ಕ ವಸೂಲಿ ಮಾಡುತ್ತಿದ್ದಾರೆ ಇದರ ಬಗ್ಗೆ ಸಮಾಜ ಸೇವಕರಾದ ಪ್ರಶಾಂತ ಅಂಗಡಿ ಅವರು ರಾಮದುರ್ಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಘಟಕ ವ್ಯವಸ್ಥಾಪಕರಾದ ಕೆ. ಬಿ. ಅಮ್ಮಣಗಿ ಅವರಿಗೆ ಟೆಂಡರ್ ಪ್ರಕಾರ ಶೌಚಾಲಯ ಬಳಕೆದಾರರಿಂದ ಶುಲ್ಕ ಪಡೆಯಬೇಕು ಎಂದು ಮನವಿ ಮಾಡಿಕೊಂಡರು.

About The Author