WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಹಲಗತ್ತಿ ಗ್ರಾಮದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಹಲಗತ್ತಿ ಸನ್ 2025-26 ನೆಯ ಸಾಲಿನ ಶೈಕ್ಷಣಿಕ ವರ್ಷದ ಶಾಲೆ ಪ್ರಾರಂಭೋತ್ಸವವನ್ನು ಅತಿ ವಿಜೃಂಭಣೆಯಿಂದ, ಆಚರಿಸಲಾಯಿತು. ಸದರಿ ಪ್ರಾರಂಭೋತ್ಸವ ಕಾರ್ಯಕ್ರಮಕ್ಕೆ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಐನಾಪುರ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ.ಟಿ.ಬಳಿಗಾರ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ರಾಜಶೇಖರ ಹಿರೇಮಠ , ECO ಜೋಶಿ ಸರ, ಎಸಡಿಎಂಸಿ ಅಧ್ಯಕ್ಷರು ಪಧಾದಿಕಾರಿಗಳು, ಗ್ರಾಮ ಪಂಚಾಯತಿ ಅಧ್ಯಕ್ಷರು ,ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತ ಅನುದಾನದಲ್ಲಿ ಮಂಜೂರು ಮಾಡಲಾದ 2 ಗ್ರೀನ್ ಬೋರ್ಡ್, 8 ಖುರ್ಚಿ,2 ಟೇಬಲ್, 1 ಸ್ಮಾರ್ಟ್ ಬೋರ್ಡ್, ಇವುಗಳನ್ನು ಎಲ್ಲಾ ಅಧಿಕಾರಿ ವರ್ಗದವರು, ಗಣಮಾನ್ಯರು ಉದ್ಘಾಟಿಸಿದರು. ಮಕ್ಕಳಿಗೆ ಶೈಕ್ಷಣಿಕ ವರ್ಷದ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಿಸುವ ಮೂಲಕ ಪ್ರಾರಂಭೋತ್ಸವ ಯಶಸ್ವಿಯಾಗಿ ನಡೆಸಲಾಯಿತು.



