WhatsApp Group
Join Now
ನವದೆಹಲಿ: 5 ವರ್ಷ ದಾಟಿದ ಮಕ್ಕಳ ಆಧಾರ್ ಬಯೋಮೆಟ್ರಿಕ್ ಕಡ್ಡಾಯಕ್ಕೆ ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು, ಶಾಲೆಗಳಿಗೆ ತೆರಳಿ ಆಧಾರ್ ಅಪ್ ಡೇಟ್ ಯೋಜನೆ ಜಾರಿಗೆ ಮುಂದಾಗಿದೆ. 2 ತಿಂಗಳ ಬಳಿಕ ಹಂತಹಂತವಾಗಿ ದೇಶವ್ಯಾಪಿ ಈ ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ಪ್ರಾಧಿಕಾರದ ಸಿಇಒ ಭುವನೇಶ್ ಕುಮಾರ್ ಮಾಹಿತಿ ನೀಡಿದ್ದು, ‘5 ವರ್ಷದಾಟಿದ ಸುಮಾರು 7 ಕೋಟಿ ಮಕ್ಕಳು ಇದುವರೆಗೆ ಆಧಾರ್ ಅನ್ನು ಬಯೋಮೆಟ್ರಿಕ್ ಮಾಡಿಸಿಕೊಂಡಿಲ್ಲ. ಹೀಗಾಗಿ ಪ್ರಾಧಿಕಾರ ಮಕ್ಕಳ ಆಧಾರ್‌ಕಾರ್ಡನ್ನು ಶಾಲೆಗಳಲ್ಲಿಯೇ ನವೀಕರಿಸಲು ಕೆಲಸ ಮಾಡುತ್ತಿದೆ. ಇದಕ್ಕಾಗಿ ತಂತ್ರಜ್ಞಾನ ರೂಪುಗೊಳ್ಳುತ್ತಿದ್ದು, 45-60 ದಿನಗಳಲ್ಲಿ ಸಿದ್ಧವಾಗಲಿದೆ’ ಎಂದಿದ್ದಾರೆ.



