WhatsApp Group
Join Now
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ವ್ಯಾಪ್ತಿಯಲ್ಲಿ ಬರುವ ಬೀಳಗಿ ನಗರದಲ್ಲಿ ಸಿ. ಸಿ.ರಸ್ತೆ ಕಾಮಗಾರಿ ನಡಿತಾಇದು ಮೊದಲ ಹಂತದಲ್ಲಿ ಬೆಡ್ ಕಾಂಕ್ರೀಟ್ ಹಾಕಿದ್ದು ಎಲ್ಲಿ ನೋಡಿದರೂ ಕಲ್ಲುಗಳು ಎದ್ದು ಕಾಣುತ್ತದೆ ಸರಿಯಾಗಿ ಬೆಡ್ ಕಾಂಕ್ರೀಟ್ ಹಾಕಿಲ್ಲ ಹಾಗೂ ಸೈಕಲ್ ಮೋಟಾರ್ ವಾಹನಗಳು ಸ್ಕಿಡ್ ಆಗಿ ಬೀಳುವ ಸಾಧ್ಯತೆ ಇದೆ ಇವಾಗ ಹೀಗಾದರೆ ಮುಂದೆ ಸಿ.ಸಿ.ರಸ್ತೆ ತಾಳಿಕೆ ಬರುತ್ತಾ ಎಂದು ಸಾರ್ವಜನಿಕರು ಆರೋಪಿಸಿದರು.
ಇದು ಸಂಪೂರ್ಣ ಕಳಪೆ ಮಟ್ಟದಲ್ಲಿ ಕಾಮಗಾರಿ ನಡಿತಾಇದೆ ಇದಕ್ಕೆ ಸಂಬಂಧಪಟ್ಟಂತ ಅಧಿಕಾರಿಗಳು ಇತ್ತ ಕಡೆ ಗಮನಹರಿಸಿ ಮತ್ತೊಮ್ಮೆ ಬೆಡ್ ಕಾಂಕ್ರೀಟ್ ಹಾಕಿಸಿ ಗುಣಮಟ್ಟದ ಸಿಸಿ ರಸ್ತೆ ಮಾಡಿಕೊಡಬೇಕೆಂದು ಸಾರ್ವಜನಿಕರಿಂದ ಪುರಸಭೆ ಮುಖ್ಯಾಧಿಕಾರಿಗಳಾದ ಈರಣ್ಣ ಕೆ ಗುಡದಾರಿ ಇವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರಶಾಂತ್ ಅಂಗಡಿ, ಮಹೇಶ ಚ ದೊಡಮನಿ, ಸುರೇಶ್ ಕೆ ಇಳಗೇರ ಇದ್ದರು.



