ರಾಮದುರ್ಗ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮ.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಜಯನಗರದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಬೆಳಗಾವಿ ಮತ್ತು ತಾಲೂಕು ಕಾನೂನು ಸೇವಾ ಸಮಿತಿ, ರಾಮದುರ್ಗ ಹಾಗೂ ನ್ಯಾಯವಾದಿಗಳ ಸಂಘ, ರಾಮದುರ್ಗ ಹಾಗೂ ಸಮಾಜ ಕಲ್ಯಾಣ ಇಲಾಖೆ ರಾಮದುರ್ಗ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಅರಿವು ಕಾರ್ಯಕ್ರಮವನ್ನು
ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜೆ.ಎಮ್. ಎಫ್. ಸಿ ರಾಮದುರ್ಗ ಮತ್ತು ಅಧ್ಯಕ್ಷರು,ಶ್ರೀಮತಿ. ಬಿ ಟಿ ಅನ್ನಪೂರ್ಣೇಶ್ವರಿ ಅವರು ಸಸಿಗೆ ನೀರು ಉಣಿಸುವುದರ ಮೂಲಕ ಉದ್ಘಾಟಿಸಿ ಅವರು ಮಕ್ಕಳ ಹಕ್ಕುಗಳು ಬಾಲ್ಯ ವಿವಾಹ ಹಾಗೂ ಮಕ್ಕಳ ಕಾನೂನು ಬಗ್ಗೆ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ರಾಮದುರ್ಗ ನ್ಯಾಯವಾದಿಗಳ ಸಂಘದ ಅಧ್ಯಕ್ಷರು ಎ. ಎ.ಮುದಕವಿ,
ಮಂಜುನಾಥ ಬಣಕಾರ
ದಿವಾಣಿ ನ್ಯಾಯಾಧೀಶರು ಜೆ. ಎಮ್.ಎಫ್.ಸಿ ರಾಮದುರ್ಗ ಮತ್ತು ಸದಸ್ಯ ಕಾರ್ಯದರ್ಶಿಗಳು ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ,
ಡಿ. ಎಮ್. ನದಾಫ್ ಸಹಾಯಕ ಸರಕಾರಿ ಅಭಿಯೋಜಕರು ಮತ್ತು ಕಾರ್ಯನಿರತ ಕಾರ್ಯದರ್ಶಿಗಳು, ತಾಲೂಕು ಕಾನೂನು ಸೇವಾ ಸಮಿತಿ ರಾಮದುರ್ಗ,
ಸಹಾಯಕ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಹನುಮಂತ ವಕುಂದ, ಉಪಸ್ಥಿತರಿದ್ದರು.
ಆಕಾಶ. ಎಸ್ ಇ . ವಕೀಲರು ಉಪನ್ಯಾಸ ಮಾಡಿದರು .

About The Author