12 August 2026
Advertisement
ರಾಜ್ಯ

ನಾಲ್ಕನೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಹಸಿಗುಸಿನ ಕತ್ತು ಹಿಸುಕಿ ಕೊಂದ ಪಾಪಿ ತಾಯಿ

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಮುದುಕವಿ ಆರೋಗ್ಯ ಕೇಂದ್ರದಲ್ಲಿ ದಿನಾಂಕ 23.11.2025ರಂದು ಹಿರೇಮೂಲಂಗಿ ಗ್ರಾಮದ
ಅಶ್ವಿನಿ ಹನುಮಂತ್ ಹಳಕಟ್ಟಿ ವಯಸ್ಸು 28 ಹೆರಿಗೆಗಾಗಿ ಮುದುಕವಿ ಆರೋಗ್ಯ ಕೇಂದ್ರಕ್ಕೆ ಸಾಯಂಕಾಲ 6.15ರ ವೇಳೆಗೆ ದಾಖಲಾಗಿ 6.55ಸಮಯಕ್ಕೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ .
ಇವಳಿಗೆ ಈಗಾಗಲೇ 3 ಹೆಣ್ಣು ಮಕ್ಕಳಿದ್ದು 1.ತನುಶ್ರೀ ಹತ್ತು ವರ್ಷ 2.ಅನುಶ್ರೀ ಎಂಟು ವರ್ಷ 3. ಶ್ರಾವಣಿ ನಾಲ್ಕು ವರ್ಷ ಈಗ ಹೆರಿಗೆಯಾಗಿರುವ 3 ದಿನದ ಹೆಣ್ಣು ಮಗುವನ್ನು
ದಿನಾಂಕ 25.11.2025ರಂದು ಬೆಳಗಿನ ಜಾವ ಹಸಿಗುಸಿನ ಕತ್ತು ಹಿಸುಕಿ ಕೊಲೆ ನಡೆದಿರುವ ಘಟನೆ ಜರುಗಿದೆ.

ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ತಾಯಿ ಅಶ್ವಿನಿ ನಾಲ್ಕನೆ ಮಗು ಹೆಣ್ಣಾಗಿದ್ದಕ್ಕೆ ಸಿಟ್ಟಿಗೆದ್ದು ಮಗುವಿನ ಕತ್ತು ಹಿಸುಕಿ ಕೊಂದಿದ್ದಾಳೆ.

ತಾಯಿಯ ಬಂಧನ, ಪ್ರಕರಣ ದಾಖಲು
ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆಶ್ವಿನಿ ಹಳಕಟ್ಟಿಯನ್ನು ಬಂಧಿಸಲಾಗಿದ್ದು, ಸುರೇಬಾನ್ ಪೊಲೀಸ್ ಠಾಣೆಯಲ್ಲಿ ಆಕೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಹೆರಿಗೆಯಾದ ಕಾರಣ ಆಕೆಗೆ ರಾಮದುರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಪೊಲೀಸರ ನಿಗಾದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಮದುರ್ಗ ಉಪ ಪೊಲೀಸ್ ವರಿಷ್ಠಾಧಿಕಾರಿ ಚಿದಂಬರ ಮಡಿವಾಳರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಈ ಪ್ರಕರಣ ಕುರಿತು ಪತ್ರಿಕಾಗೋಷ್ಠಿಯಲ್ಲಿ ತಾಲೂಕ ವೈದ್ಯಾಧಿಕಾರಿ ಡಾ.ನವಿನಕುಮಾರ ನಿಜಗೂಲಿ ಅವರು ತಿಳಿಸಿದ್ದಾರೆ

About The Author