ಗೋಮಾಳ ಜಮೀನು ಸಂರಕ್ಷಣೆ ಮಾಡುವಂತೆ ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘದ ಪದಾಧಿಕಾರಿಗಳು ತಹಶೀಲ್ದಾರಗೆ ಮನವಿ ಸಲ್ಲಿಸಿದರು.

WhatsApp Group Join Now

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನಲ್ಲಿರುವ ಗೋಮಾಳ ಜಮೀನು ಸಂರಕ್ಷಣೆ ಮಾಡಲು ತಾಲೂಕಾಡಳಿತ ಮುಂದಾಗಬೇಕು ಎಂದು ಒತ್ತಾಯಿಸಿ, ಭಾರತೀಯ ಕಿಸಾನ್ ಸಂಘದ ತಾಲೂಕಾ ಘಟಕದ ನೇತೃತ್ವದಲ್ಲಿ ರೈತ ಮುಖಂಡರು ತಹಶೀಲಾರ್‌ಗೆ ಸೋಮವಾರ ಮನವಿ ಸಲ್ಲಿಸಿದರು.

ತಾಲೂಕಿನಲ್ಲಿರುವ ಗೋಮಾಳ, ಗೈರಾಣ ಜಮೀನುಗಳನ್ನು ಬೇರೆ ಬೇರೆ ಉದ್ದೇಶಗಳಿಗೆ ಬಳಕೆ ಮಾಡಿಕೊಳ್ಳುತ್ತಿರುವ ಕುರಿತು ಕೇಳಿ ಬರುತ್ತಿದೆ. ಆದರೆ ಗೋಮಾಳ ಪೂರ್ವಜರ ಜಮೀನುಗಳು ಕಾಲದಿಂದಲೂ ಗೋವುಗಳು ಮೇಯಲು ಸಹಕಾರಿಯಾಗಿದ್ದವು.
ಇಂದು ಗೋಮಾಳ ಜಮೀನು ಬೇರೆ ಉದ್ದೇಶಕ್ಕೆ ನೀಡಿದ್ದು, ಜಾನುವಾರುಗಳ ಮೇಯಲು ಇಲ್ಲದಂತಾಗಿದೆ. ಶೀಘ್ರದಲ್ಲಿ ಬೇರೆ ಉದ್ದೇಶಗಳಿಗೆ ನೀಡಲಾದ ಗೋಮಾಳ ಜಮೀನುಗಳನ್ನು ವಾಪಸ್ ಪಡೆಯಬೇಕು.

ಜಾನುವಾರುಗಳ ಮೇಯಲು ಭೂಮಿ ದೊರೆಯುವಂತೆ ಕ್ರಮ ತೆಗೆರದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್-2 ತಹಶೀಲ್ದಾರ ಸಂಜಯ ಖಾತೆದಾರ, ತಮ್ಮ ಮನವಿಯನ್ನು ಮುಂದಿನ ಕ್ರಮಕ್ಕಾಗಿ ಮೇಲಾಧಿಕಾರಿಗಳ ಗಮನಕ್ಕೆ ತರುವುದಾಗಿ ಹೇಳಿದರು.

ಈ ವೇಳೆ ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಸುರೇಶ ನಂದೆಪ್ಪನವರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಕೋಣನ್ನವರ, ತಾಲೂಕಾ ಕಾರ್ಯದರ್ಶಿ ಪವನ ಅಂಗಡಿ, ಎಸ್.ಎಸ್. ಹಿರೇಮಠ, ಶಿವನಗೌಡ ಕುಲಕರ್ಣಿ, ಮಹಿಳಾ ಪ್ರತಿನಿಧಿ ಸುಮಿತ್ರಾ ಹಣಮನೇರಿ, ಕಾಳಮ್ಮ ಬಡಿಗೇರ, ನಿಂಗಪ್ಪ ಗುದಗಿ, ಯಲ್ಲಪ್ಪ ಜಾಧವ, ಸಿದ್ದು ಹಂಪಿಹೊಳಿ, ಅಪ್ಪು ಪಾಟೀಲ, ತಿರಕಪ್ಪ ಬಾಡಗಾರ ಸೇರಿದಂತೆ ಇತರರಿದ್ದರು.

About The Author