ಕುಟುಂಬ ನಿರ್ವಹಣೆಯ ನಡುವೆ ನಿಮಗಾಗಿ ಸಮಯ ಮೀಸಲಿಡಿ ಹಾಗೂ ಸಮಾಜಮುಖಿ ಕಾರ್ಯ ಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕ ಮತ್ತೊಬ್ಬರಿಗೆ ಮಾದರಿಯಾಗಿ ಎಂದು ಮೀನಾಕ್ಷಿ ಸೂಡಿ(ಭಾಂಗಿ) ಹೇಳಿದರು.
ಕಿತ್ತೂರು ಪಟ್ಟಣದ ಚೆನ್ನಮ್ಮಾಜಿ
ಸಾಂಸ್ಕೃತಿಕ ಭವನದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಗಣ್ಯರೊಂದಿಗೆ ಉದ್ಘಾಟಿಸಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಿತ್ತೂರು ವೀರರಾಣಿಯ ಪುಣ್ಯ ಭೂಮಿ. ಮಹಿಳೆಯರು ಸ್ವಾವಲಂಬಿಯಾಗಲು ರಾಣಿ ಚೆನ್ನಮ್ಮಾಜಿಯ ಜೀವನವೇ ನಮಗೆಲ್ಲ ಸ್ಫೂರ್ತಿ. ಇದನ್ನಾಧರಿಸಿ ಹೆಣ್ಣುಮಕ್ಕಳು ಎಲ್ಲದರಲ್ಲೂ ಮುಂದೆ ಬರಬೇಕು ಎಂದು ಹೇಳಿದರು.
ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಿ ಎಲ್ಲ ಮಹಿಳೆಯರಿಗೆ ಅವಕಾಶ ನೀಡಿದ ಕೆ ಪಿ ಸಿ ಸಿ ಸದಸ್ಯರಾದ ಶ್ರೀಮತಿ ರೋಹಿಣಿ ಪಾಟೀಲ್ ಅವರಿಗೆ ಎಲ್ಲ ಮಹಿಳೆಯರ ಪರವಾಗಿ ಕೃತಜ್ಞತೆ ಸಲ್ಲಿಸಿದರು.ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಪ್ರಭಾವತಿ ಪಕ್ಕಿರಪುರ,ಶ್ರುತಿ ವಿಶ್ವಾಸ ವೈದ್ಯ,ಶಾಹಿದ್ ಅತ್ತಾರ ಸೇರಿದಂತೆ ಸಂಘಟನೆಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.
ಕೊನೆಯಲ್ಲಿ ಮನರಂಜನಾ ಕಾರ್ಯಕ್ರಮ ನಡೆದವು.



