ಧಾರವಾಡದಲ್ಲಿ ನಡೆದ ಹಿರಿಯರ ಹಬ್ಬ ; 60 ರ ಭವ್ಯತೆ

WhatsApp Group Join Now

ಧಾರವಾಡ: ಇಲ್ಲಿನ ಕರ್ನಾಟಕ ಅಸ್ಮಿತಾ ಫೌಂಡೇಶನ್ ವತಿಯಿಂದ ಇದೇ ದಿ. 5 ರಂದು ರವಿವಾರ ಮುಂಜಾನೆ 10 ಗಂಟೆಗೆ ಕಾಲೇಜು ರಸ್ತೆಯ ಸರಕಾರಿ ಆರ್ಟ್ ಗ್ಯಾಲರಿ ಸಭಾಂಗಣದಲ್ಲಿ ಹಿರಿಯ ಸಾಧಕರನ್ನು ಪ್ರಶಸ್ತಿ ಸಹಿತ ಸನ್ಮಾನಿಸುವ 60 ರ ಭವ್ಯತೆ ಕಾರ್ಯಕ್ರಮ ಆಯೋಜಿಸಲಾಗಿತ್ತು ಮತ್ತು ಅಸ್ಮಿತಾ ಫೌಂಡೇಶನ್ ಧಾರವಾಡ ಈ ಸಂಸ್ಥೆಯ ಉದ್ಘಾಟನೆ ನೆರವೇರಿತು.

ಶ್ರೀ ಚಂದ್ರಕಾಂತ ಗುರಪ್ಪ ಬೆಲ್ಲದ ಅಧ್ಯಕ್ಷರು ಕರ್ನಾಟಕ ವಿದ್ಯಾವರ್ಧಕ ಸಂಘ ಧಾರವಾಡ ಅವರು ಉದ್ಘಾಟಿಸಿ ಮಹಿಳೆ ಸ್ವಾತಂತ್ರ್ಯ ನಂತರ ಅನೇಕ ಹೋರಾಟ ಮಾಡಿ ಪ್ರತಿಯೊಂದು ಕ್ಷೇತ್ರದಲ್ಲಿ ಅವಳು ತನ್ನನ್ನು ತಾನು ಗುರುತಿಸಿಕೊಂಡಿದ್ದಾಳೆ. ಅನೇಕ ಸಂಘಟನೆಯ ಮೂಲಕ ತನ್ನ ಸೇವೆ ಸಲ್ಲಿಸಿದ್ದಾಳೆ ಹೀಗೆ ಹುಟ್ಟಿಕೊಂಡ ಸಂಘಟನೆ ಈ ಅಸ್ಮಿತಾ ಫೌಂಡೇಶನ್ ಇಂದು ಹಿರಿಯ ಸಾಧಕರಿಗೆ ಸನ್ಮಾನ” 60 ರ ಭವ್ಯತೆ -2026 ನೀಡಿ ಗೌರವಿಸುತ್ತಿದೆ ಮತ್ತು ಎಲ್ಲರಿಗೂ ನಾನು ಅಭಿನಂದನೆಗಳನ್ನು ಹೇಳುತ್ತೇನೆ ಎಂದರು

ಸಾಮಾಜಿಕ ಕಾರ್ಯಕರ್ತ ಶಿವಾನಂದ ಲೋಲೆನ್ನವರ ಅವರ ಅಧ್ಯಕ್ಷತೆಯ ನುಡಿಯಲ್ಲಿ ಈ ಹಿರಿಯ ಸಾಧಕರು ತಮ್ಮ ಅರವತ್ತೆನೆಯ ವಯಸ್ಸಿನಲ್ಲಿಯೂ ಸಾಧನೆಯನ್ನು ಮಾಡಿದ್ದಾರೆ. ಇವತ್ತಿನ ಬದಲಾಗುತ್ತಿರುವ ಪ್ರಪಂಚದೊಂದಿಗೂ ಕೂಡ ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು. ಶ್ರೀಮತಿ ಪ್ರೇಮಾ ನಡುವಿನಮನಿ ಕಾರ್ಯಕ್ರಮದ ಆಶಯ ನುಡಿಗಳನ್ನು‌ ಹೇಳುತ್ತಾ ಮಹಿಳೆಯರ ಸ್ವಾವಲಂಬನೆಗಾಗಿ , ಮಕ್ಕಳ ಅಭಿವೃದ್ಧಿಗಾಗಿ ಶಿಬಿರ , ವಯಸ್ಸಾದ ಹಿರಿಯರಿಗಾಗಿ ಅನೇಕ ಯೋಜನೆಯ ಕುರಿತು ಕೆಲಸ ಮಾಡುವುದಾಗಿ ತಿಳಿಸಿದರು.
ಧಾರವಾಡದ ನಿವೃತ್ತ ಪ್ರಾಂಶುಪಾಲರಾದ ಡಾ. ಸರಸ್ವತಿ ಕಳಸದ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ಸಾಗರದ ಆಳ ಗರ್ಭದಲ್ಲಿರುವಂತೆ ಹೆಣ್ಣು ಕೂಡ ತನ್ನ ವಿಮರ್ಶೆ ಆಂತರಿಕವಾಗಿ ಮಾಡಿಕೊಳ್ಳುತಾಳೆ. ಅವಳ ಸೃಜನಾತ್ಮಕ ಚಿಂತನೆ ಮತ್ತು ಕ್ರಿಯಾತ್ಮಕ ನಡೆ ಕುಟುಂಬದ ಅಡಿಪಾಯವಾಗಿ ಉಳಿಯುತ್ತದೆ. ಹೆಣ್ಣು ತಾನಿದ್ದ ಕಡೆಯಲ್ಲಾ ತನ್ನದೇ ಬುದ್ಧಿವಂತಿಕೆಯಿಂದ ತನ್ನದೇ ಕೌಟುಂಬಿಕ ಶಾಲೆಯೊಂದನ್ನು ತೆರೆಯುತ್ತಾಳೆ ಎಂದರು

ವಾಯ್, ಡಿ. ಅಗಸಿಮನಿ ನಿವೃತ್ತ ಉಪ ಪೊಲೀಸ್ ಅಧೀಕ್ಷಕರು ರಾಜ್ಯ ಗುಪ್ತವಾರ್ತೆ ಬೆಂಗಳೂರು ಅವರು
ಸಾಧಕರಿಗೆಮಾಡಿದರು. 60 ಭವ್ಯತೆ ಪ್ರಶಸ್ತಿ”* ಪ್ರದಾನ‌ ಮಾಡಿದರು. ಬೆಳಗಾವಿ ಕಸಾಪ ಕಾರ್ಯದರ್ಶಿ ಎಮ್. ವೈ. ಮೆಣಸಿನಕಾಯಿ, ಶ್ರೀ ಡಿ.ವಿ. ಹಾಲಿಬಾವಿ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ , ರಾಜ್ಯೋತ್ಸವ ಪ್ರಶಸ್ತಿ ವಿಜೇತ ಬಿ ಮಾರುತಿ; ಹುಬ್ಬಳ್ಳಿಯ ವಿಶ್ರಾಂತ ಪತ್ರಕರ್ತ ರಾಜೇಂದ್ರ ಪಾಟೀಲ (ರಾಪಾ), ನಿವೃತ್ತ ಸರಕಾರಿ ಅಧಿಕಾರಿ ಮತ್ತು ಪ್ರಗತಿಪರ ರೈತರಾದ ಬಿ.ಡಿ.ಹಿರೇಗೌಡರ, ಗದಗ ನ ಸಾಹಿತಿ ಎ.ಎಸ್. ಮಕಾನದಾರ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಹಿರಿಯ ಸಾಧಕರಾದ
ಬಂಡ್ರಿ ಲಿಂಗಪ್ಪ (ಬಳ್ಳಾರಿ. ಕರ್ನಾಟಕ); ಸುರೇಶ ಅಳ್ಳಗಿ (ಧಾರವಾಡ ); ಬೆಳಗಾವಿ; ಗುರುಸಿದ್ದಯ್ಯ ಹಿರೇಮಠ (ಬೆಳಗಾವಿ); ಗಂಗಪ್ಪ ಸೋನಾರ (ಬೆಳಗಾವಿ); ಶ್ರೀ ಸಂಗಯ್ಯಸ್ವಾಮಿ ಹಿರೇಮಠ (ಧಾರವಾಡ ); ಶ್ರೀಮತಿ ಅನುಪಮಾ ಫಡ್ನಿಸ (ಧಾರವಾಡ ); ಎ. ಬಿ. ಮಡಿವಾಳರ ನಿವೃತ್ತ ಮುಖ್ಯೋಪಾಧ್ಯಾಯ ಬೆಳಗಾವಿ; ಚಿತ್ರ ನಟ ಎನ್. ಎ. ದೇಸಾಯಿ(ಗೊರವನಕೊಳ್ಳ) ಅವರನ್ನು ಪ್ರಶಸ್ತಿ ಸಹಿತ ಸನ್ಮಾನಿಸಿ ಗೌರವಿಸಿದರು

ಶ್ರೀಮತಿ ಮೇಘಾ ಹುಕ್ಕೇರಿ ಹಾಗೂ ಶ್ರೀಮತಿ ಜಯಶ್ರೀ ಪಾಟೀಲ ನಿರೂಪಣೆ ಮಾಡಿದರು.
ಆರತಿ ಪಾಟೀಲ ಕಾರ್ಯಕ್ರಮದ ಮೊದಲಿಗೆ ಪ್ರಾರ್ಥನೆ ಮಾಡಿದರು. ಶ್ರೀಮತಿ ಶಿಲ್ಪಾ ಮಿಣಜಗಿ, ಶ್ರೀಮತಿ ಲೀಲಾವತಿ ಮಿಣಜಗಿ ಸ್ವಾಗತ ಗೀತೆ ಹಾಡಿದರು.ಸುಜಾತಾ ಹಡಗಲಿ ಸ್ವಾಗತ ಭಾಷಣ ಮಾಡಿದರು.ಕಾರ್ಯಕ್ರಮದ ಕೊನೆಗೆ ವಂದನೆಯನ್ನು ಕುಮಾರ್ ಕಾರ್ತಿಕ ಡಿ ಮಾಡಿದರು.
ಮಂಜುಳಾ ರಾಮುಡಗಿ ಕಸ್ತೂರಿ ಬೀರಪ್ಪನವರ ಅತಿಥಿಗಳ ಪರಿಚಯ ಮಾಡಿದರು
ಕುಮಾರ ಕಾಟೇನಹಳ್ಳಿ, ಶ್ರೀಮತಿ ಪ್ರಮೀಳಾ ಜಕ್ಕನ್ನವರ, ಶ್ರೀ ಎಸ್. ಕೆ ಪತ್ತಾರ, ಶ್ರೀಮತಿ ಹೇಮಾ ಪಾಟೀಲ, ಶ್ರೀಮತಿ ಸುನೀತಾ ಅರಬಳ್ಳಿ, ಶರಣ ರವಿ ಕಗ್ಗನ್ನವರ, ಮಿಣಜಗಿಡಾ.ಬಸವರಾಜ ಗವಿಮಠ ,ಹಾಜರಿದ್ದರು.

About The Author