ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮುಚಖಂಡಿ ತಾಂಡಾ ಮೇಲೆ ದಾಳಿ ; ಭಾರಿ ಪ್ರಮಾಣದ ‘ಮಾವಾ’ ಜಪ್ತಿ

WhatsApp Group Join Now

ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಹಾನಿಕಾರಕವಾಗಿರುವ ‘ಮಾವಾ’ ನಿಯಂತ್ರಣಕ್ಕೆ ಬಾಗಲಕೋಟೆ ಜಿಲ್ಲಾ ಪೊಲೀಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ.

ಬಾಗಲಕೋಟೆ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯ ಮುಚಖಂಡಿ ತಾಂಡಾದ ಎರಡು ಕಡೆಗಳಲ್ಲಿ ಇಂದು ಪೊಲೀಸರು ಮಿಂಚಿನ ದಾಳಿ ನಡೆಸಿ, ಭಾರಿ ಪ್ರಮಾಣದ ಮಾವಾ ಹಾಗೂ ಕಚ್ಚಾ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ದಾಳಿಯ ವೇಳೆ ಪೊಲೀಸರು ಒಟ್ಟು 250 ಪ್ಯಾಕೆಟ್ ಮಾವಾ, ಸುಮಾರು 7 ಕೆಜಿ ತೂಕದ ಮಾವಾ ಹಾಗೂ ಅದನ್ನು ತಯಾರಿಸಲು ಸಂಗ್ರಹಿಸಿಡಲಾಗಿದ್ದ 15 ಕೆಜಿ ಕಚ್ಚಾ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಈ ಅಕ್ರಮ ದಂಧೆಗೆ ಸಂಬಂಧಿಸಿದಂತೆ ಶ್ರೀನಿವಾಸ ರಾಠೋಡ್ ಮತ್ತು ಶಂಕರ್ ಪವಾರ ಎಂಬ ಇಬ್ಬರ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

About The Author