ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗದಾಳ ಗ್ರಾಮದ
ಸರ್ಕಾರಿ ಪ್ರೌಢ ಶಾಲೆ ಕಗದಾಳದಲ್ಲಿ ಹಮ್ಮಿಕೊಂಡ ಶಾಲಾ ಪ್ರಾರಂಭೋತ್ಸವದಲ್ಲಿ ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡುತ್ತಾ, ಸರ್ಕಾರಿ ಶಾಲೆಗಳಲ್ಲಿ ಸರ್ಕಾರವು ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಬಿಸಿಊಟ ಇತ್ಯಾದಿ ಸೌಲಭ್ಯಗಳನ್ನು ನೀಡುತ್ತಿದೆ.ಅರ್ಹ ಪ್ರತಿಭಾವಂತ ಶಿಕ್ಷಕರು ಸರಕಾರಿ ಶಾಲೆಯಲ್ಲಿ ಕೆಲಸ ನಿರ್ವಹಿಸುತಿದ್ದುದರಿಂದ , ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ ಪ್ರಯೋಜನ ಪಡೆಯಲು ಕೋರಿದರು. ಸರಸ್ವತಿ ಪೂಜೆ ಹಾಗೂ ಸಸಿಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸರ್ಕಾರ ಕೊಡ ಮಾಡಿದ ಉಚಿತ ಪಠ್ಯಪುಸ್ತಕ, ಸಮವಸ್ತ್ರ ವಿತರಿಸಲಾಯಿತು. ನಂತರ ಸಿಹಿಯನ್ನು ನೀಡುವುದರ ಮುಖಾಂತರ ಬಿಸಿಯೂಟ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್ ವಿ ಶೆಟ್ಟರ್, ಬಿ ಜಿ ಪಾಟೀಲ್ ಶಾಲೆಯಲ್ಲಿರುವ ಸೌಲಭ್ಯಗಳು ಹಾಗೂ ಶಾಲೆಯಲ್ಲಿ ನಡೆಯುವ ವಿವಿಧ ಶೈಕ್ಷಣಿಕ ಚಟುವಟಿಕೆಗಳು ಮತ್ತು ಇಲಾಖೆಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶಾಲೆಯ ಎಸ್ ಡಿ ಎಮ್ ಸಿ ಉಪಾಧ್ಯಕ್ಷರಾದ ಮಾಯಪ್ಪ ರಾ ಜೋತೆನ್ನವರ , ಶಿಕ್ಷಣ ಸಂಯೋಜಕರಾದ ಸುಧೀರ ವಾಗೇರಿ,ಬಿ ಆರ್ ಪಿ ಎಮ್ ಎನ್ ಕರಡಿಗುಡ್ಡ,ಸಿ ಆರ್ ಪಿ ಎಸ್ ಎನ್ ಕುಂಬಾರ ಭಾಗವಹಿಸಿದ್ದರು . ಕಾರ್ಯಕ್ರಮದಲ್ಲಿ ಎಸ್ ಡಿ ಎಂ ಸಿ ಸದಸ್ಯರು, ಪಾಲಕರು ಹಾಜರಿದ್ದರು. ವೇದಿಕೆಯ ಮೇಲೆ ಶಿಕ್ಷಕರಾದ ಜೆ ಕೆ ಪಾಟೀಲ್, ಎಚ್ ಎನ್ ಯಡ್ರಾವಿ,ಬಿ ಎಸ್ ಜೋತೆನ್ನವರ,ಡಿ ಬಿ ಕೊಡ್ಲಿ ಉಪಸ್ಥಿತರಿದ್ದರು.
ಪಾಲಕರು ತಮ್ಮ ಮಕ್ಕಳನ್ನು ಶಾಲೆಯ ಪ್ರಾರಂಭದ ದಿನದಿಂದ ಶಾಲೆಗೆ ಕಳುಹಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಲು ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಕರೆ ನೀಡಿದರು.

WhatsApp Group
Join Now


