ಸರ್ಕಾರಿ ಭೂಮಿ ಒತ್ತುವರಿ ತೆರವಿಗೆ ಆಗ್ರಹಿಸಿ ಅನಿರ್ದಿಷ್ಟಾವಧಿ ಧರಣಿ

WhatsApp Group Join Now

ಕುಣಿಗಲ್ ತಾಲೂಕಿ ನಾದ್ಯಂತ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಸರ್ಕಾರಿ ಒಡೆತನದ ಕೆರೆ, ಕಟ್ಟೆ, ಹಳ್ಳಕೊಳ್ಳ ಹಾಗೂ ‘ಬಿ’ ಕರಾಬು ಜಮೀನುಗಳನ್ನು ಭೂಗಳ್ಳರಿಂದ ತಕ್ಷಣವೇ ವಶಪಡಿಸಿ ಕೊಳ್ಳಬೇಕೆಂದು ಆಗ್ರಹಿಸಿ ‘ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ’ಯಿಂದ ತಾಲೂಕು ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸಲಾಗಿದೆ.

ಪಟ್ಟಣದ ಪ್ರವಾಸಿ ಮಂದಿರದಿಂದ ಮುಖಕ್ಕೆ ಕಪ್ಪು ಬಟ್ಟೆ ಧರಿಸಿ ಹೊರಟ ನೂರಾರು ಹೋರಾಟಗಾರರು. ತಾಲೂಕು ಹಾಗೂ ಜಿಲ್ಲಾ ಆಡಳಿತದ ನಿರ್ಲಕ್ಷ್ಯ ಧೋರಣೆ ವಿರುದ್ಧ ಶಾಂತಿಯುತವಾಗಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸಿಲ್ದಾ‌ರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

6 ವರ್ಷಗಳ ಹೋರಾಟಕ್ಕೂ ಬೆಲೆಯಿಲ್ಲ: ಹೆಚ್.ಜಿ. ಕಡಕ್ ವಾಗ್ದಾಳಿ

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವೇದಿಕೆಯ, ಸಂಸ್ಥಾಪಕ ಅಧ್ಯಕ್ಷ ಹೆಚ್.ಜಿ. ರಮೇಶ್ ತಾಲೂಕು ಮತ್ತು ಜಿಲ್ಲಾ ಆಡಳಿತ ಬಲಾಡ್ಯರ ಗುಲಾಮಗಿರಿಯಲ್ಲಿ ಕಾರ್ಯನಿರ್ವಹಿಸುತ್ತಿದೆಯೇ ಎಂದು ಆಕ್ರೋಶ ಹೊರಹಾಕಿದರು.

ಕುಣಿಗಲ್ ತಾಲೂಕಿನಲ್ಲಿ ಸರ್ಕಾರಿ ಭೂಮಿ ಕಬಳಿಕೆಯಾಗಿರುವ ಬಗ್ಗೆ ಕಳೆದ 6 ವರ್ಷಗಳಿಂದ ಸತತವಾಗಿ ಮಾಹಿತಿ ನೀಡುತ್ತಿದ್ದರೂ ಆಡಳಿತ – ಯಂತ್ರ ಕಣ್ಣುಮುಚ್ಚಿ ಕುಳಿತಿದೆ. ತಾಲೂಕು ಆಡಳಿತವೇ ಒತ್ತುವರಿಯನ್ನು ಗುರುತಿಸಿದ್ದರೂ ಸಹ ಯಾವುದೇ ಕ್ರಮ ಕೈಗೊಂಡಿಲ್ಲ. ಇಂತಹ ಬಲಾಡ್ಯರ ಪರ ಕೆಲಸ ಮಾಡುವ ಅಧಿಕಾರಿಗಳು ತಾಲೂಕಿನಲ್ಲಿ ಇರಬಾರದು. ಕೂಡಲೇ ಜಮೀನುಗಳನ್ನು ವಶಕ್ಕೆ ಪಡೆಯದಿದ್ದರೆ ತಾಲೂಕು ಬಿಟ್ಟು ತೊಲಗಲಿ, ಎಂದು ಹೆಚ್.ಜಿ. ರಮೇಶ್ ಸಂಸ್ಥಾಪಕ ಅಧ್ಯಕ್ಷರು, ಆರ್‌ಟಿಐ ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಆಗ್ರಹಿಸಿದೆ.

ಪ್ರಮುಖ ಒತ್ತುವರಿ ಪ್ರದೇಶಗಳು ಮತ್ತು ಹೋರಾಟಗಾರರ ಆಗ್ರಹ

ಹೋರಾಟಗಾರರುರ ಕುಣಿಗಲ್ ತಾಲೂಕಿನ ವಿವಿಧ ಭಾಗಗಳಲ್ಲಿ ನಡೆದಿರುವ ಪ್ರಮುಖ. ಒತ್ತುವರಿಗಳ ಪಟ್ಟಿಯನ್ನು ಅಧಿಕಾರಿಗಳ ಮುಂದಿಟ್ಟಿದ್ದಾರೆ.

ಬ್ಯಾಲದ ಕೆರೆ: ಹುಲ್ಲು ಬಂದಿ ಹಾಗೂ ಕರಾಬು ಭೂಮಿಯ ಅಕ್ರಮ ಕಬಳಿಕೆ.

ಬಿರುಗಾನಹಳ್ಳಿ: ಹೊನ್ನಮ್ಮ ದೇವಸ್ಥಾನದ ಬಳಿಯ
ಸರ್ಕಾರಿ ಭೂಪ್ರದೇಶದ ಆಕ್ರಮಣ.

`ಗೊಟ್ಟಿಕೆರೆ: ಕೆರೆಗೆ ಹರಿದು ಬರುವ ಸ್ವಾಭಾವಿಕ
ಹಳ್ಳಕೊಳ್ಳಗಳ ಮುಚ್ಚುವಿಕೆ.

ಕುಂದೂರು ಗ್ರಾಮ: ಕಾಯ್ದಿರಿಸಿದ ಕಟ್ಟೆ ಹಾಗೂ ಗುಂಡು ತೋಪು ಭೂಮಿಯ ಕಬಳಿಕೆ.

ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಕಡುಬಡವರು, ನಿವೇಶನ ಮತ್ತು ವಸತಿಯಿಲ್ಲದೆ ಬಾಡಿಗೆ ಮನೆಗಳಲ್ಲಿ ಸಾಗುತ್ತಿದ್ದಾರೆ. ಇಂತಹ ಬಡವರಿಗೆ ಭೂಮಿ ನೀಡುವ ಬದಲು ಎಕರೆಗಟ್ಟಲೆ ಸರ್ಕಾರಿ ಜಮೀನನ್ನು ಬಲಾಡ್ಯರ ಪಾಲು ಮಾಡುತ್ತಿರುವ ಅಧಿಕಾರಿಗಳ ಧೋರಣೆಯನ್ನು ಅವರು. ಕಠಿಣ ಶಬ್ದಗಳಲ್ಲಿ ಖಂಡಿಸಿದರು.

ನೀಟ್ ಅಕ್ರಮ ಖಂಡನೆ -ಸಿಜೆಪಿ ಬೆಂಬಲ ಇದೇ ಸಂದರ್ಭದಲ್ಲಿ ದೇಶಾದ್ಯಂತ ಸದ್ದು ಮಾಡುತ್ತಿರುವ ‘ನೀಟ್’ ಪರೀಕ್ಷಾ ಅಕ್ರಮ ಮತ್ತು ಕೇಂದ್ರ ಸರ್ಕಾರದ ಧೋರಣೆಯನ್ನು ಪ್ರತಿಭಟನಾಕಾರರು ಖಂಡಿಸಿದರು. ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ಸೋನಮ್ ವಾಂಗ್ಲುಕ್ ಅವರ ವಿರುದ್ಧ ಬಲಪ್ರಯೋಗ ಮಾಡಿದ್ದನ್ನು ವಿರೋಧಿಸಿದ ಅವರು, ನೈತಿಕ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಸಚಿವ ಧಮೇರ್ಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಈ ಬೃಹತ್ ಪ್ರತಿಭಟನೆಯಲ್ಲಿ ತಾಲೂಕು ಅಧ್ಯಕ್ಷ ದೀಪಕ್, ಬೆಂಗಳೂರಿನ ಹಳ್ಳಿ ಕೃಷ್ಣ, ಶಿವಮೊಗ್ಗ ಮೂರ್ತಿ, ದಾವಣಗೆರೆ ಶಂಕರ್, ರಾಮನಗರ ರವಿಚಂದ್ರ, ರಂಗನಾಥ, ನರಸೇಗೌಡ ಹಾಗೂ ಮಹಿಳಾ ನಾಯಕರಾದ ಲಕ್ಷ್ಮಿ, ಉಷಾ, ಕಲಾವತಿ, ಶಾಂತಮ್ಮ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ನೂರಾರು ಪದಾಧಿಕಾರಿಗಳು ಭಾಗವಹಿಸಿದ್ದರು.

About The Author