ಕಾಕತಿಯ ಸರಕಾರಿ ಪ್ರೌಢ ಶಾಲೆ ನಿಯೋಗದ ವತಿಯಿಂದ ಸಚಿವರ ಭೇಟಿ

WhatsApp Group Join Now

ಬೆಳಗಾವಿ :ಬೆಳಗಾವಿ ತಾಲೂಕಿನ ಕಾಕತಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್ ಡಿ ಎಮ್ ಸಿ ಬಳಗದ ವತಿಯಿಂದ ಬುಧವಾರ ದಿ 21 ರಂದು ಬೆಳಗಾವಿಯ ಸಚಿವರ ಕಾರ್ಯಾಲಯದಲ್ಲಿ ಸನ್ಮಾನ್ಯ ಸಚಿವರಾದ ಶ್ರೀ ಸತೀಶ ಜಾರಕಿಹೊಳಿ ರವರನ್ನು ಭೇಟಿಯಾಗಿ ಶಾಲೆಯ ಬಗ್ಗೆ ಮತ್ತು ಶಾಲಾ ಕಟ್ಟಡ ಮತ್ತು ಇನ್ನುಳಿದ ತುರ್ತಾಗಿ ಬೇಕಿರುವ ಶಾಲಾ ವರ್ಗ ಕೊಠಡಿಗಳು, ಶೌಚಾಲಯ, ನೀರಿನ ಹೆಚ್ಚುವರಿ ಉಪಲಬ್ದತೆ ಸೌಲಭ್ಯ ಕುರಿತು ಚರ್ಚಿಸಲಾಯಿತು. ಸನ್ಮಾನ್ಯ ಸಚಿವರು ಶಾಲೆಗೆ ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿ ಸರ್ಕಾರ ವತಿಯಿಂದ ಸೂಕ್ತ ಅನುದಾನ ತರುವುದರ ಮೂಲಕ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಸದಸ್ಯರಾದ ಸಿದ್ದು ಸುಣಗಾರ, ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಕೃಷ್ಣ ಕುರುಬರ, ಪ್ರೌಢಶಾಲೆ ಮುಖ್ಯ ಶಿಕ್ಷಕ ಅಶೋಕ ಖೋತ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ಗಿರೀಶ್ ಜಗಜಂಪಿ, ಸಿದ್ದರಾಯ ಸುತಾರ, ಶಿವಾನಂದ ತಲ್ಲೂರ ಉಪಸ್ಥಿತರಿದ್ದರು.

About The Author