ಶ್ರೀ ಜಿ. ಜಿ. ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜು ಸವದತ್ತಿ

WhatsApp Group Join Now

ನಶೆ ಮುಕ್ತ ಭಾರತ ಅಭಿಯಾನದ ಅಡಿಯಲ್ಲಿ ಸ್ಥಳೀಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ಮತ್ತು ಶ್ರೀ. ಜಿ.ಜಿ.ಚೋಪ್ರಾ ಸರಕಾರಿ ಪದವಿ ಪೂರ್ವ ಕಾಲೇಜಿನ ಸಹಯೋಗದೊಂದಿಗೆ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳಿಗೆ ನಶೆ ಮುಕ್ತ ಪ್ರತಿಜ್ಞೆ ವಿಧಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ರಾಜಯೋಗಿಣಿ ಬ್ರಹ್ಮಕುಮಾರಿ ರಾಜೇಶ್ವರಿ ಅಕ್ಕನವರು ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಸಮಯದಲ್ಲಿ ತಮ್ಮ ಭವಿಷ್ಯದ ಬಗ್ಗೆ ಯೋಚಿಸಬೇಕೆ ವಿನಃ ತಮಗೆ ನಶೆಯನ್ನುoಟು ಮಾಡುವ ಚಟಗಳಿಂದ ದೂರ ಇರಬೇಕು. ಪ್ರಾರಂಭದಲ್ಲಿದ್ದ ಹವ್ಯಾಸಗಳು ನಂತರ ಚಟಗಳಾಗಿ ಮಾರ್ಪಟ್ಟು ಮುಂದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಮೂಲಕ ಸಮಾಜದಲ್ಲಿ ತಲೆತಗ್ಗಿಸುವಂತೆ ಮಾಡುತ್ತವೆ ಎಂದು ಹೇಳಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ನೈತಿಕ ಮೌಲ್ಯಗಳನ್ನು ಅಳವಡಿಸಿಕೊಂಡು ತಂದೆ-ತಾಯಿಗಳ ಕನಸುಗಳನ್ನು ನನಸು ಮಾಡುವತ್ತ ಗಮನ ಹರಿಸಬೇಕೆಂದು ಮಾರ್ಗದರ್ಶನ ನೀಡಿದರು.

ಕಾಲೇಜಿನ ವಿದ್ಯಾರ್ಥಿಗಳಿಗೆ ನಶೆ ಮುಕ್ತ ಪ್ರತಿಜ್ಞಾ ವಿಧಿಬೋಧಿಸಿ ಮಾತನಾಡಿದ ರಾಜಯೋಗಿಣಿ ಪಾರ್ವತಿ ಅಕ್ಕವರು ವಿದ್ಯಾರ್ಥಿಗಳು ತಮ್ಮ ಏಕಾಗ್ರತೆಗೆ ತೊಂದರೆಯನ್ನುಂಟು ಮಾಡುವ ವಿಚಾರಗಳಿಂದ ಮುಕ್ತರಾಗಿ ಒಳ್ಳೆಯ ವಿದ್ಯಾಭ್ಯಾಸದೊಂದಿಗೆ ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಬಲಿಷ್ಠ ಭಾರತದ ನಿರ್ಮಾಣಕ್ಕೆ ಸಹಕರಿಸಬೇಕೆಂದು ಕರೆ ನೀಡಿದರು. ರಾಜಯೋಗಿಣಿ ಚಂಪಾ ಅಕ್ಕವರು ವಿದ್ಯಾರ್ಥಿಗಳಿಗೆ ಧ್ಯಾನ ಮಾಡಿಸಿ ಮನಶಾಂತಿಯ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಚಾರ್ಯರಾದ ಆರ್.ಪಿ.ಕೌಜಲಗಿ ಮಾತನಾಡಿ ಆಧುನಿಕ ತಂತ್ರಜ್ಞಾನ ಮುಂದುವರೆದಂತೆ ವಿದ್ಯಾರ್ಥಿಗಳ ಏಕಾಗ್ರತೆ ವಿದ್ಯಾಭ್ಯಾಸದ ಕಡೆಗೆ ಕಡಿಮೆಯಾಗುತ್ತಿದ್ದು ಇದರಿಂದಾಗಿ ವಿದ್ಯಾರ್ಥಿಗಳು ವಿವಿಧ ವ್ಯಸನಗಳಿಗೆ ಬಲಿಯಾಗುತ್ತಿರುವುದು ವಿಷಾದನೀಯ. ಈ ವ್ಯಸನಗಳು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಆರ್ಥಿಕವಾಗಿ ದುರ್ಬಲರನ್ನಾಗಿ ಮಾಡುತ್ತವೆ. ಇಂದಿನ ದಿನಗಳಲ್ಲಿ ಮೊಬೈಲ್ ಕೂಡ ಯುವ ಪೀಳಿಗೆಗೆ ಒಂದು ವ್ಯಸನವಾಗಿ ಪರಿಣಮಿಸಿದೆ. ವಿವಿಧ ರೀತಿಯ ನಶೆ ನೀಡುವ ವ್ಯಸನಗಳನ್ನು ಮೆಟ್ಟಿನಿಂತು ವಿದ್ಯಾರ್ಥಿಗಳು ಸಾಧನೆ ಮಾಡಿ ಉಜ್ವಲ ಭವಿಷ್ಯ ನಿರ್ಮಿಸಿಕೊಳ್ಳುವುದು ಅತ್ಯಗತ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಸುವರ್ಣಾ, ಬಿ. ಕೆ.ಜಗದೀಶ ಹಳೆಮನಿ, ಬಿ. ಕೆ. ಶಿವಾನಂದ, ಬಿ. ಕೆ. ವೆಂಕಟೇಶ ಉಪನ್ಯಾಸಕರಾದ ಆರ್.ಸಿ.ಬಾರಾಟಕ್ಕೆ, ಶ್ರೀದೇವಿ ಹಂಜೆ, ಶಿಲ್ಪಾ ಪೂಜೇರ, ಶಿವಾನಿ ಮಠಪತಿ, ಜಿ.ಜಿ. ಖೋದಾನಪುರ, ಸೌಜನ್ಯ ಕುಲಕರ್ಣಿ, ಉಮಾದೇವಿ ಮುಕಯ್ಯನಮಠ, ಅರುಣ ಕಗದಾಳ, ಆನಂದ ಯರಗಟ್ಟಿ, ಗಿರಿಜಾ ಹುಂಡನವರ, ಮಂಜುನಾಥ ಹುಲ್ಲೂರ ಹಾಗೂ ಇತರರು ಉಪಸ್ಥಿತರಿದ್ದರು.ಉಪನ್ಯಾಸಕರಾದ ಎಸ್.ಬಿ.ಕಿವಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

About The Author