ಸ್ವಾತಂತ್ರ್ಯ ದಿನೋತ್ಸವದ ಅಂಗವಾಗಿ ತುರನೂರ ಗ್ರಾಮ ಪಂಚಾಯತಿಯ ಆವರಣದಲ್ಲಿ ಧ್ವಜಾರೋಹಣವನ್ನು ನೆರವೇರಿಸಲಾಯಿತು.

WhatsApp Group Join Now

ಸ್ವಾತಂತ್ರ್ಯ ದಿನದಂದು ವಿಶೇಷ ಗ್ರಾಮಸಭೆಯನ್ನು ಹಮ್ಮಿಕೊಂಡು ಗ್ರಾಮ ಪಂಚಾಯತಿಯ ಸ್ವಂತ ಅನುದಾನದಲ್ಲಿ
ಗ್ರಾಮ ಲಕ್ಷ್ಮಿ ಸುಕನ್ಯಾ ಸಮೃದ್ಧಿ ಯೋಜನೆ (ಹೆಣ್ಣು ಮಗು ಜನಿಸಿದ ಸಂದರ್ಭದಲ್ಲಿ ಮಗುವಿನ ಹೆಸರಿನಲ್ಲಿ ಅಂಚೆ ಕಚೇರಿಯಲ್ಲಿ ರೂ.5,000/- ಠೇವಣಿ ಇಡುವ ಯೋಜನೆ

ಗ್ರಾಮರತ್ನ ಪ್ರತಿಭಾ ಪುರಸ್ಕಾರ ಯೋಜನೆ (ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಅಂಕಗಳಿಸಿದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ವಿದ್ಯಾರ್ಥಿ, ವಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಪ್ರೋತ್ಸಾಹ ಧನ ನೀಡುವುದು)

ಗ್ರಾಮ ಪಂಚಾಯಿತಿ ಸಪ್ತಪದಿ ಯೋಜನೆ (ಹೆಣ್ಣುಮಗಳ ವಿವಾಹ ಸಂದರ್ಭದಲ್ಲಿ ಒಂದು ಬಾರಿ ರೂ.5,001/- ರೂಪಾಯಿಗಳ ಗೌರವ ಧನ ನೀಡುವುದು)

ನಮ್ಮ ಪಂಚಾಯಿತಿ ನಮ್ಮ ಹಿರಿಯರು ನಮ್ಮ ಹೆಮ್ಮೆ
(85 ವರ್ಷ ಮೇಲ್ಪಟ್ಟ ಎಲ್ಲ ಹಿರಿಯ ನಾಗರಿಕರಿಗೆ ಜೀವಮಾನದಲ್ಲಿ ಒಂದು ಬಾರಿ ರೂ.5,000 ಗೌರವ ಧನ ನೀಡುವುದು

ಗ್ರಾಮ ಪಂಚಾಯಿತಿ ಅಂತಿಮ ನಮನ ಯೋಜನೆ
(ಗ್ರಾಮ ಪಂಚಾಯತಿ ವ್ಯಾಪ್ತಿಯ ನಾಗರಿಕರು ನಿಧನರಾದ ಸಂದರ್ಭದಲ್ಲಿ ರೂ.2,500 ಸಹಾಯಧನ ನೀಡುವುದು)

ಹೀಗೆ ತುರನೂರ ಗ್ರಾಮ ಪಂಚಾಯತಿಯಿಂದ ದಿ.15-08-2026 ರಿಂದ ಅನ್ವಯವಾಗುವಂತೆ ಪಂಚ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ಘೋಷಣೆ ಮಾಡಲಾಯಿತು.

ಈ ಸಂದರ್ಭದಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರನ್ನು ಸತ್ಕರಿಸಿ ಸಾಂಕೇತಿಕವಾಗಿ ಚೆಕ್ ನೀಡುವುದರ ಮೂಲಕ ಯೋಜನೆಗಳನ್ನು ಜಾರಿಗೆ ತರಲಾಯಿತು.

VB-G RAM G ಯೋಜನೆ ಅಡಿಯಲ್ಲಿ ಹೊಸ ಗ್ಯಾರಂಟಿ ಕಾರ್ಡ ನೀಡುವ ಮೂಲಕ ಜಾಬ್ ಕಾರ್ಡ ಮೇಳ ಅಭಿಯಾನ ಕ್ಕೆ ಚಾಲನೆ ನೀಡಲಾಯಿತು.

About The Author