ಲೈಸೆನ್ಸ್ ಇಲ್ಲದೇ ವ್ಯಾಪಾರ ವಹಿವಾಟು ಅಪರಾಧ; ಪೌರಾಯುಕ್ತ ಗುರುಸಿದ್ದಯ್ಯ ಹಿರೇಮಠ
ರಾಯಚೂರು ನಗರದ ಎಲ್ಲಾ ವಹಿವಾಟು ಉದ್ಯಮಿಗಳು ತಾವು ಮಾಡುತ್ತಿರುವ ವ್ಯಾಪಾರದ ಅಂಗಡಿಗಳ ಕಡ್ಡಾಯವಾಗಿ ಲೈಸೆನ್ಸ್ನ್ನು ಪಡೆಯಬೇಕು. ತಪ್ಪಿದ್ದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆ 257ನೇ ಪ್ರಕರಣದಡಿ ತಮ್ಮ ವಿರುದ್ಧ ಮಾನ್ಯ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗುವುದು. ಕರ್ನಾಟಕ ಮುನ್ಸಿಪಲ್ ಕಾಯ್ದೆ 1964ರ ಪ್ರಕರಣ 256ರ ಪ್ರಕಾರ ಯಾವುದೇ ವ್ಯಕ್ತಿಯು ಮುನ್ಸಿಪಲ್ ಕಮಿಷನರ್ ಅಥವಾ ಚೀಪ್ ಆಫೀಸರನು ಮಂಜೂರು ಮಾಡಿದ ಲೈಸೆನ್ಸ್ ಇಲ್ಲದೇ ಅಥವಾ ಅದರ ನಿಬಂಧನೆಗಳಿಗೆ ಅನುಗುಣವಾಗಿ ಯಾವುದೇ ವ್ಯಾಪಾರವನ್ನು ಮಾಡತಕ್ಕದ್ದಲ್ಲ. ಒಂದು ವೇಳೆ ಮುನ್ಸಿಪಲ್ ಕೌನ್ಸಿಲ್ನ ಪರವಾನಿಗೆ ಇಲ್ಲದೇ…
