BREAKING NEWS

ಡ್ರಗ್ಸ್ ಪಾಜಿಟಿವ್ ಪ್ರಕರಣಗಳ ಪಾಲೊಅಪ್ ಮಾಡಿ; ಪಾಲಕರು, ವಿದ್ಯಾರ್ಥಿಗಳು ಮತ್ತು ಶಿಕ್ಷಕರಲ್ಲಿ ವ್ಯಾಪಕ ಜಾಗೃತಿ ಮೂಡಿಸಿ: ಜಿಲ್ಲಾಧಿಕಾರಿ ದಿವ್ಯ ಪ್ರಭು

ಧಾರವಾಡ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಡ್ರಗ್ಸ್ ನಿಯಂತ್ರಣ ಮತ್ತು ಜಾಗೃತಿ ಕಾರ್ಯಕ್ರಮಗಳ ಕುರಿತು ಸಮಿತಿ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರು ಮಾತನಾಡಿದರು. ಅವಳಿ ನಗರದಲ್ಲಿ ಮಾದಕ ವಸ್ತು ಮತ್ತು ಮಾದಕ ದ್ರವ್ಯ ಸೇವನೆ ಹಾಗೂ ಮಾರಾಟದ ಕುರಿತು ತಪಾಸಣೆ, ವಿಚಾರಣೆ ಕೈಗೊಂಡ ಬಗ್ಗೆ ಸಮಿತಿಗೆ ವರದಿ ಸಲ್ಲಿಸಬೇಕು. 354 ಯುವಕರ ಪೈಕಿ 168 ಜನ ವಿದ್ಯಾರ್ಥಿಗಳಲ್ಲಿ ಡ್ರಗ್ಸ್ ಸೇವನೆ ಪಾಜಿಟಿವ್ ಬಂದಿರುವುದು ಸಾಮಾನ್ಯ ಸಂಗತಿಯಲ್ಲ. ಡ್ರಗ್ಸ್ ಹಾನಿ ಕುರಿತು ಸಾರ್ವಜನಿಕರಲ್ಲಿ ವ್ಯಾಪಕ ಪ್ರಚಾರ ಮಾಡುವ…

Read More

ತ್ರೈಮಾಸಿಕ ಜಿಲ್ಲಾ‌‌ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ ಸಭೆಯನ್ನು ಉದ್ದೇಶಿಸಿ ಸಂಸದ ಜಗದೀಶ ಶೆಟ್ಟರ್ ಮಾತನಾಡಿದರು

ಬೆಳಗಾವಿ ಜಿಲ್ಲಾ‌ ಪಂಚಾಯತ ಸಭಾಂಗಣದಲ್ಲಿ ಶುಕ್ರವಾರ ಜರುಗಿದ 2024-25ನೇ ಸಾಲಿನ ತ್ರೈಮಾಸಿಕ ಜಿಲ್ಲಾ‌‌ ಅಭಿವೃದ್ಧಿ ಸಮನ್ವಯ ಮತ್ತು ಮೇಲುಸ್ತವಾರಿ ಸಮಿತಿ ಸಭೆಯ ಅಧ್ಯಕ್ಷತೆಯನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಸದಸ್ಯರಾದ ಜಗದೀಶ ಶೆಟ್ಟರ್ ಅವರು ವಹಿಸಿ ಮಾತನಾಡಿದರು. ಬೆಳೆ ಪರಿಹಾರ ಕಾರ್ಯದಲ್ಲಿ ಜಂಟಿ‌ ಸಮೀಕ್ಷೆ‌ ಕಾರ್ಯವನ್ನು ಪೂರ್ಣಗೊಳಿಸಿ ಆದಷ್ಟು ಬೇಗನೆ‌ ರೈತರಿಗೆ ಬೆಳೆ ಪರಿಹಾರ ಒದಗಿಸಲು ಕ್ರಮ‌ ಜರುಗಿಸಿ, ನೆರೆ‌ ಹಾವಳಿಯಿಂದಾಗಿ ಹಾನಿಗೊಳಗಾದ ರಸ್ತೆ, ಸೇತುವೆಗಳ ದುರಸ್ತಿ‌ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವಂತೆ‌ ಹೇಳಿದರು. ಬೆಂಬಲ‌ ಬೆಳೆ ಖರೀದಿ ಕೇಂದ್ರಗಳಲ್ಲಿ…

Read More

ಕಬ್ಬಡಿ ಮತ್ತು ಥ್ರೋಬಾಲ ಕ್ರೀಡಾಕೂಟವನ್ನು ಅನಿಕೇತ ಪಟ್ಟಣ ಅವರು ಚಾಲನೆ ನೀಡಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸುರೇಬಾನ ಗ್ರಾಮದ ಶ್ರೀ ಫಲಹಾರ ಶಿವಯೋಗೀಶ್ವರ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಸಂಯುಂಕ್ತಾಶ್ರಯದಲ್ಲಿ ಆಯೋಜಿಸಿದ ಜಿಲ್ಲಾಮಟ್ಟದ ಪದವಿಪೂರ್ವ ಮಹಾವಿದ್ಯಾಲಯಗಳ ಕಬ್ಬಡಿ ಮತ್ತು ಥ್ರೋಬಾಲ ಕ್ರೀಡಾಕೂಟವನ್ನು ಅನಿಕೇತ ಪಟ್ಟಣ ಅವರು ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಪೂಜ್ಯರಾದ ಶ್ರೀ ಶಿವಮೂರ್ತಿ ಮಹಾಸ್ವಾಮಿಗಳು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಆರ್.ಟಿ ಬಳಿಗಾರ, ಶ್ರೀ ರಮೇಶ ಕಂಬಾರ, ಶ್ರೀ ಚಿನ್ನಪ್ಪ ಮುದೇನೂರ  ಎಸ್.ಎಸ್ ಬೂದಿಹಾಳಮಠ ಹಾಗೂ ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More

ರಾಜ್ಯ ಕ್ರಿಕೆಟ್ ತಂಡಕ್ಕೆ ಶ್ರೇಯಾ ಚವ್ಹಾಣ ಆಯ್ಕೆ.

ವಿಜಯಪೂರ : 19 ವಯಸ್ಸಿನ ಕರ್ನಾಟಕ ರಾಜ್ಯ ಮಹಿಳಾ ಟಿ-20 ಹಾಗೂ ಏಕದಿನ ಸರಣಿಗೆ ವಿಜಯಪೂರ ನಗರದ ಪ್ರತಿಷ್ಟಿತ ಎಸ್.ಜೆ.ಬಿ. ಪಿ.ಯು. ಕಾಲೇಜಿನಲ್ಲಿ ಪ್ರಥಮ ಪಿ.ಯು. ವಿಜ್ಞಾನವಿಭಾಗದಲ್ಲಿ ಓದುತ್ತಿರುವ ಶ್ರೇಯಾ ಚವ್ಹಾಣ ಆಯ್ಕೆಯಾಗಿದ್ದಾರೆ. ಅಕ್ಟೋಬರ್-1 ರಿಂದ ಚೆನೈಯಲ್ಲಿ ನಡೆಯಲಿರುವ ರಾಜ್ಯ ಮಹಿಳಾ ಅಂಡರ-19 ತಂಡದಲ್ಲಿಆಡಲಿದ್ದಾರೆ. ತಂಡವು ಗುಜರಾತ, ಬರೋಡಾ, ಛತ್ತಿಸಗಡ, ಮಿಜೊರಾಮ ಹಾಗೂ ಮಹಾರಾಷ್ಟ್ರ ತಂಡದಜೋತೆಗೆ ಏಕದಿನ ಶ್ರೇಣಿ ಪಂದ್ಯಗಳನ್ನು ಜನೇವರಿ 2025 ರಲ್ಲಿ ಅಸ್ಲಾಂ, ಮಿಜೊರಾಮ ಮತ್ತು ಛತ್ತಿಸಗಡರಾಜ್ಯಗಳ ತಂಡಗಳೊಂದಿಗೆ ಸೆಣೆಸಲಿದ್ದಾರೆ. ಕಳೆದ ವರ್ಷ ರಾಜಕೋಟನಲ್ಲಿ…

Read More

ರಾಮದುರ್ಗ ಪಟ್ಟಣದಲ್ಲಿ ಮುಸ್ಲಿಂ ಬಾಂಧವರಿಂದ ಈದ್ ಮಿಲಾದ್ ಸಂಭ್ರಮ

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದಲ್ಲಿ 16_9_24ರಂದು ನಡೆಯಬೇಕಿದ್ದ್ ಈದ ಮಿಲಾದ್ ಮೆರವಣಿಗೆ 19_9_24ರಂದು ನಡೆಯಿತು, ಕಾರಣ 16-9-24ರಂದು ಗಣೇಶ ಹಬ್ಬದ ನಿಮತ್ಯ ಇಂದು ಮೆರವಣಿಗೆ ನಡೆಯಿತು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಜನ್ಮ ದಿನದ ಸಂಕೇತವಾಗಿರುವ ಈದ್‌ಮಿಲಾದ್ ಹಬ್ಬವನ್ನು ಪಟ್ಟಣದ ಜಾಮಿಯಾ ಮಸ್ಜಿದಯಿಂದ ಮುಂಜಾನೆ 10ಘಂಟೆಯಿಂದ ಸಂಜೆ 4ಘಂಟೆಗೆ ಮೆರವಣಿಗೆ ನಡೆಯಿತು. ಮುಸ್ಲಿಂ ಬಾಂದವರು ನಗರದ ಪ್ರಮುಖ ಬೀದಿಗಳಲಿ ಮೆರವಣಿಗೆ ಸಾಗಿ ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಯುವಕರು ಬಿಳಿಬಣ್ಣದ ಕುರ್ತಾ ಧರಿಸಿ,…

Read More

ಸವದತ್ತಿ ತಾಲೂಕಿನ ಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಪೂರ್ವಭಾವಿ ಸಭೆ

ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನಲಿಂಗಾಯತ ಪಂಚಮಶಾಲಿ ವಕೀಲರು ಷರಿಷತ್ತಿನ ಅಧ್ಯಕ್ಷರಾದ ಎಮ್ ಬಿ ದ್ಯಾಮನಗೌಡರ ಇವರ ನಿವಾಸದಲ್ಲಿ ದಿನಾಂಕ : 22-09-2024 ರಂದು ಭಾನುವಾರ ಬೆಳ್ಳಗ್ಗೆ ಬೆಳಗಾವಿ ಗಾಂಧಿಭವನದಲ್ಲಿ ಪಂಚಮಶಾಲಿ ಮಲೆಗೌಡ ಅಂಗಾಯತ ಗೌಡ ದಿಕ್ಷಾ ಅಂಗಾಯತರ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ 2ಎ ಮೀಸಲಾತಿ ಸೇರುವ ಹಾಗೂಲಿಂಗಾಯತ ಉಪಸಮಾಜಗಳಿಗೆ ಓ.ಬಿ.ಸಿ ಮೀಸಲಾತಿಗಾಗಿ ಹಕ್ಕೊತ್ತಾಯಿಸಿಆರಂಭಗೊಂಡಿರುವ 7 ನೇ ಹಂತದ ಭಾಗ 2 ರ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ಹಾಗೂಕಾನೂನಾತ್ಮಕವಾಗಿ ಹೋರಾಡಲು ಪೂರ್ವ ಭಾವಿ ಸಭೆಯನ್ನು ನಡೆಸಲಾಯಿತು.ಈ…

Read More

ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೂತನ ಕಚೇರಿ ಉದ್ಘಾಟನೆ

ಬೆಳಗಾವಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ವತಿಯಿಂದ ಬುಧವಾರ ಜಿಲ್ಲಾ ಪಂಚಾಯತ್ ಆವರಣದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿಯನ್ನು ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್. ಎಂ ರೇವಣ್ಣ ಅವರು ಉದ್ಘಾಟಿಸಿ ಮಾತನಾಡಿದರು. ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಯಿಂದ ಅರ್ಹ ಫಲಾನುಭವಿಗಳು ವಂಚಿತರಾಗಬಾರದು ಎನ್ನುವ ಉದ್ದೇಶದಿಂದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ನೂತನ ಕಚೇರಿಯನ್ನು ಪ್ರಾರಂಭಿಸಲಾಗಿದೆ. ಸರ್ಕಾರದ ಗ್ಯಾರಂಟಿ ಯೋಜನೆಗಳು ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ…

Read More

ಹಕ್ಕಿಪಿಕ್ಕಿ ಕಾಲೋನಿಯ ಗರ್ಭೀಣಿ ಸ್ತ್ರೀಯರಿಗೆ ಮತ್ತು ಮಕ್ಕಳಿಗೆ ಮೊಟ್ಟೆ,ಊಟ ವಿತರಿಸದ ಅಂಗನವಾಡಿ ಕಾರ್ಯಕರ್ತೆ ವಜಾ ಗೊಳಿಸಲು ಕ್ರಮ

ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಹಕ್ಕಿಪಿಕ್ಕಿ ಅಂಗನವಾಡಿ ಕೇಂದ್ರಕ್ಕೆ ಕರ್ನಾಟಕ ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿರವರು ಸೆ.11 ರಂದು ಅಧಿಕೃತ ಪ್ರವಾಸದಲ್ಲಿ ಭೇಟಿ ನೀಡಿದ ಸಂದರ್ಭದಲ್ಲಿ ಅಂಗನವಾಡಿಯಿAದ “ಸಮಗ್ರ ಶಿಶು ಅಭಿವೃದ್ಧಿ ಯೋಜನೆ” ಯಡಿಯಲ್ಲಿ ಗರ್ಭೀಣಿ ಸ್ತ್ರೀಯರಿಗೆ ಹಾಗೂ ಮಕ್ಕಳಿಗೆ ಮೊಟ್ಟೆ, ಬಿಸಿಊಟ ವಿತರಿಸದೇ ಇರುವುದು ಕಂಡು ಬಂದಿರುತ್ತದೆ. ಮೊಟ್ಟೆ ವಿತರಣೆ ಬಗ್ಗೆ ಅಧ್ಯಕ್ಷರು ಅಂಗನವಾಡಿ ಕಾರ್ಯಕರ್ತೆಯಾದ ಆಲುವೇಲಮ್ಮ ರವರನ್ನು ಪ್ರಶ್ನಿಸಿರುತ್ತಾರೆ, ಮಹಿಳೆಯರು ಪೌಷ್ಟಿಕಾಂಶದ ಪದಾರ್ಥಗಳನ್ನು ವಿತರಿಸದೇ ಇರುವುದನ್ನು ಆಯೋಗದ ಅಧ್ಯಕ್ಷರ ಗಮನಕ್ಕೆ ತಂದಿರುತ್ತಾರೆ.ಈ…

Read More

ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಮರಣೋತ್ತರ ನಿಧಿ ಚೆಕ್ಕ್ ವಿತರಣೆ

ಬೆಟಗೇರಿ:ಗೋಕಾಕ ತಾಲೂಕಿನ ಬಿಲಕುಂದಿ ಗ್ರಾಮದ ಸಿದ್ದಪ್ಪ ಬಸಪ್ಪ ವಡೇರ ಅವರು ಇತ್ತೀಚೆಗೆ ನಿಧನ ಹೊಂದಿದ್ದರಿಂದ ಅವರ ಧರ್ಮಪತ್ನಿ ನಾಗವ್ವ ಸಿದ್ದಪ್ಪ ವಡೇರ ಅವರಿಗೆ ಬೆಟಗೇರಿ ಬಸವೇಶ್ವರ ಸೌಹಾರ್ದ ಸಹಕಾರಿ ವತಿಯಿಂದ ಸಹಕಾರಿಯ ಮರಣೋತ್ತರ ನಿಧಿಯ ೫೦ ಸಾವಿರ ರೂ.ಗಳ ಚೆಕ್ಕನ್ನು ಸೆ.೧೮ ರಂದು ಸಹಕಾರಿ ಅಧ್ಯಕ್ಷ ಬಸವರಾಜ ಮಾಳೇದ ವಿತರಿಸಿದರು.ಈ ವೇಳೆ ಸಹಕಾರಿ ಉಪಾಧ್ಯಕ್ಷ ಕಲ್ಲಪ್ಪ ಹುಬ್ಬಳ್ಳಿ, ಮಲ್ಲಿಕಾರ್ಜುನ ನೀಲಣ್ಣವರ, ಈಶ್ವರ ಬಡಿಗೇರ, ಶಿವನಪ್ಪ ಕಂಬಿ, ಶಿವು ಮೇಳೆನ್ನವರ, ಅಶೋಕ ದೇಯನ್ನವರ, ಅಪ್ಪಯ್ಯಪ್ಪ ಸಿದ್ನಾಳ, ವೀರಭದ್ರ ದಂಡಿನ,…

Read More

ಬೆಟಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಆಕಳು ಮತ್ತು ಎಮ್ಮೆ ಹಾಲು ವಿಭಾಗದಲ್ಲಿ ಅತಿ ಹೆಚ್ಚು ಹಾಲು ನೀಡಿದ ಸಂಘದ ಸದಸ್ಯರಿಗೆ ಬಹುಮಾನ ವಿತರಿಸಲಾಯಿತು.

ಹೈನುಗಾರಿಕೆ ರೈತರ ಬದುಕಿನ ಜೀವಾಳವಾಗಿದೆ:ಡಾ.ವಿ.ಎಂ.ಕೌಜಲಗಿಬೆಟಗೇರಿ: ಸ್ಥಳೀಯ ರೈತರು ನಿತ್ಯದ ಕೃಷಿ ಚಟುವಟಿಕೆಗಳ ಜೋತೆಗೆ ಹೈನುಗಾರಿಕೆ ಅಳವಡಿಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಕೆಎಂಎಫ್‌ನಿಂದ ಹೈನುಗಾರಿಕೆ ಅಭಿವೃದ್ಧಿಗಾಗಿ ಹಲವಾರು ಸಹಾಯ, ಸೌಲಭ್ಯಗಳಿವೆ. ರೈತರು ಇವುಗಳ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಹಾಲು ಒಕ್ಕೂಟ ಗೋಕಾಕ ಘಟಕದ ಉಪಕೇಂದ್ರಾಧಿಕಾರಿ ಡಾ.ವಿ.ಎಂ.ಕೌಜಲಗಿ ಹೇಳಿದರು.ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಸೆ.೧೭ ರಂದು ನಡೆದ ೨೦೨೩-೨೪ನೇ ಸಾಲಿನ ವಾರ್ಷಿಕ ಸರ್ವಸಾಧಾರಣ ಮಹಾಸಭೆಯಲ್ಲಿ ಮುಖ್ಯಅತಿಥಿಯಾಗಿ ಮಾತನಾಡಿ, ಹೈನುಗಾರಿಕೆ ರೈತರ ಬದುಕಿನ ಜೀವಾಳವಾಗಿದೆ….

Read More