25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಬ್ಬರು ನಗರಸಭೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಚಾಮರಾಜನಗರ ನಗರಸಭೆಯ ಕಚೇರಿಯಲ್ಲಿ 25 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಇಬ್ಬರು ನಗರಸಭೆ ಅಧಿಕಾರಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಚಾ.ನಗರ ನಗರಸಭೆಯ ಕಂದಾಯ ನಿರೀಕ್ಷಕ ಶಕೀಲ್ ಅಹಮದ್, ಕಂದಾಯ ಅಧಿಕಾರಿ ಹೇಮಕುಮಾರ್ ನಿವೇಶನವನ್ನು ಇ ಖಾತೆ ಮಾಡಿಕೊಡಲು 25 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಇದನ್ನು ಪಡೆದುಕೊಳ್ಳುವಾಗ ನೇರವಾಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಗಜೇಂದ್ರ ಪ್ರಸಾದ್ ನೇತೃತ್ವದಲ್ಲಿ ಇನ್ಸ್ಪೆಕ್ಟರ್ ಲೋಹಿತ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು. ಇ ಖಾತೆ ಮಾಡಿಕೊಡಲು ಅಧಿಕಾರಿಗಳಿಗೆ ಮಧ್ಯವರ್ತಿಯಾಗಿದ್ದ…
ಮುನವಳ್ಳಿಯಲ್ಲಿ ಬಿಟ್ಟು ಹೋದ ವೃದ್ಧೆಯ ರಕ್ಷಣೆಗೆ ಖಡಕ್ ಸೂಚನೆ!
ಬೆಳಗಾವಿ ಜಿಲ್ಲೆಯ ಮುನವಳ್ಳಿಯಲ್ಲಿ ವೃದ್ಧೆಯೊಬ್ಬರನ್ನು ನಿರ್ಜನ ಪ್ರದೇಶದಲ್ಲಿ ಬಿಟ್ಟುಹೋದ ಅಮಾನವೀಯ ಘಟನೆ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಕುರಿತು ತಕ್ಷಣವೇ ಸ್ಪಂದಿಸಿರುವ ನಿಕಟಪೂರ್ವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ವೃದ್ಧೆಗೆ ಸೂಕ್ತ ಚಿಕಿತ್ಸೆ ಹಾಗೂ ರಕ್ಷಣೆ ನೀಡುವಂತೆ ಖಡಕ್ ನಿರ್ದೇಶನ ನೀಡಿದ್ದಾರೆ. ಸವದತ್ತಿ ತಾಲೂಕಿನ ಮುನವಳ್ಳಿ ಹೊರವಲಯದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ವೃದ್ಧ ಮಹಿಳೆಯನ್ನು ನಿರ್ಜನ ಪ್ರದೇಶದಲ್ಲಿ ಕೈಬಿಟ್ಟಿರುವ ಘಟನೆ ತೀವ್ರ ಕಳವಳ ಮೂಡಿಸಿದೆ. ತಮ್ಮ ಬಿಡುವಿಲ್ಲದ ವೇಳಾಪಟ್ಟಿಯ ನಡುವೆಯೂ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮಹಿಳಾ ಮತ್ತು ಮಕ್ಕಳ…
ಪಾಲಕರು ತಮ್ಮ ಮಕ್ಕಳನ್ನು ಶಾಲೆಯ ಪ್ರಾರಂಭದ ದಿನದಿಂದ ಶಾಲೆಗೆ ಕಳುಹಿಸಿ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಹಕರಿಸಲು ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಕರೆ ನೀಡಿದರು.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಗದಾಳ ಗ್ರಾಮದಸರ್ಕಾರಿ ಪ್ರೌಢ ಶಾಲೆ ಕಗದಾಳದಲ್ಲಿ ಹಮ್ಮಿಕೊಂಡ ಶಾಲಾ ಪ್ರಾರಂಭೋತ್ಸವದಲ್ಲಿ ಮುಖ್ಯೋಪಾಧ್ಯಾಯರಾದ ಆರ್ ಸಿ ರಾಠೋಡ ಮಾತನಾಡುತ್ತಾ, ಸರ್ಕಾರಿ ಶಾಲೆಗಳಲ್ಲಿ ಸರ್ಕಾರವು ಉಚಿತ ಶಿಕ್ಷಣ ನೀಡುವುದರ ಜೊತೆಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರ ಹಾಗೂ ಬಿಸಿಊಟ ಇತ್ಯಾದಿ ಸೌಲಭ್ಯಗಳನ್ನು ನೀಡುತ್ತಿದೆ.ಅರ್ಹ ಪ್ರತಿಭಾವಂತ ಶಿಕ್ಷಕರು ಸರಕಾರಿ ಶಾಲೆಯಲ್ಲಿ ಕೆಲಸ ನಿರ್ವಹಿಸುತಿದ್ದುದರಿಂದ , ಶಾಲೆಗೆ ತಮ್ಮ ಮಕ್ಕಳನ್ನು ದಾಖಲಿಸಿ ಪ್ರಯೋಜನ ಪಡೆಯಲು ಕೋರಿದರು. ಸರಸ್ವತಿ ಪೂಜೆ ಹಾಗೂ ಸಸಿಗೆ ನೀರು ಹಾಕುವುದರ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ…
ಸರಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಂಗ್ರಳಿ ಬಿ ಕೆ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ ಜರಗಿತು,
ಶಾಲೆಯನ್ನು ತಳಿರು ತೋರಣಗಳಿಂದ ಸಿಂಗರಿಸಿ, ರಂಗೋಲಿ ಹಾಕಿ, ಮಕ್ಕಳನ್ನು ಚಾಕ್ಲೇಟ್, ಹಾಗು ಹೂವು ಕೊಟ್ಟು, ಬಲೂನ್ ಹಾರಿಸಿ, ಆರತಿ ಬೆಳಗಿ,ಸ್ವಾಗತಿಸಲಾಯಿತು ಎಸ್ ಡಿ ಎಂ ಸಿ ಅಧ್ಯಕ್ಷ ರುದ್ರಪ್ಪ ಬಲಕುಂದಿ ಚಾಲನೆ ನೀಡಿದರು ಸಿ ಆರ್ ಪಿ ಗಳಾದ ರಾಜು ಕೋಲಕಾರ ಆಗಮಿಸಿದ್ದರು ನಮಿತಾ ಕಾಂಬಳೆ, ಸಿದರಾಯಿ ಬೆಳಗಾವಿ ರಮೇಶ ವಡರತ್ತಿ ನಾಗಪ್ಪ ಕರಿಕಟ್ಟಿ, ಗಜಾನನ ಕಾಂಬಳೆ ಪಾಲಕರು ಪೋಷಕರು ಶಿಕ್ಷಣ ಪ್ರೇಮಿಗಳು,ಆಗಮಿಸಿದ್ದರು, ಶಾಲಾ ಪ್ರಧಾನ ಗುರುಗಳು ನದಾಫ, ಹಾಗು ಎಲ್ಲ ಸಿಬ್ಬಂದಿ ಮಕ್ಕಳು ಹಾಜರಿದ್ದರು ಇದೇ…
2026 27 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ
ಕಾಕತಿ ಸರ್ಕಾರಿ ಶಾಲೆಯಲ್ಲಿ ಸಂಭ್ರಮದ ಶಾಲಾ ಪ್ರಾರಂಭೋತ್ಸವ ಸರ್ಕಾರಿ ಶಾಲೆಯ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ – ಅಕ್ಷರ ದಾಸೋಹ ತಾಲೂಕ ಅಧಿಕಾರಿ ರವಿ ಜವಳೇಕರ ಉಚಿತ ಪಠ್ಯ ಪುಸ್ತಕ, ಸಮವಸ್ತ್ರ, ಬಿಸಿ ಊಟ, ಪೂರಕ ಪೋಷಣ ಆಹಾರ, ಉಚಿತ ಶೈಕ್ಷಣಿಕ ಪ್ರವಾಸ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಮಕ್ಕಳು ಸದ್ಬಳಕೆ ಮಾಡಿಕೊಂಡು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿ. ಸರ್ಕಾರ ಮಕ್ಕಳ ಪ್ರಗತಿಗಾಗಿ ಅನೇಕ ಸೌಲಭ್ಯಗಳನ್ನು ಒದಗಿಸಿದ್ದು ಶಿಕ್ಷಕರು ಸಹ ಅವೆಲ್ಲವನ್ನು ಮಕ್ಕಳಿಗೆ ತಲುಪಿಸುವಲ್ಲಿ ನಿರಂತರವಾಗಿ ಶ್ರಮವಹಿಸುತ್ತಿದ್ದಾರೆ…
ವಿಶ್ವ ತಾಯಂದಿರ ದಿನದ ಪ್ರಯುಕ್ತ ಎರಡು ಕೃತಿಗಳ ಲೋಕಾರ್ಪಣೆ
ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಂಡಿದ್ದ ವಿಶ್ವ ತಾಯಂದಿರ ದಿನದ ಅಂಗವಾಗಿ ಡಾ. ಸುನೀಲ ಪರೀಟ ಅವರ ‘ನಮ್ಮ ತಾಯಿ ದೇವರು’ ಹಾಗೂ ‘ವ್ಯಕ್ತಿ ಶಕ್ತಿ’ ಎಂಬ ಎರಡು ಕೃತಿಗಳ ಲೋಕಾರ್ಪಣೆಯಾದ ಸಂದರ್ಭದಲ್ಲಿ ರಾಜ್ಯಮಟ್ಟದ ಮಾತೃ ಸಾಹಿತ್ಯ ಸೇವಾರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ನಮ್ಮ ತಾಯಿ ದೇವರು ಪುಸ್ತಕವನ್ನು ಬಿಡುಗಡೆ ಮಾಡಿದ ಕನ್ನಡ ಸಾಹಿತ್ಯ ಭವನದ ಕಾರ್ಯದರ್ಶಿಗಳಾದ ಬಿ.ಎಂ. ಕಟ್ಟಿಯವರು ತಾಯಿಗೆ ಸಮರ್ಪಿತವಾದ ಇಂಥ ಕೃತಿಗಳು ಯಾವುದೇ ಕಾಲದಲ್ಲಿ ಉತ್ತಮ ಪ್ರಭಾವವನ್ನು ಬೀರುತ್ತವೆ ಎಂದು ಹೇಳಿದರು. ಪುಸ್ತಕ…
ಬೆಳಗಾವಿ: ಡಾಕ್ಟರ್ ಮನೆಯಲ್ಲಿ 1.2 ಕೋಟಿ ರೂ ಮೌಲ್ಯದ ಚಿನ್ನ ಕಳವು; ಇಬ್ಬರ ಬಂಧನ!
ಬೆಳಗಾವಿ: ನಗರದ ವೃದ್ಧ ವೈದ್ಯ ದಂಪತಿಯ ಮನೆಯಿಂದ 1.2 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ. ಆರೋಪಿಗಳನ್ನು ರಾಹುಲ್ ಸತೀಶ್ ಕಾಂಬ್ಳೆ ಮತ್ತು ಬಾಬಾಸಾಬ್ ಈರಪ್ಪ ಕಟಗೇರಿ ಎಂದು ಗುರುತಿಸಲಾಗಿದೆ. ಪೊಲೀಸರು 52.5 ಲಕ್ಷ ರೂ. ಮೌಲ್ಯದ 350 ಗ್ರಾಂ ಚಿನ್ನಾಭರಣಗಳು ಮತ್ತು ಬ್ಯಾಂಕ್ ಖಾತೆಯಲ್ಲಿ ಠೇವಣಿ ಇಟ್ಟಿದ್ದ 22.8 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದು, ಒಟ್ಟು 75.3 ಲಕ್ಷ ರೂ. ವಸೂಲಿ ಮಾಡಲಾಗಿದೆ ಎಂದು ಅಧಿಕಾರಿಗಳು ಶನಿವಾರ…
ಮಾಹಿತಿ ಹಕ್ಕು ನಿಯಮ ಪಾಲಿಸದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಬಿಸಿ : ಆರ್ ಟಿ ಐ ಅರ್ಜಿ ನಿರ್ಲಕ್ಷ್ಯ ಆಯೋಗ ಕ್ರಮ.
ಬೆಂಗಳೂರು: ಮಾಹಿತಿ ಹಕ್ಕು ಅಧಿನಿಯಮದಡಿ ಸಾರ್ವಜನಿಕರಿಂದ ಸ್ವೀಕೃತವಾಗುವ ಪ್ರಥಮ ಮೇಲ್ಮನವಿ ಅರ್ಜಿಗಳ ವಿಚಾರಣೆಗೆ ಹಾಜರಾಗದೆ ನಿರ್ಲಕ್ಷ್ಯ ಧೋರಣೆ ತಾಳುತ್ತಿರುವ ಅಧಿಕಾರಿಗಳ ವಿರುದ್ಧ ಕರ್ನಾಟಕ ಮಾಹಿತಿ ಆಯೋಗ ಕಠಿಣ ಕ್ರಮಕ್ಕೆ ಮುಂದಾಗಿದೆ. ಈ ಬಗ್ಗೆ ಸುತ್ತೋಲೆ ಹೊರಡಿ ಸಿರುವ ಆಯೋಗ, ಮಾಹಿತಿ ಹಕ್ಕು ಅಧಿನಿಯಮ ಸೆಕ್ಷನ್4(1) ಎರ ಮಾಹಿತಿ ಮತ್ತು 4(1)ಬಿ ಅನ್ವಯ 17 ಅಂಶಗಳನ್ನು ಒಳಗೊಂಡ ಪರಿಪೂರ್ಣಗೊಳಿಸಿದ ಮಾಹಿತಿಯನ್ನು ಆಯಾ ಪ್ರಾಧಿಕಾರಿಗಳು ಪ್ರತಿ ವರ್ಷ ಡಿಸೆಂಬರ್ 31ರ ಒಳಗೆ ಇಲಾಖೆ ವೆಬ್ ಸೈಟ್ನಲ್ಲಿ ಪ್ರಕಟಿಸಲು ತಿಳಿಸಿದೆ. ರಾಜ್ಯದ…
ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯಲ್ಲಿ ಅಕ್ರಮ ಆರೋಪ: ಕಂದಾಯ ನಿರೀಕ್ಷಕ ಅಮಾನತು
ಮೈಸೂರು ಜಿಲ್ಲೆಯ ರಮ್ಮನಹಳ್ಳಿ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಎಸ್. ಮಹೇಶ್ ಹಾಗೂ ಕಂದಾಯ ನಿರೀಕ್ಷಕ ಮಂಜುನಾಥ್.ಎನ್ ವಿರುದ್ಧ ಕರ್ತವ್ಯ ಲೋಪ, ನಿರ್ಲಕ್ಷ್ಯತೆ ಹಾಗೂ ಸರ್ಕಾರಿ ಆಸ್ತಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಖಾತೆ ತೆರೆದು ನಮೂನೆ-3 ವಿತರಿಸಿರುವ ಕುರಿತು ಹಲವಾರು ಗಂಭೀರ ದೂರುಗಳು ಸ್ವೀಕೃತಗೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ.ಸಾರ್ವಜನಿಕರಿಂದ ಬಂದ ದೂರುಗಳ ಆಧಾರದ ಮೇಲೆ ಮೈಸೂರು ಜಿಲ್ಲಾಧಿಕಾರಿಗಳು ದಿನಾಂಕ-03.01.2026ರಂದು ಮೈಸೂರು ಮಹಾನಗರ ಪಾಲಿಕೆಯ ಉಪ ಆಯುಕ್ತರು (ಕಂದಾಯ) ಅವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, 15 ದಿನಗಳೊಳಗೆ…
ಸಮಾಜ ಸೇವಕಿ ಭಾರತೀಯ ಎಚ್ ಆರ್ ಅವರಿಗೆ ನಾರಿ ಶಕ್ತಿ ಪ್ರಶಸ್ತಿ
ಕನ್ನಡಾಂಬೆ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಏರ್ಪಡಿಸಿದ್ದ ನಾರಿ ಶಕ್ತಿ ಮತ್ತು ನಾಡ ಕೀರ್ತಿ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ನಾಡಿನ ಅಭ್ಯುದಯದಲ್ಲಿ ಸಾಧಕರ ಪಾತ್ರ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿಮಾತನಾಡಿದ ಅವರು, ಭಾರತದಲ್ಲಿ ಅನಾದಿಕಾಲದಿಂದಲೂ ನಾರಿ ಶಕ್ತಿಗೆ ವಿಶೇಷವಾದ ಸ್ಥಾನಮಾನ ಇದೆ ಅದು ಮುಂದುವರೆದು ಇಂದು ಜಗತ್ತಿನ ಎಲ್ಲಾ ರಂಗಗಳಲ್ಲಿಯೂ ನಾರಿ ತನ್ನ ಶಕ್ತಿ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಿಂದ ಜಗತ್ತಿನ ಅಭ್ಯುದಯಕ್ಕೆ ತನ್ನ ಕೊಡುಗೆಯನ್ನು ನೀಡುತ್ತಿದ್ದಾಳೆ.ಇಂತಹ ಸಮಾರಂಭಗಳಲ್ಲಿ ಮಹಿಳೆಯರನ್ನು ಗೌರವಿಸುತ್ತಿರುವುದು ಅತೀವ ಸಂತಸ ತಂದಿದೆ. ಸಾಹಿತಿ ಹಾಗೂ…
