WhatsApp Group
Join Now
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಯಲ್ಲಮ್ಮ ದೇವಸ್ಥಾನದಲ್ಲಿ ಮೂರೇ ತಿಂಗಳಲ್ಲಿ 3.81 ಕೋಟಿ ಸಂಗ್ರಹ ದಾಖಲೆ ಮೊತ್ತದ ಕಾಣಿಕೆ ಸಂಗ್ರಹ

2025ರ ಏಪ್ರಿಲ್ 1ರಿಂದ ಜೂನ್ 30ರ ಅವಧಿಯಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ಹಣ, ಚಿನ್ನಾಭರಣ, ಬೆಳ್ಳಿ ಆಭರಣಗಳ ಎಣಿಕೆ
2023ರಲ್ಲಿ ಇದೇ ಅವಧಿಯಲ್ಲಿ 1.65 ಕೋಟಿ, 2024ರಲ್ಲಿ ಈ ಅವಧಿಯಲ್ಲಿ 1.96 ಕೋಟಿ ಕಾಣಿಕೆ ಸಂಗ್ರಹವಾಗಿತ್ತು
ಈ ಬಾರಿ ದುಪ್ಪಟ್ಟು ಕಾಣಿಕೆ ಸಂಗ್ರಹವಾಗಿದೆ

3.81 ಕೋಟಿಯಲ್ಲಿ 3.39 ಕೋಟಿ ನಗದು, 32.94 ಲಕ್ಷ ಮೌಲ್ಯದ 340 ಗ್ರಾಂ ಚಿನ್ನಾಭರಣ, 9.79 ಲಕ್ಷದ 8.7 ಕೆಜಿ ಬೆಳ್ಳಿ ಆಭರಣ ಸೇರಿದೆ
ವಿವಿಧ ಸುಧಾರಣಾ ಕ್ರಮ ಅನುಸರಿಸಿದ್ದರಿಂದ ದೇವಸ್ಥಾನದ ಆದಾಯ ಹೆಚ್ಚಾಗಿದೆ
ಈ ಹಣವನ್ನು ಅಭಿವೃದ್ಧಿ ಕೆಲಸಕ್ಕೆ ಬಳಸುವುದಾಗಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಅಶೋಕ್ ದುಡಗುಂಟಿ ಹೇಳಿದರು



