ಬನಶಂಕರಿದೇವಿ ಸಮುದಾಯ ಭವನದ ನೂತನ ಕಟ್ಟಡವನ್ನು ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ ಉದ್ಘಾಟಿಸಿದರು.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಬಣಕಾರ ಪೇಟೆಯಲ್ಲಿ ಶನಿವಾರದಂದು ಶ್ರೀ ಬನಶಂಕರಿದೇವಿ ಸಮುದಾಯ ಭವನದ ನೂತನ ಕಟ್ಟಡದ ಉದ್ಘಾಟನಾ ಸಮಾರಂಭÀವನ್ನು ಕಾಂಗ್ರೆಸ್ ಮುಖಂಡ ಪ್ರದೀಪ ಪಟ್ಟಣ ಉದ್ಘಾಟಿಸಿ ಮಾತನಾಡಿದರು. ನಮ್ಮ ತಂದೆ ತಾಯಿ ಶಾಸಕರಿದ್ದ ಕಾಲದಿಂದಲೂ ನೇಕಾರರು ನಮಗೆ ಬೆಂಬಲಿಸಿದ್ದಾರೆ. ನಿಮ್ಮ ಋಣ ತೀರಿಸಲು ನಾವು ಸದಾಸಿದ್ದ ಎಂದು ಹೇಳಿದರು. ಈ ವೇಳೆ ಹಂಪಿ ಹೇಮಕೂಟ ಮಹಾಸಂಸ್ಥಾನ ಶ್ರೀಗಾಯತ್ರಿ ಪೀಠದ ಪೀಠಾಧಿಪತಿ ಶ್ರೀ ದಯಾನಂದಪುರಿ ಸ್ವಾಮೀಜಿ ಮಾತನಾಡಿ ನೇಕಾರರು ಕೇವಲ ಬಟ್ಟೆ ನೇಯ್ಗೆ ಕಾಯಕ ಮಾಡುವುದು ಅಷ್ಟೇ…
