ಪುರಸಭೆಯಿಂದ ಹಮ್ಮಿಕೊಂಡ ಬೀದಿಬದಿ ವ್ಯಾಪಾರಿಗಳ ಉಚಿತ ಆರೋಗ್ಯ ಶಿಬಿರ.
ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಪುರಸಭೆಯಿಂದ ಹಮ್ಮಿಕೊಂಡ ಬೀದಿಬದಿ ವ್ಯಾಪಾರಿಗಳ ಉಚಿತ ಆರೋಗ್ಯ ಶಿಬಿರ ಕಾರ್ಯಕ್ರಮವನ್ನು ಅಂಭಾಭವಾನಿ ಕಲ್ಯಾಣ ಮಂಟಪದಲ್ಲಿ ಜರಗಿತು. ಈ ಸಂದರ್ಭದಲ್ಲಿ ಪುರಸಭೆಯ ಸಮುದಾಯ ಸಂಘಟನಾ ಅಧಿಕಾರಿ ಗೀತಾ ಬೆಳಗಲಿ ಮಾತನಾಡಿದ ಅವರು ಬೀದಿ ಬದಿ ವ್ಯಾಪಾರಿಗಳಿಗೆ ಪಿ.ಎಂ. ಸ್ವನಿಧಿ ಯೋಜನೆುಂದ 50 ಸಾವಿರ ರೂ. ವರಗೆ ಸಾಲ ಸೌಲಭ್ಯಗಳಿದ್ದು, ಪಿ.ಎಂ ಸ್ವನಿಧಿ ಯೋಜನೆ ಅಡಿಯಲ್ಲಿ ಮೊದಲನೇ ಹಂತದಲ್ಲಿ 10 ಸಾವಿರ ವ್ಯಾಪಾರ ಸಾಲ ನೀಡಲಾಗುತ್ತಿದೆ. ಅದನ್ನು ಸಕಾಲದಲ್ಲಿ ಭರಣಾ ಮಾಡಿದರೆ 2ನೇ ಹಂತದಲ್ಲಿ…
