BREAKING NEWS

ಬೆನಕನಹಳ್ಳಿ ಡೊಂಬರ ಕಾಲನಿಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಭೇಟಿ

ಬೆಳಗಾವಿ ಹಿಂಡಲಗಾ ರಸ್ತೆಯಲ್ಲಿರುವ ಬೆನಕನಹಳ್ಳಿ ಗ್ರಾಮ ಪಂಚಾಯತಿಯ ವ್ಯಾಪ್ತಿಗೆ ಒಳಪಡುವ ಡೊಂಬರ ಕಾಲೋನಿಗೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು, ಅಲ್ಲಿನ ಅವ್ಯವಸ್ಥೆಯ ಕುರಿತು ಅಸಮಾಧಾನ‌ ವ್ಯಕ್ತಪಡಿಸಿದರು. ಮೂಲಭೂತ ಸೌಕರ್ಯಗಳಿಂದ ವಂಚಿತಗೊಂಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದರು ಡೊಂಬರ ಕಾಲನಿಯ ಜನರಿಗೆ ಕೂಡಲೇ ಸೌಕರ್ಯಗಳನ್ನು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ದಿನನಿತ್ಯ ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸಬೇಕು; ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕನ್ನಡ ಮಾಧ್ಯಮ ಶಾಲೆಯನ್ನು ತೆರೆಯಲು ಕ್ರಮ ಕೈಗೊಳ್ಳಬೇಕು ಎಂದು…

Read More

ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ಮಹಿಳಾ‌ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ‌ಚೌಧರಿ ಭೇಟಿ

ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಶುದ್ಧ ಕುಡಿಯುವ ನೀರು, ಬೀದಿದೀಪ ವ್ಯವಸ್ಥೆಯನ್ನು ತಕ್ಷಣವೇ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಡಾ.ನಾಗಲಕ್ಷ್ಮೀ ಚೌಧರಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಬೆಳಗಾವಿಯ ಜಿಲ್ಲಾ ಆಸ್ಪತ್ರೆ ಹಾಗೂ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್)ಗೆ ಮಂಗಳವಾರ ಭೇಟಿ ನೀಡಿದ ಅವರು, ಮೂಲಸೌಕರ್ಯಗಳನ್ನು ಪರಿಶೀಲಿಸಿದರು. ಶುದ್ಧ ಕುಡಿಯುವ ನೀರು, ಬೀದಿದೀಪ ವ್ಯವಸ್ಥೆಯನ್ನು ಸರಿಪಡಿಸಬೇಕು; ಹೊರ ರೋಗಿಗಳ ವಿಭಾಗದಲ್ಲಿ ಶೌಚಾಲಯ ವ್ಯವಸ್ಥೆ ಒದಗಿಸಬೇಕು; ಕರ್ತವ್ಯನಿರತ ವೈದ್ಯರಿಗೆ ಸುಸಜ್ಜಿತ…

Read More

ಜೆಎನ್ಎಂಸಿ ವಿದ್ಯಾರ್ಥಿನಿಯರ ಜತೆ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸಂವಾದ

ಬೆಳಗಾವಿ ಕೆ.ಎಲ್‌.ಇ. ಸಂಸ್ಥೆಯ ಜವಾಹರಲಾಲ್ ನೆಹರೂ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಮಂಗಳವಾರ ಭೇಟಿ ನೀಡಿದ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಅವರು, ಮಹಿಳೆಯರ ಸಮಸ್ಯೆಗಳು ಮತ್ತು ಅವುಗಳನ್ನು ಎದುರಿಸುವ ವಿಧಾನಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿನಿಯರು ಹಾಗೂ ಮಹಿಳಾ ಬೋಧಕಿಯರಿಗೆ ಕರ್ತವ್ಯ ನಿರ್ವಹಿಸುವಾಗ ಎದುರಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಿದ ಅವರು, ಲೈಂಗಿಕ ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗಳು ಎದುರಾದರೆ ತಕ್ಷಣವೇ ಪೊಲೀಸ್ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಬೇಕು.ಒಂದು ವೇಳೆ ಸ್ಥಳೀಯವಾಗಿ…

Read More

ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ತಾಲೂಕು ಘಟಕದ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು.

ರಾಮದುರ್ಗ ಭಾರತೀಯ ಕಿಸಾನ ಸಂಘ ಕರ್ನಾಟಕ ಪ್ರದೇಶ ಉತ್ತರ ಪ್ರಾಂತದ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಜರುಗಿತು.ನೂತನ ಅಧ್ಯಕ್ಷರಾಗಿ ಹಲಗತ್ತಿ ಗ್ರಾಮದ ಸುರೇಶ ನಂದೆಪ್ಪನವರ, ಉಪಾಧ್ಯಕ್ಷರಾಗಿ ರಮೇಶ ಉಳ್ಳಾಗಡ್ಡಿ ಮತ್ತು ಶಿವನಗೌಡ ಕುಲಕರ್ಣಿ, ಕಾರ್ಯದರ್ಶಿ ಈರಣ್ಣ ನಿಜಗುಲಿ, ಸಹ ಕಾರ್ಯದರ್ಶಿಯಾಗಿ ಪವನಕುಮಾರ ಅಂಗಡಿ ಮತ್ತು ಶಿವಾನಂದ ಚಿಕ್ಕನಗೌಡ್ರ, ಯುವ ಪ್ರಮುಖ ಸಿದ್ದು ಹಂಪಿಹೋಳಿ, ಸದಸ್ಯರಾಗಿ ಬಸವರಾಜ ಹದ್ಲಿ, ಆನಂದ ಪೂಜಾರ, ನಿಂಗಪ್ಪ ಗುದಗಿ, ಬಸಪ್ಪ ಕಿತ್ತೂರ, ವೀರಭದ್ರ ಗಾಣಗಿ, ಶಿವನಗೌಡ ಲಕ್ಕನಗೌಡ್ರ, ಬಸವಂತ ಜಗಾಪೂರ ಆಯ್ಕೆಯಾಗಿದ್ದಾರೆ.ಭಾರತೀಯ…

Read More

ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಜೋಡಿಸುವಂತೆ ಒತ್ತಾಯಿಸಿ ನ್ಯಾಷನಲ್ ಹ್ಯೂಮನ್ ರೈಟ್ಸ ಸಂಸ್ಥೆಯ ನೇತೃತ್ವದಲ್ಲಿ ಸಂಸದ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಜೋಡಿಸುವಂತೆ ಒತ್ತಾಯಿಸಿ ನ್ಯಾಷನಲ್ ಹ್ಯೂಮನ್ ರೈಟ್ಸ ಸಂಸ್ಥೆಯ ನೇತೃತ್ವದಲ್ಲಿ ಸಾರ್ವಜನಿಕರು ಸಂಸದರಿಗೆ ಹಾಗೂ ತಹಶೀಲ್ದಾರರ ಮೂಲಕ ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಜ್ಯಾಧ್ಯಕ್ಷ ಬಿ.ಯು. ಭೈರಕದಾರ ಮಾತನಾಡಿ, ಕಳೆದ ೧೫ ವರ್ಷಗಳಿಂದ ನ್ಯಾಷನಲ್ ಹ್ಯೂಮನ್ ರೈಟ್ಸ್ ರಾಮದುರ್ಗ ವತಿಯಿಂದ ರಾಮದುರ್ಗಕ್ಕೆ ಹೊಸ ರೈಲು ಮಾರ್ಗ ಬೇಡಿಕೆಗಾಗಿ ಸಾಕಷ್ಟು ಬಾರಿ ಹೋರಾಟಗಳನ್ನು ಮಾಡಿ ರೈಲ್ವೆ ಸಚಿವರಿಗೆ, ಜಿಲ್ಲಾಧಿಕಾರಿಗಳಿಂದ ಸಂಬAಧ ಪಟ್ಟ ಅಧಿಕಾರಿಗಳಿಗೆ ಮತ್ತು ಶಾಸಕರುಗಳಿಗೆ…

Read More

ಶಿವಪೇಠ ಗ್ರಾಮವನ್ನು ದತ್ತು ಪಡೆದು ಮೂಲ ಸೌಕರ್ಯ ಕಲ್ಪಿಸುವಂತೆ ಸಂಸದ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಶಿವಪೇಠ ಗ್ರಾಮವನ್ನು ದತ್ತು ಪಡೆದು ಮೂಲಭೂತ ಸೌಲಭ್ಯ ಕಲ್ಪಿಸುವಂತೆ ಒತ್ತಾಯಿಸಿ ಶಿವಪೇಠ ಗ್ರಾಮದ ಸಾರ್ವಜನಿಕರು ಸಂಸದ ಹಾಗೂ ಮಾಜಿ ಸಿಎಂ ಜಗದೀಶ ಶೆಟ್ಟರ ಅವರಿಗೆ ಮನವಿ ಸಲ್ಲಿಸಿದರು.ಖಾಸಗಿ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಸಂಸದರನ್ನು ಭೇಟಿ ಮಾಡಿದ ಶಿವಪೇಠ ಗ್ರಾಮಸ್ಥರು ಅವರನ್ನು ಸನ್ಮಾನಿಸಿ ಅವರಿಗೆ ಮನವಿ ಸಲ್ಲಿಸುವ ಮೂಲಕ ಚರಂಡಿ ಹಾಗೂ ರಸ್ತೆ ನಿರ್ಮಾಣ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸುವಂತೆ ವಿನಂತಿಸಿದರು.ಶಿವಪೇಠ ಗ್ರಾಮವು ಕಳೆದ ೫೫ ವಷÀðಗಳಿಂದ ಗ್ರಾಮ ಸ್ಥಳಾಂತರ ಗೊಂಡಾಗಿನಿAದ ಇದುವರೆಗೂ…

Read More

ಶ್ರೀ ಎಚ್ಚರೇಶ್ವರ ದೇವರ ರಥೋತ್ಸವ ಭಕ್ತರ ಸಂಭ್ರಮದ ಮಧ್ಯೆ ವಿಜೃಂಭಣೆಯಿಂದ ಜರುಗಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಕುದರೆ ಬಯಲು ಮೈದಾನದಲ್ಲಿರುವ ಶ್ರೀ ಎಚ್ಚರೇಶ್ವರ ದೇವರ ರಥೋತ್ಸವ ಭಕ್ತರ ಸಂಭ್ರಮದ ಮಧ್ಯೆ ವಿಜೃಂಭಣೆಯಿAದ ಜರುಗಿತು.ಹಿಂದೂ ಮುಸ್ಲಿಂ ಸಮುದಾಯದವರು ಸೌಹಾರ್ಧತೆಯಿಂದ ಆಚರಿಸುತ್ತ ಬಂದಿರುವ ಎಚ್ಚರೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಪ್ರತಿ ವರ್ಷ ನೂಲು ಹುಣ್ಣಿಮೆ ದಿವಸ ಜರುಗುತ್ತದೆ.ಭಕ್ತರು ಎಚ್ಚರೇಶ್ಚರ ದೇವರ ದರ್ಶನ ಹಾಗೂ ರಥೋತ್ಸವದಲ್ಲಿ ಪಾಲ್ಗೊಂಡರು. ಈ ವೇಳೆ ರಥೋತ್ಸವದಲ್ಲಿ ಕರಡಿ ಮಜಲು ಹಾಗೂ ವಾದ್ಯಮೇಳಗಳು ಉತ್ಸವದ ಕಳೆ ಹೆಚ್ಚಿಸಿದರು.

Read More

ಸೋಪ್ಪಡ್ಲ ಗ್ರಾಮದಲ್ಲಿ ಶ್ರೀ ಶರಣ ನೂಲಿ ಚಂದಯ್ಯನವರ 917 ನೇ ಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಸೋಪ್ಪಡ್ಲ ಗ್ರಾಮದಲ್ಲಿ ಶ್ರೀ ಶರಣ ನೂಲಿ ಚಂದಯ್ಯನವರ 917 ನೇ ಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು.ಈ ಸಂದರ್ಭದಲ್ಲಿ ರಾಮಚಂದ್ರಪ್ಪ ಭಜಂತ್ರಿ, ಫಕೀರಪ್ಪ ಭಜಂತ್ರಿ, ಕಳ್ಳೆಪ್ಪ ಭಜಂತ್ರಿ, ಪರಸಪ್ಪ ಭಜಂತ್ರಿ, ಮಾರುತಿ ಭಜಂತ್ರಿ, ರಂಗಪ್ಪ ಭಜಂತ್ರಿ, ಹನಮಂತ ಭಜಂತ್ರಿ, ಬಸು ಭಜಂತ್ರಿ, ಹನಮಂತ ಕಳ್ಳೆಪ್ಪ ಭಜಂತ್ರಿ, ಮಾರುತಿ ಭೀಮಪ್ಪ ಭಜಂತ್ರಿ, ಬಸಪ್ಪ ಭಜಂತ್ರಿ, ಸಿದ್ದಪ್ಪ ಭಜಂತ್ರಿ, ಹನಮಂತ ರಾಮಚಂದ್ರ ಭಜಂತ್ರಿ, ಮಾರುತಿ ಹನಮಂತ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Read More

ಮುಖ್ಯಮಂತ್ರಿಗಳಿಗೆ ಪ್ರಾಶಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲ ಕ್ರಮವನ್ನು ಖಂಡಿಸಿ ವಿವಿದ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟçಪತಿಯವರಿಗೆ ಮನವಿ ಸಲ್ಲಿಸಲಾಯಿತು.

ಬೆಳಗಾವಿ ಜಿಲ್ಲೆ ರಾಮದುರ್ಗ ಆರ್.ಟಿ.ಅಯ್. ಕಾರ್ಯಕರ್ತನ ಮನವಿ ಮೇರೆಗೆ ಅದನ್ನು ತನಿಖೆ ನಡೆಸದೆ ಮುಖ್ಯಮಂತ್ರಿಗಳಿಗೆ ದಿಢೀರಗಾಗಿ ಶೋಕಾಸ್ ನೋಟಿಸ್ ಕೊಟ್ಟ, ಪ್ರಾಶಿಕ್ಯೂಶನ್ ಗೆ ಅನುಮತಿ ನೀಡಿದ ರಾಜ್ಯಪಾಲ ಥಾವರಚಂದ ಗೆಹೆಲೊಟ ಇವರ ನೀತಿಯನ್ನು ಖಂಡಿಸಿ ವಿವಿದ ಸಂಘಟನೆಗಳ ವೇದಿಕೆ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ವೃತ್ತದಿಂದ ಪ್ರತಿಭಟನೆ ನಡೆಸಿ ತಹಶೀಲ್ದಾರ ಮೂಲಕ ರಾಷ್ಟçಪತಿಯವರಿಗೆ ಮನವಿ ಅರ್ಪಿಸಲಾಯಿತು.ಸಿ.ಪಿ.ಎಂ. ಪಕ್ಷದ ಮುಖಂಡ ಜಿ.ಎಒ. ಜೈನೆಖಾನ್ ಮಾತನಾಡಿ, ಒಂದು ಚುನಾಯಿತ ಸರ್ಕಾರವನ್ನು ಮೂಡಾ ಹಗರಣವನ್ನು ಮುಂದಿಟ್ಟುಕೊAಡು ಅಸ್ತಿರಗೊಳಿಸುವುದು ಸಂವಿಧಾನ ಪ್ರಜಾಪ್ರಬುತ್ವ ವಿರೋಧಿ ಕೆಲಸವಾಗಿದೆ….

Read More

ಸ್ಟೇಟ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು

ಬೆಳಗಾವಿ ಜಿಲ್ಲೆ ರಾಮದುರ್ಗ ಪಟ್ಟಣದ ಸ್ಟೇಟ್ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ರಕ್ಷಾಬಂಧನ ಕಾರ್ಯಕ್ರಮ ಆಚರಿಸಲಾಯಿತು. ಪ್ರಾಚಾರ್ಯ ಎಸ್.ಎಸ್. ಬೂದೇಶ್ವರ ಮಾತನಾಡಿ, ಸೋದರತ್ವದ ಬಾಂಧವ್ಯ ಬೆಳೆಸುವ ಈ ಪವಿತ್ರ ಹಬ್ಬವನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಸೋದರತ್ವದ ಭಾವನೆಗಳನ್ನು ಬೆಳೆಸುವದರ ಜೊತೆಗೆ ನಮ್ಮ ಹಬ್ಬಗಳ ಪಾವಿತ್ರಯತೆಯನ್ನು ತಿಳಿಸುವುದು ಇಂದಿನ ಅಗತ್ಯತೆಯಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಧ್ಯಾಪಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Read More