BREAKING NEWS

ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ರಿಲ್ಸಗೆ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಚಾಮರಾಜನಗರ ಪತ್ನಿ ಮಾಡಿದ ಕರಿಮಣಿ ಮಾಲೀಕ ನೀನಲ್ಲ ರಿಲ್ಸಗೆ ನೊಂದ ಪತಿ ಜಮೀನಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಪಿ.ಜಿ.ಪಾಳ್ಯ ಗ್ರಾಮದಲ್ಲಿ ನಡೆದಿದೆ. ಪಿ.ಜಿ.ಪಾಳ್ಯ ಗ್ರಾಮದ ಕುಮಾರ್ (33) ಮೃತ ದುರ್ದೈವಿ. ಮೃತ ಕುಮಾರ್ ನ ಸೋದರ ಮಹಾದೇವಸ್ವಾಮಿ ಮೃತ ಕುಮಾರ್ ಪತ್ನಿ ರೂಪಾ, ರೂಪಾಳ ಸೋದರ ಮಾವ ಗೋವಿಂದ ವಿರುದ್ಧ ದೂರು ದಾಖಲಾಗಿದೆ. ಸೋದರ ಮಾವ ಹಾಗೂ ಸಹೋದರಿ ಜೊತೆ ಸೇರಿ ಕರಿಮಣಿ ಮಾಲೀಕ ನೀನಲ್ಲ ಎಂಬ ಹಾಡಿಗೆ…

Read More

ಆಭರಣ ಪ್ರದರ್ಶನಕ್ಕೆ ಚಿತ್ರನಟಿ ನಿಶ್ಚಿಕಾ ನಾಯ್ಡು ಚಾಲನೆ ನೀಡಿದರು.

ಬೆಂಗಳೂರು ನಗರದ ಶೆರಟನ್‌ ಹೋಟೆಲ್‌ ನಲ್ಲಿ ಇಂದಿನಿಂದ ಫೆ. 18 ರವರೆಗೆ ನಡೆಯಲಿರುವ ವೈಭವದ “ದಿ ಜ್ಯುವೆಲರಿ ಷೋ” ಆಭರಣ ಮೇಳಕ್ಕೆ ಅದ್ದೂರಿ ಚಾಲನೆ ದೊರೆತಿದೆ. ದೇಶದ 40 ಪ್ರಮುಖ, ಪ್ರಶಸ್ತಿ ವಿಜೇತ ಹಾಗೂ ಹೆಸರಾಂತ ಆಭರಣ ತಯಾರಕರು ಭಾಗವಹಿಸಿರುವ ಆಭರಣ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಬಂಗಾರ ಖರೀದಿಗೆ ಉಜ್ವಲ ಅವಕಾಶವಿದೆ. ವಿನ್ಯಾಸ, ಗುಣಮಟ್ಟದ ಆಭರಣಗಳನ್ನು ಕೈಗೆಟುವ ಬೆಲೆಯಲ್ಲಿ ಖರೀದಿಸಲು ಇದು ಸದಾವಕಾಶವಾಗಿದೆ. ಆಭರಣ ಪ್ರದರ್ಶನಕ್ಕೆ ಚಿತ್ರನಟಿ ನಿಶ್ಚಿಕಾ ನಾಯ್ಡು ಚಾಲನೆ ನೀಡಿದರು. ಸಾಮಾಜಿಕ ಉದ್ದಿಮೆದಾರರಾದ…

Read More

Karnataka Budget 2024: ಇದು ಪರಿಪೂರ್ಣ ದೃಷ್ಟಿಯ ಬಜೆಟ್: ಸಚಿವ ಎಂ ಬಿ ಪಾಟೀಲ ಮೆಚ್ಚುಗೆ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿರುವ ಬಜೆಟ್ ಸಾಮಾಜಿಕ ನ್ಯಾಯ, ಆರ್ಥಿಕ ಅಭಿವೃದ್ಧಿ, ಕೈಗಾರಿಕಾ ಬೆಳವಣಿಗೆ ಮತ್ತು ಪ್ರಾದೇಶಿಕ ತಾರತಮ್ಯ ನಿವಾರಣೆಯ ಹೆಗ್ಗುರಿಗಳನ್ನುಳ್ಳ ಪರಿಪೂರ್ಣ ದೃಷ್ಟಿಯ ಜನಪ್ರಿಯ ಬಜೆಟ್ ಆಗಿದೆ ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಹೇಳಿದ್ದಾರೆ. ಅದರಲ್ಲೂ ನಮ್ಮ ತವರು ಜಿಲ್ಲೆಯಾದ ವಿಜಯಪುರದ ಆಲಮೇಲದಲ್ಲಿ ತೋಟಗಾರಿಕೆ ಕಾಲೇಜು, ಇಟ್ಟಂಗಿಹಾಳದ ಬಳಿ ಆಹಾರ ಪಾರ್ಕ್ ಮತ್ತು ಆಲಮಟ್ಟಿಯಲ್ಲಿ ಒಳನಾಡು ಮೀನುಗಾರಿಕೆ ಕೌಶಲ್ಯಾಭಿವೃದ್ಧಿ ಕೇಂದ್ರವನ್ನು ಘೋಷಿಸಿರುವುದಕ್ಕೆ ಜಿಲ್ಲೆಯ ಜನತೆಯ ಪರವಾಗಿ ಧನ್ಯವಾದ ಸಮರ್ಪಿಸುತ್ತೇನೆ…

Read More

ಪೌರಕಾರ್ಮಿಕರಿಗೆ ಪಿಎಫ್ ಬಾಕಿ ಪಾವತಿಸಲು ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಆದೇಶ.

ಬೆಂಗಳೂರು : ಪೌರಕಾರ್ಮಿಕರಿಗೆ 2011 ರ ಜನವರಿಯಿಂದ 2017 ರ ಜುಲೈ ನಡುವಣ ಅವಧಿಯಲ್ಲಿ ನೀಡಬೇಕಿದ್ದ 90,18,89,719 ಭವಿಷ್ಯ ನಿಧಿ (PF) ಬಾಕಿಯನ್ನು ಎಂಟು ವಾರಗಳಲ್ಲಿ ಪಾವತಿಸುವಂತೆ ಬಿಬಿಎಂಪಿಗೆ ಕರ್ನಾಟಕ ಹೈಕೋರ್ಟ್ ಸೂಚನೆ ನೀಡಿದೆ. ಬಿಬಿಎಂಪಿ ಪೌರಕಾರ್ಮಿಕರ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಭಾಗಶಃ ಪುರಸ್ಕರಿಸಿ ನ್ಯಾಯಮೂರ್ತಿ ಕೆಎಸ್ ಹೇಮಲೇಖಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಉದ್ಯೋಗದಾತರ ಭವಿಷ್ಯ ನಿಧಿ ಮತ್ತು ವಿವಿಧ ನಿಬಂಧನೆಗಳ ಕಾಯಿದೆ, 1952 ರ ಸೆಕ್ಷನ್ 7A ಗೆ ಅನುಗುಣವಾಗಿ ಶೇ 12 ದರದಲ್ಲಿ…

Read More

ವಿಧಾನಸಭೆಯಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಅಂಗೀಕಾರ

ಬೆಂಗಳೂರು, ಫೆ.15: ವಿಧಾನಮಂಡಲ ಬಜೆಟ್ ಅಧಿವೇಶನದ ಐದನೇ ದಿನವಾದ ಇಂದೂ ಕೂಡ ಸದನದಲ್ಲಿ ಕಲಾಪ ಮುಂದುವರೆದಿದೆ. ಹಲವು ವಿಚಾರಗಳ ಬಗ್ಗೆ ವಿಪಕ್ಷ ಹಾಗೂ ಪ್ರತಿಪಕ್ಷ ನಡುವೆ ಆರೋಪ ಪ್ರತ್ಯಾರೋಪಕ್ಕೆ ಸದನ ಸಾಕ್ಷಿಯಾಗಿದೆ. ಸದ್ಯ ವಿಧಾನಸಭೆ ಕಲಾಪದಲ್ಲಿ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ (ತಿದ್ದುಪಡಿ) ವಿಧೇಯಕ ಅಂಗೀಕಾರವಾಗಿದೆ. ಸುಗ್ರೀವಾಜ್ಞೆಯನ್ನು (Kannada signage ordinance) ರಾಜ್ಯಪಾಲರು ವಾಪಸಾತಿ ಮಾಡಿ ಸದನದಲ್ಲಿ ವಿಧೇಯಕ ಮಂಡಿಸುವಂತೆ ಸೂಚಿಸಿದ್ದ ಹಿನ್ನೆಲೆಯಲ್ಲಿ ವಿಧೇಯಕ ಮಂಡಿಸಿ ಸರ್ಕಾರ ಅಂಗೀಕಾರ ಪಡೆದಿದೆ. ಅಂಗಡಿ-ಮುಂಗಟ್ಟುಗಳ ಮುಂದೆ ಸೂಚನಾ ಫಲಕಗಳಲ್ಲಿ ಶೇ…

Read More

ರಥ ಸಪ್ತಮಿ : ಪೂಜೆ ವಿಧಾನ, ಶುಭ ಮುಹೂರ್ತ, ಮಹತ್ವ ಮತ್ತು ಪ್ರಯೋಜನ..!

‌ಇದೇ ಶುಕ್ರವಾರ 2024 ಫೆಬ್ರವರಿ 16ರಂದು ರಥ ಸಪ್ತಮೀ. ‌ಮಾಘ ಮಾಸ ವಿಶೇಷ ಪೌರಾಣಿಕ ಮಹತ್ವವನ್ನು ಹೊಂದಿದೆ. ಪೂಜೆ ಮತ್ತು ದಾನದ ದೃಷ್ಟಿಕೋನದಿಂದ ವಿಶೇಷ ಮಹತ್ವವನ್ನು ಹೊಂದಿರುವ ಅನೇಕ ಶುಭ ದಿನಗಳು ಈ ತಿಂಗಳಲ್ಲಿವೆ. ಅದೇ ಅನುಕ್ರಮದಲ್ಲಿ, ವಸಂತ ಪಂಚಮಿ ಮೊದಲು ಮತ್ತು ನಂತರ ಬರುವ ಅಚಲ ಸಪ್ತಮಿ ತಿಥಿಯನ್ನು ಧಾರ್ಮಿಕ ದೃಷ್ಟಿಯಿಂದ ಬಹಳ ವಿಶೇಷವೆಂದು ಪರಿಗಣಿಸಲಾಗುತ್ತದೆ. ಅಚಲಾ ಸಪ್ತಮಿಯನ್ನು ಕೆಲವು ಸ್ಥಳಗಳಲ್ಲಿ ರಥ ಸಪ್ತಮಿ, ಮಾಘ ಸಪ್ತಮಿ ಎಂದು ಆಚರಿಸಲಾಗುತ್ತದೆ.​ಪುರಾಣಗಳಲ್ಲಿ ರಥ ಸಪ್ತಮಿ ಮಾಘ ಮಾಸದ…

Read More

ಆಶಾ ಕಾರ್ಯಕರ್ತರಿಗೆ ಗೌರವಧನ ಹೆಚ್ಚಳ

ಬೆಂಗಳೂರು : ರಾಜ್ಯ ಸರ್ಕಾರವು ಆಶಾ ಕಾರ್ಯಕರ್ತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಗೌರವಧನ 7 ಸಾವಿರ ರೂ. ಗೆ ಹೆಚ್ಚಳ ಮಾಡಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ. ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸಿದ್ದು ಇಂದು ಅವರನ್ನು ಖುದ್ದಾಗಿ ಭೇಟಿ ಮಾಡಿ ಅಹವಾಲು ಸ್ವೀಕರಿಸಿ ಮಾತನಾಡಿದ ಸಚಿವ ದಿನೇಶ್‌ ಗುಂಡೂರಾವ್‌ ಅವರು, ಶೀಘ್ರದಲ್ಲೇ ರಾಜ್ಯದ ಆಶಾ ಕಾರ್ಯಕರ್ತೆಯರ ನ್ಯಾಯಸಮ್ಮತವಾದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಪರಿಶೀಲನೆ…

Read More

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು ಮತ್ತು ಕಾಳಜಿಯ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಗೆ ರೈತ ಮುಖಂಡರು ಮತ್ತು ರೈತ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.‌

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸು ಮತ್ತು ಕಾಳಜಿಯ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಗೆ ರೈತ ಮುಖಂಡರು ಮತ್ತು ರೈತ ಪ್ರತಿನಿಧಿಗಳು ಅಭಿನಂದನೆ ಸಲ್ಲಿಸಿದರು.‌ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಬಜೆಟ್ ಪೂರ್ವ ರೈತ ಮುಖಂಡರು ಮತ್ತು ರೈತ ಹೋರಾಟಗಾರರ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಯಶಸ್ವೀ ಜಾರಿಯ ಬಗ್ಗೆ ಅಪಾರ ಮೆಚ್ಚುಗೆ ಸೂಚಿಸಿ ಮುಖ್ಯಮಂತ್ರಿಗಳಿಗೆ ಅಭಿನಂದಿಸಿದರು. ರೈತ ಮಹಿಳೆಯರ ಮತ್ತು ರೈತ ಕುಟುಂಬಗಳ ಆರ್ಥಿಕ ಶಕ್ತಿ-ಚೈತನ್ಯವನ್ನು ಗ್ಯಾರಂಟಿ ಯೋಜನೆಗಳು ಹೆಚ್ಚಿಸಿರುವುದನ್ನು ವಿವರಿಸಿದ ಬಡಗಲಾಪುರ…

Read More

ವಿದ್ಯಾರ್ಥಿಗಳಿಂದಲೇ ಕಲಿಯುವದು ಶಿಕ್ಷಕನಾದವನಿಗೆ ಬಹಳ ಇದೆ : ಮಾಗಳದ

ಕೊಪ್ಪಳ : ಪ್ರತಿ ಶಿಕ್ಷಕ ಒಬ್ಬ ವಿದ್ಯಾರ್ಥಿಯೂ ಹೌದು, ಆತ ಕಲಿಸುವದರೊಂದಿಗೆ ಮತ್ತೆ ಮತ್ತೆ ಕಲಿಯುತ್ತಾನೆ ಹಾಗೂ ಕಲಿಯಬೇಕು, ವಿದ್ಯಾರ್ಥಿಗಳಿಂದಲೇ ಶಿಕ್ಷಕ ಕಲಿಯುವದು ಬಹಳ ಇದೆ ಎಂದು ನಿವೃತ್ತ ಶಿಕ್ಷಕ ಟಿ. ವಿ, ಮಾಗಳದ ಹೇಳಿದರು.ಅವರು ನಗರದ ಶ್ರೀ ಗವಿಸಿದ್ಧೇಶ್ವರ ಪ್ರೌಢ ಶಾಲೆಯ ೧೯೮೨ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರುವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಗುರುವಂದನೆ ಸ್ವೀಕರಿಸಿ ಮಾತನಾಡಿದರು.ಅಂದು ತಾವು ಶಿಕ್ಷಕರಾಗಿ ಬಂದ ವೇಳೆಗೆ ತಮ್ಮ ಜೊತೆಗೆ ಈಗ ವೇದಿಕೆ ಹಂಚಿಕೊಂಡ ಶಿಕ್ಷಕರಾಗಿದ್ದವರು ಹಾಗಾಗಿ ಅವರನ್ನು…

Read More

ಸರ್ಕಾರ ಇಡು ಗಂಟು ಸಾವಿರ ಕೋಟಿ ಸಾಹಿತ್ಯ ಪರಿಷತ್ತಿಗೆ ಕೊಡಲು ಮನವಿ

ಕನ್ನಡ ಸಾಹಿತ್ಯ ಪರಿಷತ್ತಿಗೆ ಕರ್ನಾಟಕ ರಾಜ್ಯ ಸರ್ಕಾರ ಇಡು ಗಂಟು ಎಂದು ಒಂದು ಸಾವಿರ ಕೋಟಿ ರೂಪಾಯಿ ನೀಡಿ ಆರ್ಥಿಕವಾಗಿ ಭದ್ರ ಸ್ವಾವಲಂಭಿ ಪರಿಷತ್ತು ಸ್ವಾಭಿಮಾನಿಯಾಗುವಂತೆ ಮಾಡಬೇಕೆಂದು ಸಾಹಿತಿ ಜೆ ಎಮ್ ರಾಜಶೇಖರ ಮನವಿಸಿಕೊಂಡು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ನಂತರ ಸರ್ಕಾರದ ಆರ್ಥಿಕ ಸೌಲಭ್ಯವನ್ನು ಪ್ರತಿ ವರ್ಷ ಕೊಡುವುದನ್ನು ಸ್ಥಗಿತ ಮಾಡಬಹುದು. ಇಡು ಗಂಟು ಒಂದು ಸಾವಿರ ಕೋಟಿ ರೂಪಾಯಿ ರಾಷ್ಟ್ರೀಯ ಬ್ಯಾಂಕಿನಲ್ಲಿರಿಸಿ ಬರುವ ಬಡ್ಡಿಯಿಂದ ಪರಿಷತ್ತಿನ ಆಡಳಿತ ಮತ್ತು ಸಾಹಿತ್ಯಕ ಕಾರ್ಯಕ್ರಮಗಳನ್ನು ಮಾಡಲು ಮುಕ್ತ…

Read More